ಆತ್ಮಗಳ ಸಂಚಾರವಿದೆ ಎನ್ನಲಾಗುವ ಜಗತ್ತಿನ 7 ಅತೀ ಭಯಾನಕ ಕಾಡುಗಳಿವು

Published : May 04, 2025, 06:52 PM ISTUpdated : May 06, 2025, 10:25 AM IST

ಜಗತ್ತಿನಾದ್ಯಂತ ಹಲವು ಅರಣ್ಯಗಳಿವೆ. ಕೆಲವು ಅರಣ್ಯಗಳು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರೆ, ಇನ್ನು ಕೆಲವು ಅರಣ್ಯಗಳು ತಮ್ಮಲ್ಲಿ ಅಡಗಿರುವ ಭಯಾನಕ ರಹಸ್ಯಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ಜಗತ್ತಿನಾದ್ಯಂತ ಇರುವ ಕೆಲವು ಭಯಾನಕ ಅರಣ್ಯಗಳ ಬಗ್ಗೆ ಮಾಹಿತಿ ಇದೆ.

PREV
17
ಆತ್ಮಗಳ ಸಂಚಾರವಿದೆ ಎನ್ನಲಾಗುವ ಜಗತ್ತಿನ 7 ಅತೀ ಭಯಾನಕ ಕಾಡುಗಳಿವು

ಟಾಲಿಮೋರ್ ಅರಣ್ಯ,ಉತ್ತರ ಐರ್ಲೆಂಡ್(Tollymore Forest—Northern Ireland):ಉತ್ತರ ಐರ್ಲೆಂಡ್‌ನ ಈ ಟಾಲಿಮೋರ್ ಅರಣ್ಯವು ತನ್ನ ಶ್ರೀಮಂತ ಇತಿಹಾಸ ಮತ್ತು ಅದ್ಭುತ ಸೌಂದರ್ಯಕ್ಕಾಗಿ ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿ  ಯಕ್ಷಯಕ್ಷಿಣಿಯರು ವಾಸಿಸುತ್ತಾರೆ ಎಂದು ಅಲ್ಲಿನ ಜಾನಪದ ಕತೆಗಳು ಹೇಳುತ್ತವೆ.

27

ನಿಧಿವನ್, ವೃಂದಾವನ, ಉತ್ತರ ಪ್ರದೇಶ(Nidhivan– Vrindavan, Uttar Pradesh): ಉತ್ತರಪ್ರದೇಶದ ವೃಂದಾವನದಲ್ಲಿರುವ ನಿಧಿವನಕ್ಕೆ ದ್ವಾಪರಯುಗದ ಹಿನ್ನೆಲೆ ಇದೆ. ಇಲ್ಲಿ ಶ್ರೀಕೃಷ್ಣ ಗೋಪಿಕೆಯರ ಜೊತೆ ಆಟವಾಡುತ್ತಿದ್ದ. ಹೀಗಾಗಿ ರಾಧೆ ಈ ಕಾಡನ್ನು ಶಪಿಸಿದ್ದರಿಂದ ಅದು ದಟ್ಟವಾದ ಕಾಡಾಗಿ ಪರಿವರ್ತನೆಯಾಯ್ತು ಎಂಬ ನಂಬಿಕೆ ಇದೆ. ಇಲ್ಲಿ ಮುಸಂಜೆಯ ವೇಳೆ ಜನರಿಗೆ ಕೊಳಲಿನ ಶಬ್ಧ ಕೇಳುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

37

ಗ್ಲೆನ್‌ಶೀ, ಸ್ಕಾಟ್ಲೆಂಡ್(Glenshee, Scotland): ಸ್ಕಾಟ್ಲೆಂಡ್‌ನಲ್ಲಿರುವ ಈ ಗ್ಲೆನ್‌ಶೀ ಅರಣ್ಯಕ್ಕೆ ಸ್ಕಾಟಿಷ್ ಗೇಲಿಕ್ ಜಾನಪದ ಕತೆಯ ಹಿನ್ನೆಲೆ ಇದೆ. ಗ್ಲೆನ್‌ಶೀ ಎಂದರೆ ಕಣಿವೆಯ ಹೆಸರಾಗಿದ್ದು, ಕಾಲ್ಪನಿಕ ಗ್ಲೆನ್ ಅಥವಾ ಕಣಿವೆ ಎಂಬ ಅರ್ಥವಿದೆ. ಸ್ಥಳೀಯ ಜಾನಪದ ನಂಬಿಕೆಯಂತೆ ಇಲ್ಲಿ  ಬೆಳದಿಂಗಳ ರಾತ್ರಿಗಳಲ್ಲಿ ಹುಲ್ಲಿನ ಬೆಟ್ಟಗಳ ಮೇಲೆ ಯಕ್ಷಯಕ್ಷಿಣಿಯರು ನೃತ್ಯ ಮಾಡುತ್ತಾರಂತೆ.

47

ಜಿಯುಝೈಗೌ ಕಣಿವೆ, ಸಿಚುವಾನ್, ಚೀನಾ(Jiuzhaigou Valley—Sichuan, China): ಚೀನಾದ ಸಿಚುವಾನ್‌ ಪ್ರದೇಶದಲ್ಲಿರುವ ಜಿಯುಝೈಗೌ ಕಣಿವೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಅದರ ವರ್ಣಮಯವಾದ ಸರೋವರಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಟಿಬೆಟಿಯನ್ ಜಾನಪದದ ಪ್ರಕಾರ ಈ ಅಮೂಲ್ಯ ಭೂಮಿಯನ್ನು ಯಕ್ಷ ಯಕ್ಷಿಣಿಯರು ಕಾಯುತ್ತಾರೆ ಎಂಬ ನಂಬಿಕೆ ಇದೆ. 

57
Hunted forest

ಖೈತ್ ಪರ್ವತ್, ಉತ್ತರಾಖಂಡ್, ಭಾರತ (Khait Parvat: Uttarakhand, India): ಉತ್ತರಾಖಂಡದಲ್ಲಿ 10,500 ಅಡಿ ಎತ್ತರದಲ್ಲಿರುವ ಈ ಖೈತ್ ಪರ್ವತ್‌ ಅರಣ್ಯವು ತನ್ನ ಮಾಂತ್ರಿಕ ಮತ್ತು ಅತೀಂದ್ರಿಯ ಶಕ್ತಿಯ ಕಾರಣಕ್ಕೆ  ಹೆಸರುವಾಸಿಯಾಗಿದೆ. ಇದು ಪರ್ವತದೊಳಗೆ ವಾಸಿಸುವ ಮತ್ತು ಹುಣ್ಣಿಮೆಯ ಸಮಯದಲ್ಲಿ ಮಾತ್ರ ಗೋಚರಿಸುವ ಆಚಾರಿಗಳು ಎಂದು ಕರೆಯಲ್ಪಡುವ ಯಕ್ಷಯಕ್ಷಿಣಿಯರ ಕತೆಯೊಂದಿಗೆ ತಳುಕು ಹಾಕಿದೆ. ಪುರಾಣ ಕತೆಗಳು ಹೇಳುವಂತೆ ಹೂ ಹಣ್ಣು ಯಾವುದೇ ಇರಲಿ ಈ ಕಾಡಿನಿಂದ ಏನನ್ನಾದರೂ ನೀವು ತೆಗೆದುಕೊಂಡರೆ ಬಂದರೆ ನೀವು ಆ ಸ್ಥಳದ ವ್ಯಾಪ್ತಿಯಿಂದ ಹೊರಬಂದ ಕ್ಷಣ ಅವು ಹಾಳಾಗಿ ಬಿಡುತ್ತವೆಯಂತೆ.

67
Hunted forest

ಭಾರತದ ಮೇಘಾಲಯದಲ್ಲಿರುವ ಈ ಮಾವ್ಫ್ಲಾಂಗ್ (Mawphlang sacred forest) ಅರಣ್ಯವನ್ನು ಅಲ್ಲಿನ ಖಾಸಿ ಬುಡಕಟ್ಟು ಜನಾಂಗದವರು ರಕ್ಷಿಸಿದರು ಎಂಬ ನಂಬಿಕೆ ಇದೆ. ಈ ದಟ್ಟಾರಣ್ಯದಲ್ಲಿ ಯಕ್ಷಯಕ್ಷಿಣಿಯರು ಮತ್ತು ಆತ್ಮಗಳು ಇದೆ ಎಂಬುದು ಈ ಖಾಸಿ ಸಮುದಾಯದ ನಂಬಿಕೆ ಆಗಿದೆ. ಇಲ್ಲಿನ ನಂಬಿಕೆಗಳ ಪ್ರಕಾರ ಈ ಕಾಡಿನಿಂದ ಒಂದು ಎಲೆಯನ್ನು ಕೂಡ ಕೀಳಬಾರದು, ಕಿತ್ತರೆ ಅಥವಾ ಇಲ್ಲಿನ ಮರಗಳನ್ನು ಕಡಿದರೆ ಅದು ದುರಾದೃಷ್ಟವನ್ನು ತರುವುದು ಎಂಬುದು ಇಲ್ಲಿನ ಜನರ ನಂಬಿಕೆ ಆಗಿದೆ. ಹಾಗೆಯೇ ಇಲ್ಲಿ ಬೀಸುವ ಗಾಳಿಯೂ ಒಂದು ರೀತಿಯ ಭಾರ ಹಾಗೂ ನಿಗೂಢವಾದ ಭಾವನೆ ನೀಡುತ್ತದೆಯಂತೆ.

77
Hunted forest

ಬ್ಲ್ಯಾಕ್ ಫಾರೆಸ್ಟ್, ಜರ್ಮನಿ(Black Forest: Germany): ಜರ್ಮಿನಿಯಲ್ಲಿರುವ ಈ ಕಾಡು, ಹೆಸರೇ ಸೂಚಿಸುವಂತೆ, ಕಪ್ಪು, ದಟ್ಟ ಮತ್ತು ಭಯಾನಕವಾಗಿದೆ. ಇಲ್ಲಿನ ಜಾನಪದ ಕಥೆಗಳಲ್ಲಿ ಉಲ್ಲೇಖವಾಗಿರುವಂತೆ ಜರ್ಮನಿಯ ಈ ಕಪ್ಪು ಕಾಡು ಅಥವಾ ಬ್ಲ್ಯಾಕ್ ಫಾರೆಸ್ಟ್‌ನಲ್ಲಿ ಮಾಟಗಾತಿಯರು ವಾಸಿಸುತ್ತಾರಂತೆ. ಜರ್ಮನ್‌ನ ಜಾನಪದ ಕತೆಗಳನ್ನು ಬರೆದು ಪ್ರಸಿದ್ಧಿ ಪಡೆದಿರುವ ಅಲ್ಲಿನ ಲೇಖಕರಾದ ಗ್ರೀಮ್ ಸೋದರರು ಈ ಕಾಡು, ಯುರೋಪಿಯನ್‌ ಪೌರಾಣಿಕ ಕತೆಗೆ ಸಂಬಂಧಿಸಿದ್ದಾಗಿದ್ದು, ಅವರು ಕರೆಯುವಂತೆ ಈ ಕಾಡು ಮಾಂತ್ರಿಕ ಶಕ್ತಿಯನ್ನು ಹೊಂದಿರುವ ಸುಂದರವಾದ ಆದರೆ ಭಯಾನಕವಾದ ಪ್ರದೇಶವಾಗಿದೆ. 

Read more Photos on
click me!

Recommended Stories