ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ‌ಮಹೋತ್ಸವ: ರಾಯರ ದರ್ಶನ ಪಡೆದ ಯದುವೀರ್..!

Published : Aug 22, 2024, 07:30 AM IST

ರಾಯಚೂರು(ಆ.22):  ಮಂತ್ರಾಲಯದಲ್ಲಿ ರಾಯರ 353ನೇ ಆರಾಧನಾ ‌ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಇಂದು(ಗುರುವಾರ) ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರ ಆರಾಧನೆ ನಡೆಯುತ್ತಿದ್ದು ಬೆಳಗ್ಗೆಯಿಂದಲ್ಲೇ ಶ್ರೀಮಠದಲ್ಲಿ ವಿಶೇಷ ಪೂಜೆಗಳು ‌ಆರಂಭವಾಗಿವೆ. 

PREV
16
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ‌ಮಹೋತ್ಸವ: ರಾಯರ ದರ್ಶನ ಪಡೆದ ಯದುವೀರ್..!

ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಉತ್ಸವ ರಾಯರ ಪಾದಪೂಜೆ, ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ರಾಯರ ಬೃಂದಾವನಕ್ಕೆ ವಿವಿಧ ಹೂಗಳಿಂದ ವಿಶೇಷ ಅಲಂಕಾರ ಸೇವೆ ಮಾಡಲಾಗಿದೆ. 

26

ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಮೂಲರಾಮದೇವರ ಪೂಜೆ ಮಾಡಿದ್ದಾರೆ.  ಶ್ರೀ ಮಠದ ಎಲ್ಲಾ ಬೃಂದಾವನಗಳಿಗೆ ಗೂಲಾಲ್ ಸಮರ್ಪಣೆ ಮಾಡಲಾಗಿದೆ. ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶ್ರೀಮಠದ ಸಿಬ್ಬಂದಿ ವಸಂತೋತ್ಸವ ಆಚರಣೆ ಮಾಡಿದ್ದಾರೆ. ಆ ಬಳಿಕ ಗುರುರಾಯರು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠ ಶಾಲೆಗೆ ಭೇಟಿ ನೀಡಿದ್ದಾರೆ. 

36

ಶ್ರೀಮಠ ಮದ್ವದ್ವಾರ (ಮಠದ ಹೊರಭಾಗದಲ್ಲಿ) ರಾಜಬೀದಿಯಲ್ಲಿ ಮಹಾ ರಥೋತ್ಸವ ನಡೆದಿದೆ.  ರಥೋತ್ಸವ ವೇಳೆ ರಥದಲ್ಲಿ ‌ಕುಳಿತು ಶ್ರೀಗಳು ಅನುಗ್ರಹ ಸಂದೇಶ ನೀಡಿದ್ದಾರೆ.  ಶ್ರೀ ಸುಬುಧೇಂದ್ರ ತೀರ್ಥರು ಭಕ್ತರನ್ನ ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ್ದಾರೆ. ಆ ಬಳಿಕ ಹೆಲಿಕಾಪ್ಟರ್ ನಿಂದ ಶ್ರೀಗಳು ರಾಯರ ರಥೋತ್ಸವಕ್ಕೆ ಪುಷ್ಪವೃಷ್ಟಿ ಮಾಡಿದ್ದಾರೆ. 

46

ಮಂತ್ರಾಲಯಕ್ಕೆ ಮೈಸೂರು ಕೊಡಗು ಬಿಜೆಪಿ ಸಂಸದ ಯದವೀರ ಚಾಮರಾಜ ಒಡೆಯರ್ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಶ್ರೀಗಳಿಂದ ಸಂಸದ ಯದವೀರ ಚಾಮರಾಜ ಒಡೆಯರ್ ಅವರಿಗೆ ಸನ್ಮಾನಿಸಿದ್ದಾರೆ. 

56

ಇಂದು ಮೈಸೂರು ಕೊಡಗು ಬಿಜೆಪಿ ಸಂಸದ ಯದವೀರ ಚಾಮರಾಜ ಒಡೆಯರ್ ಅವರಿಗೆ ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಪ್ರಶಸ್ತಿ ನೀಡಿ ಸನ್ಮಾನ ಮಾಡಲಿದ್ದಾರೆ. 

66

ರಾಯರ ದರ್ಶನದ ಬಳಿಕ ಯದವೀರ ಚಾಮರಾಜ ಒಡೆಯರ್ ಅವರು ಶ್ರೀಮಠದ ಶಿಲಾಮಂಟಪದ ಸುವರ್ಣ ಕವಚ ಉದ್ಘಾಟಿಸಿದ್ದಾರೆ. ಶಿಲಾಮಂಟಪದ ಸುವರ್ಣ ಕವಚವನ್ನ ಬೆಂಗಳೂರು ‌ಮೂಲದ ಶಿಲ್ಪಿಗಳು ‌ಮಾಡಿದ್ದಾರೆ. 

Read more Photos on
click me!

Recommended Stories