ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು..
First Published | Aug 2, 2022, 6:38 AM ISTಇಂದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ನಾಗರ ಪಂಚಮಿ ಹಬ್ಬ. ಎಲ್ಲೆಡೆ ಸಂಭ್ರಮ ಸಡಗರ ತುಂಬಿರುವುದನ್ನು ಕಾಣಬಹುದು. ಈ ದಿನ ಹಾವುಗಳನ್ನು ಪೂಜಿಸಲಾಗುತ್ತದೆ. ಶಿವನ ಆಭರಣವಾದ ಹಾವುಗಳು ಶಕ್ತಿ ಮತ್ತು ಸೂರ್ಯನ ಅವತಾರವಾಗಿವೆ. ಹಾವುಗಳು ಶಿವನಿಗೆ ಬಹಳ ಪ್ರಿಯವಾಗಿದ್ದು, ಶಿವನನ್ನು ಪೂಜಿಸುವ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬ ಬರುತ್ತದೆ.
ಶ್ರಾವಣ ಮಾಸದಲ್ಲಿ ಭಾರತದಲ್ಲಿ ಮಳೆಯಿಂದಾಗಿ ಹಾವುಗಳು ನೆಲದಿಂದ ಹೊರಬರುತ್ತವೆ. ಜನರು ಅವನ್ನು ದೇವರೆಂದು ಬಗೆಯುವುದರಿಂದ ಅವುಗಳಿಗೆ ಹಾನಿಯಾಗುವುದಿಲ್ಲ. ಅವಿವಾಹಿತ ಮಹಿಳೆಯರು ನಾಗರ ಪಂಚಮಿ ವ್ರತ ಮತ್ತು ಪೂಜೆ ಆಚರಿಸಿದರೆ ಉತ್ತಮ ಪತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ, ಹಾವು ಕಡಿತದಿಂದ ರಕ್ಷಣೆಯೂ ಸಿಗುತ್ತದೆ. ಆದಾಗ್ಯೂ, ಪ್ರಾರ್ಥನೆಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಯಾರಾದರೂ ನಾಗ ದೇವರನ್ನು ಪ್ರಾರ್ಥಿಸಿ ಫಲ ಪಡೆಯಬಹುದು.
ನಾಗರ ಪಂಚಮಿ ಹಬ್ಬವನ್ನು ಆಚರಿಸಿ ಮತ್ತು ಭಗವಂತನ ಆಶೀರ್ವಾದ ಪಡೆಯಿರಿ. ಈ ದಿನದಂದು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಬೆಚ್ಚಗಿನ ಶುಭಾಶಯಗಳನ್ನು ಕಳುಹಿಸಿ. ನೀವು ಇಲ್ಲಿ ಕೊಡಲಾದ ಸಂದೇಶಗಳನ್ನು WhatsApp, Instagram ಮತ್ತು Facebookನಲ್ಲಿ ಹಂಚಿಕೊಳ್ಳಬಹುದು.