ದೇವರಿಗೆ ಅರ್ಪಿಸುವ ಹೂವಿನ ವಾಸನೆ ನೋಡಬಾರದೇಕೆ?

First Published Aug 28, 2023, 2:16 PM IST

ಅನೇಕ ಜನರಿಗೆ ದೇವರಿಗೆ ಪೂಜಿಸಲು ಖರೀದಿಸಿದ ಹೂವಿನ ವಾಸನೆ ನೋಡಬಾರದು ಅನ್ನೋದು ತಿಳಿದಿದೆ ಆದರೆ ಅದನ್ನ ಯಾಕೆ ಮಾಡಬಾರದು ಅನ್ನೋದು ಮಾತ್ರ ತಿಳಿದಿಲ್ಲ. ಯಾವ ಹೂವುಗಳಿಂದ ದೇವರನ್ನು ಪೂಜಿಸುವುದು ಉತ್ತಮ ಎಂದು ತಿಳಿದಿಲ್ಲ. ಈಗ ಆ ವಿವರಗಳನ್ನು ತಿಳಿಯೋಣ.
 

ಹಿಂದೂಗಳು ದೇವತೆಗಳಿಗೆ (Hindu Godess) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹಬ್ಬ ಬಂದಾಗ, ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ಪೂಜಿಸಲಾಗುತ್ತೆ. ಅನೇಕರು ಪ್ರತಿದಿನ ಪೂಜಿಸದೇ ನೀರನ್ನು ಸಹ ಮುಟ್ಟುವುದಿಲ್ಲ.  ಪೂಜೆ ಮಾಡಲು ದೀಪ ಮತ್ತು ಅಗರಬತ್ತಿಗಳಷ್ಟೇ ಮುಖ್ಯ ಹೂವುಗಳು.
 

ಪೂಜೆಗೆ ಒಂದಾದರೂ ಹೂವು ಇರಲೇಬೇಕು ಎಂದು ಹಿರಿಯರು ಹೇಳುತ್ತಾರೆ. ಅಷ್ಟೇ ಅಲ್ಲ ದೇವರಿಗೆ ಅರ್ಪಿಸಿದ ಹೂವಿನ ವಾಸನೆ ನೋಡಬೇಡಿ ಎಂದು ಹಿರಿಯರು ಮಕ್ಕಳಿಗೆ ಹೇಳುತ್ತಾರೆ. ಆದರೆ ಅದಕ್ಕೆ ಕಾರಣ ಏನೆಂದು ಹೇಳೋದಿಲ್ಲ. ಅದಕ್ಕೆ ಕಾರಣವೇನೆಂದು ನೋಡೋಣ. ಹೂವುಗಳು ದೈವಿಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ.

Latest Videos


ನಿರ್ದಿಷ್ಟ ಹೂವುಗಳು ಕೆಲವು ದೇವತೆಗಳ ಪಾವಿತ್ರ್ಯವನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿವೆ. ಅಂತಹ ಹೂವುಗಳನ್ನು ದೇವರಿಗೆ ಅರ್ಪಿಸಿದಾಗ, ವಿಗ್ರಹದಲ್ಲಿರುವ ದೇವರ ಶಕ್ತಿಯಿಂದ (Gods Power) ನಾವು ತಕ್ಷಣ ಪ್ರಯೋಜನ ಪಡೆಯುತ್ತೇವೆ ಎನ್ನಲಾಗುತ್ತೆ.
 

ದೇವರಿಗೆ ಅರ್ಪಿಸುವ ಹೂವುಗಳ ವಾಸನೆಯನ್ನು (smell of flower) ನಾವು ಅನುಭವಿಸಿದರೆ, ಆ ಹೂವುಗಳ ಪಾವಿತ್ರ್ಯ ಕಳೆದುಹೋಗುತ್ತದೆ ಎಂಬುದು ಹಿರಿಯರ ನಂಬಿಕೆ. ಅಂತೆಯೇ, ಬಿದ್ದ ಹೂವು ಸಹ ತನ್ನ ಪರಿಶುದ್ಧತೆ ಕಳೆದುಕೊಳ್ಳುತ್ತದೆ. ಅಂತಹ ಹೂವನ್ನು ದೇವರಿಗೆ ಅರ್ಪಿಸಬಾರದು ಎಂದು ಹಿರಿಯರು ಹೇಳುತ್ತಾರೆ.
 

ಪ್ರತಿಯೊಬ್ಬ ದೇವ -ದೇವತೆಯರಿಗೆ ಒಂದೊಂದು ನೆಚ್ಚಿನ ಹೂವು ಇದೆ. ನಾವು ಅವುಗಳನ್ನು ಆಯಾ ದೇವತೆಗಳಿಗೆ ಅರ್ಪಿಸಿದಾಗ, ನಮ್ಮ ಕೆಲಸವೂ ತ್ವರಿತವಾಗಿ ನಡೆಯುತ್ತದೆ. ಗಣೇಶನಿಗೆ ಗರಿಕೆ ಹುಲ್ಲು ತುಂಬಾ ಇಷ್ಟ, ಗಣೇಶನ ಪೂಜೆಗೆ (worshiping Ganesh) ಇದನ್ನ ಬಳಸಿದ್ರೆ ಉತ್ತಮ. ಅಂತೆಯೇ, ಪರಮೇಶ್ವರನಿಗೆ ಎಕ್ಕದ ಹೂವು ತುಂಬಾ ಇಷ್ಟ.

ಅಂತೆಯೇ, ಕಾಳಿ ದೇವಿಯು ಕೆಂಪು ಹೂವುಗಳನ್ನು ತುಂಬಾ ಇಷ್ಟಪಡುತ್ತಾಳೆ ಮತ್ತು ಮಹಾವಿಷ್ಣು ಪಾರಿಜಾತ ಹೂವುಗಳನ್ನು ತುಂಬಾ ಇಷ್ಟಪಡುತ್ತಾನೆ. ಈ ಹೂವುಗಳನ್ನು ಅರ್ಪಿಸಿ ದೇವತೆಗಳನ್ನು ಪೂಜೆ ಮಾಡುವುದರಿಂದ , ನಮ್ಮ ಯೋಜಿತ ಕಾರ್ಯಗಳು ತ್ವರಿತವಾಗಿ ನೆರವೇರುತ್ತವೆ. 

ಮತ್ತೊಂದು ವಿಷಯ ಏನೆಂದರೆ, ನೆರೆಹೊರೆಯ ಮನೆಯಲ್ಲಿ ಅವರ ಅನುಮತಿಯಿಲ್ಲದೆ ಹೂವುಗಳನ್ನು ಕತ್ತರಿಸುವುದು ಮತ್ತು ಆ ಹೂವುಗಳಿಂದ ದೇವರನ್ನು ಪೂಜಿಸುವುದು ತಪ್ಪು. ಇದರಿಂದ ದೇವರು ನಿಮಗೆ ಒಳ್ಳೆಯದು ಮಾಡೋದಿಲ್ಲ ಎನ್ನಲಾಗುತ್ತೆ.
 

click me!