ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ಬಯಸಿದ್ರೆ ಸೋಮವಾರ ಈ ಕೆಲಸ ಮಾಡಿ

Published : Feb 05, 2024, 05:06 PM IST

ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಈ ದಿನವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೋಮವಾರ ದಿನ ಕೆಲವೊಂದು ಕೆಲಸಗಳನ್ನು ಮಾಡಿದ್ರೆ, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.   

PREV
16
ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ಬಯಸಿದ್ರೆ ಸೋಮವಾರ ಈ ಕೆಲಸ ಮಾಡಿ

ಸೋಮವಾರ (Monday) ಶಿವನನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ. ಈ ದಿನವನ್ನು ಜ್ಯೋತಿಷ್ಯದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜನರು ಈ ಶುಭ ದಿನದಂದು ಉಪವಾಸ (Fasting) ಮಾಡುತ್ತಾರೆ ಮತ್ತು ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾರೆ. ನೀವು ಸಹ ಶಿವನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಸೋಮವಾರದಂದು ಶಿವನನ್ನು (Lord Shiva) ಭಕ್ತಿಯಿಂದ ಪೂಜಿಸಿ.
 

26

ಅದೇ ಸಮಯದಲ್ಲಿ, ಜ್ಯೋತಿಷ್ಯದಲ್ಲಿ, ಈ ದಿನದಂದು ಕೆಲವು ಕೆಲಸಗಳನ್ನು ಮಾಡಬೇಕೆಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಸಾಲದ ಸಮಸ್ಯೆ, ವೃತ್ತಿಜೀವನ (Career) ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಿದ್ರೆ ಸೋಮವಾರ ಯಾವ ಕೆಲಸಗಳನ್ನು ಮಾಡಬೇಕು ನೋಡೋಣ. 
 

36

ಸೋಮವಾರದ ಜ್ಯೋತಿಷ್ಯ ಪರಿಹಾರಗಳು
ಸಾಲದಿಂದ ಮುಕ್ತರಾಗಿ

ಜ್ಯೋತಿಷ್ಯದ ಪ್ರಕಾರ, ನೀವು ಸಾಲದ ಸಮಸ್ಯೆಯಿಂದ (free from debt) ತೊಂದರೆಗೀಡಾಗಿದ್ದರೆ, ನೀವು ಯಾವುದೇ ಸೋಮವಾರ ಶಿವಲಿಂಗಕ್ಕೆ ಅಕ್ಷತೆ ಬೆರೆಸಿದ ನೀರಿನಲ್ಲಿ ಅಭಿಷೇಕ ಮಾಡಬೇಕು. ಇದಲ್ಲದೆ, ಒಂದು ಬಟ್ಟೆಯಲ್ಲಿ ಅಕ್ತೆಯನ್ನು ತುಂಬಿಸಿ ಶಿವನಿಗೆ ಅರ್ಪಿಸಬೇಕು. ರಾಹುಕಾಲ ಅಥವಾ ಇತರ ಅಶುಭ ಸಮಯಗಳಲ್ಲಿ ಈ ಪರಿಹಾರವನ್ನು ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡುವುದರಿಂದ, ನೀವು ಸಾಲದ ಸಮಸ್ಯೆ ನಿವಾರಣೆಯಾಗುತ್ತೆ. 

46

ವೃತ್ತಿ ಸಮಸ್ಯೆಗಳು ದೂರವಾಗುತ್ತವೆ
ನಿಮ್ಮ ವೃತ್ತಿಜೀವನದಲ್ಲಿ (career life) ನೀವು ಪದೇ ಪದೇ ತೊಂದರೆಗಳನ್ನು ಎದುರಿಸುತ್ತಿದ್ದರೆ, ಕಪ್ಪು ಎಳ್ಳಿನ (Black Sasame Seed) ಬೀಜಗಳನ್ನು ನೀರಿನಲ್ಲಿ ಬೆರೆಸಿ ಭಗವಾನ್ ಶಂಕರನಿಗೆ ಅರ್ಪಿಸಿ. ಈ ಪರಿಹಾರವನ್ನು ಮಾಡುವಾಗ, 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. 

56

ಈ ಮೇಲೆ ತಿಳಿಸಿದ ಮಾಡುವುದರಿಂದ, ವೃತ್ತಿಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರನೆಯಾಗುತ್ತವೆ. ಅಲ್ಲದೆ, ನೀವು ಅಪೇಕ್ಷಿತ ವೃತ್ತಿಜೀವನವನ್ನು (Expected Career Growth) ಪಡೆಯುತ್ತೀರಿ, ಆದರೆ ಈ ಪರಿಹಾರವನ್ನು ಸೋಮವಾರವೇ ಮಾಡಬೇಕು. ಆಗ ಮಾತ್ರ ಅದರ ಫಲಿತಾಂಶಗಳು ಉತ್ತಮವಾಗಿರುತ್ತವೆ.
 

66

ಸಂತೋಷ (Happiness) ಮತ್ತು ಸಮೃದ್ಧಿಯ (Prosperity) ಆಶೀರ್ವಾದ ಪಡೆಯಲು
ನೀವು ಸಂತೋಷ ಮತ್ತು ಸಮೃದ್ಧಿಯನ್ನು (happiness and prosperity) ಬಯಸಿದರೆ, ಬಾರ್ಲಿಯನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಅಲ್ಲದೆ, ಶಿವನ ಪೂಜೆಯಲ್ಲಿ ಬಿಲ್ವ ಪತ್ರೆ ಮತ್ತು ಗಂಗಾಜಲವನ್ನು ಸೇರಿಸಿ. ಈ ಪರಿಹಾರವನ್ನು ಮಾಡುವುದರಿಂದ, ಸಂತೋಷವು ಹೆಚ್ಚಾಗುತ್ತದೆ ಮತ್ತು ಪೂರ್ವಜರ ಅನುಗ್ರಹವನ್ನು ಪಡೆಯಲಾಗುತ್ತದೆ.

Read more Photos on
click me!

Recommended Stories