ಏನು ಮಾಡಬೇಕು ಅಂತ ಗೊತ್ತಿರಲ್ಲ, ಸಣ್ಣ ವಿಷಯಕ್ಕೂ ಕನ್ಫ್ಯೂಸ್ ಆಗುವ ರಾಶಿಗಳು

Published : Jul 10, 2025, 06:41 PM IST

ಜೀವನದಲ್ಲಿ ಏನು ಮಾಡಬೇಕು, ಏನಾಗಬೇಕು ಅಂತ ಗೊತ್ತಿಲ್ಲದ ಕೆಲವು ರಾಶಿಗಳಿವೆ. ಚಿಕ್ಕ ವಿಷಯಕ್ಕೂ ಈ ರಾಶಿಯವರು ಪದೇ ಪದೇ ಗೊಂದಲಕ್ಕೆ ಒಳಗಾಗ್ತಾರೆ. ಯಾರು ಈ ರಾಶಿಯವರು ಎಂಬುದರ ಮಾಹಿತಿ ಇಲ್ಲಿದೆ.

PREV
17
ರಾಶಿ ಸ್ವಭಾವ

ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅಂದ್ರೆ, ಕ್ಲಾರಿಟಿ ಇರಬೇಕು. ಏನಾಗಬೇಕು, ಅದಕ್ಕೆ ಏನು ಮಾಡಬೇಕು ಅಂತ ನಮಗೆ ಸ್ಪಷ್ಟವಾಗಿ ಗೊತ್ತಿರಬೇಕು. ಇಲ್ಲಾಂದ್ರೆ ಏನೂ ಸಾಧಿಸೋಕೆ ಆಗಲ್ಲ. ಕೆಲವು ರಾಶಿಗಳಿಗೆ ಈ ಕ್ಲಾರಿಟಿ ಇರಲ್ಲ. ಚಿಕ್ಕ ವಿಷಯಕ್ಕೂ ಗೊಂದಲ ಆಗ್ತಾರೆ. ಯಾವ ರಾಶಿಗಳು ಅಂತ ನೋಡೋಣ

27
ಮಿಥುನ ರಾಶಿ

ಮಿಥುನ ರಾಶಿಯವರು ಬಹು ಪ್ರತಿಭಾವಂತರು. ಆದರೆ ಏನು ಮಾಡಬೇಕು ಅಂತ ಗೊತ್ತಿರಲ್ಲ. ಆಲೋಚನೆಗಳು ಬದಲಾಗ್ತಾನೆ ಇರುತ್ತೆ. ಯಾವ ದಾರಿ ಹಿಡಿಯಬೇಕು ಅಂತ ಗೊಂದಲ ಇರುತ್ತದೆ. ಹೀಗಾಗಿ ತಡಬಡಾಯಿಸುತ್ತಾರೆ. ಹೊಸ ವಿಷಯ ಕಲಿಯುವ ಆಸೆ ಇದ್ದರೂ ಪೂರ್ತಿ ಮಾಡಲ್ಲ. ಅವಕಾಶಗಳು ಬಂದರೂ ಸರಿಯಾಗಿ ಉಪಯೋಗಿಸಿಕೊಳ್ಳಲ್ಲ. ಕೊನೆಗೆ ಯಾವುದರಲ್ಲೂ ಸೆಟಲ್ ಆಗಲ್ಲ.

37
2.ತುಲಾ ರಾಶಿ.

ತುಲಾ ರಾಶಿಯವರು ಲೈಫ್ ಬ್ಯಾಲೆನ್ಸ್ ಇಷ್ಟಪಡ್ತಾರೆ. ಇತರರನ್ನು ಖುಷಿಪಡಿಸಬೇಕು ಅಂತ ತಾವು ಏನು ಬಯಸ್ತಾರೆ ಅಂತ ಮರೆತುಬಿಡ್ತಾರೆ. ಸಣ್ಣ ನಿರ್ಧಾರ ತೆಗೆದುಕೊಳ್ಳೋದಕ್ಕೂ ತಡ ಮಾಡ್ತಾರೆ. ಇದು ಅವರನ್ನು ಗೊಂದಲಕ್ಕೆ ದೂಡುತ್ತೆ. ಕೊನೆಗೆ ಇಷ್ಟವಿಲ್ಲದ ಕೆಲಸ ಮಾಡ್ತಾ ಕೂರಬೇಕಾಗುತ್ತೆ.

47
3.ಮೀನ ರಾಶಿ
ಮೀನ ರಾಶಿಯವರು ಕನಸಿನ ಲೋಕದಲ್ಲಿ ಇರ್ತಾರೆ. ಭಾವುಕರಾಗಿರುವುದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಆಗುತ್ತೆ. ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಅಂತ ಗೊತ್ತಾಗದೆ ಯಾವಾಗಲೂ ಗೊಂದಲದಲ್ಲಿರುತ್ತಾರೆ.
57
4. ಧನಸ್ಸು ರಾಶಿ
ಧನು ರಾಶಿಯವರು ಹೊಸ ಅನುಭವ ಹುಡುಕುತ್ತಾ ಖುಷಿಯಾಗಿ ಇರ್ತಾರೆ. ಒಂದೇ ದಾರಿಯಲ್ಲಿ ಇರೋದು ಕಷ್ಟ. ಸ್ವಾತಂತ್ರ್ಯ, ಸಾಹಸ ಪ್ರಿಯತೆ ದಾರಿ ತಪ್ಪಿಸುತ್ತೆ. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಅಂತ ಗೊತ್ತಿರಲ್ಲ.
67
5. ಕರ್ಕಾಟಕ
ಕರ್ಕಾಟಕ ರಾಶಿಯವರು ತುಂಬಾ ಭಾವುಕರು. ಮನಸ್ಸಿನ ಮಾತು ಕೇಳ್ತಾರೆ. ಹೀಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಆಗುತ್ತೆ. ಭಾವನೆಗಳಿಂದಾಗಿ ಜೀವನದಲ್ಲಿ ಕ್ಲಾರಿಟಿ ಇರಲ್ಲ.
77
6. ಕುಂಭ ರಾಶಿ
ಕುಂಭ ರಾಶಿಯವರು ಹೊಸ ಆಲೋಚನೆ, ಸಾಮಾಜಿಕ ಬದಲಾವಣೆ ಇಷ್ಟಪಡ್ತಾರೆ. ಇತರರು ಮಾಡುವ ಕೆಲಸ ಪ್ರಶ್ನಿಸುತ್ತಾರೆ. ಆದರೆ ತಾವು ಸರಿಯಾಗಿದ್ದೀವಾ ಅಂತಲೂ ಯೋಚಿಸುತ್ತಾರೆ. ಹೀಗಾಗಿ ಗೊಂದಲ ಆಗುತ್ತೆ. ಕೊನೆಗೆ ಏನೂ ಮಾಡದೆ ಸುಮ್ಮನಿರುತ್ತಾರೆ.
Read more Photos on
click me!

Recommended Stories