ಈ ರೀತಿಯ ಮೊಬೈಲ್ ವಾಲ್‌ಪೇಪರ್ ಹಾಕಿದ್ರೆ ದುರಾದೃಷ್ಟ ನಿಮ್ಮೊಂದಿಗೆಯೇ ಇರುತ್ತೆ!
ವಾಸ್ತು ಶಾಸ್ತ್ರದ ಪ್ರಕಾರ, ಮೊಬೈಲ್‌ನಲ್ಲಿ ಕೆಲವು ರೀತಿಯ ವಾಲ್‌ಪೇಪರ್‌ಗಳನ್ನು ಹಾಕುವುದರಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವ ರೀತಿಯ ವಾಲ್‌ಪೇಪರ್ ಹಾಕಬಾರದು ಎಂಬುದನ್ನು ಇಲ್ಲಿ ನೋಡೋಣ.
ವಾಸ್ತು ಶಾಸ್ತ್ರದ ಪ್ರಕಾರ, ಮೊಬೈಲ್‌ನಲ್ಲಿ ಕೆಲವು ರೀತಿಯ ವಾಲ್‌ಪೇಪರ್‌ಗಳನ್ನು ಹಾಕುವುದರಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವ ರೀತಿಯ ವಾಲ್‌ಪೇಪರ್ ಹಾಕಬಾರದು ಎಂಬುದನ್ನು ಇಲ್ಲಿ ನೋಡೋಣ.
ಮೊಬೈಲ್ ಫೋನ್ ವಾಲ್‌ಪೇಪರ್‌ಗಾಗಿ ವಾಸ್ತು ಸಲಹೆಗಳು: ಯಾವುದೇ ಕೆಲಸವನ್ನು ಮಾಡುವ ಮೊದಲು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳ ಪ್ರಕಾರ ಮಾಡಿದರೆ ಅದು ಮಂಗಳಕರವಾಗಿರುತ್ತದೆ ಮತ್ತು ಸಕಾರಾತ್ಮಕವಾಗಿರುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ, ಪರಿಣಾಮಗಳು ಕೆಟ್ಟದಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ವಾಸ್ತು ಪ್ರಕಾರ ಮೊಬೈಲ್ ಫೋನ್‌ನಲ್ಲಿ ಯೋಚಿಸದೆ ಕೆಲವು ವಾಲ್‌ಪೇಪರ್ ಹಾಕಿಕೊಂಡಿರುವವರಿಗೆ ಈ ಲೇಖನವು ತುಂಬಾ ಉಪಯುಕ್ತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮೊಬೈಲ್ ಫೋನ್‌ನಲ್ಲಿ ಯಾವ ರೀತಿಯ ವಾಲ್‌ಪೇಪರ್ ಹಾಕಬಾರದು? ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ಈಗ ಲೇಖನದಲ್ಲಿ ತಿಳಿದುಕೊಳ್ಳೋಣ.
ವಾಸ್ತು ಶಾಸ್ತ್ರದ ಪ್ರಕಾರ, ಧಾರ್ಮಿಕ ಸ್ಥಳದ ಚಿತ್ರವನ್ನು ಮೊಬೈಲ್ ಫೋನ್‌ನಲ್ಲಿ ವಾಲ್‌ಪೇಪರ್ ಆಗಿ ಹಾಕಬಾರದು. ಏಕೆಂದರೆ ಅನೇಕ ಬಾರಿ ನಾವು ಗಲೀಜು ಕೈಗಳಿಂದ ಮೊಬೈಲ್ ಅನ್ನು ಬಳಸುತ್ತೇವೆ. ಅದೇ ರೀತಿ ಕೆಲವರಿಗೆ ಬಾತ್‌ರೂಮ್‌ಗೆ ಕೂಡ ಮೊಬೈಲ್ ಫೋನ್ ಕೊಂಡೊಯ್ಯುವ ಅಭ್ಯಾಸವಿರುತ್ತದೆ. ಈ ಕಾರಣಕ್ಕಾಗಿಯೇ ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಎಂದಿಗೂ ಫೋನ್‌ನಲ್ಲಿ ಹಾಕಬಾರದು. ಹಾಗೆ ಇಟ್ಟುಕೊಂಡು ಈ ರೀತಿಯ ಕೆಲಸಗಳನ್ನು ಮಾಡಿದರೆ ದೇವರನ್ನು ಅವಮಾನಿಸಿದಂತೆ.
ವಾಸ್ತು ಪ್ರಕಾರ ನಿಮ್ಮ ಮೊಬೈಲ್ ಫೋನ್‌ನಲ್ಲಿ ದೇವರ ಚಿತ್ರಗಳನ್ನು ವಾಲ್‌ಪೇಪರ್ ಆಗಿ ಎಂದಿಗೂ ಹಾಕಬೇಡಿ. ನೀವು ಹೀಗೆ ಮಾಡುವುದು ದೊಡ್ಡ ತಪ್ಪು. ಏಕೆಂದರೆ ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ನಿಮ್ಮ ಫೋನ್‌ನಲ್ಲಿ ದೇವರ ಚಿತ್ರಗಳನ್ನು ಹಾಕಿದರೆ ಅದು ನಿಮಗೆ ಗ್ರಹ ದೋಷಗಳನ್ನು ಉಂಟುಮಾಡುತ್ತದೆ. ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಕೆಲವರು ದುಃಖ, ಕೋಪ, ಅಸೂಯೆ, ಸಂತೋಷ, ದುರಾಸೆ ಮುಂತಾದವುಗಳನ್ನು ಚಿತ್ರಿಸುವ ಚಿತ್ರಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ವಾಲ್‌ಪೇಪರ್ ಆಗಿ ಹಾಕುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಭಾವನಾತ್ಮಕ ವಾಲ್‌ಪೇಪರ್ ಹಾಕುವುದು ತಪ್ಪು. ನೀವು ಇಂತಹ ವಾಲ್‌ಪೇಪರ್ ಹಾಕಿದರೆ ನಿಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಈ ವಾಲ್‌ಪೇಪರ್‌ನಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮೊಬೈಲ್ ಫೋನ್‌ನಲ್ಲಿ ಕಪ್ಪು, ನೀಲಿ, ಕಂದು ಅಥವಾ ನೇರಳೆ ಬಣ್ಣದ ವಾಲ್‌ಪೇಪರ್ ಹಾಕಬೇಡಿ. ಅದು ತಪ್ಪು. ಇದರಿಂದ ಜೀವನದಲ್ಲಿ ನೀವು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಮತ್ತು ಮಾಡುವ ಕೆಲಸದಲ್ಲಿ ಪ್ರಗತಿ ಕಾಣುವುದಿಲ್ಲ. ಆದ್ದರಿಂದ ನಿಮ್ಮ ಮೊಬೈಲ್ ಫೋನ್‌ನಲ್ಲಿ ಈ ಬಣ್ಣಗಳ ವಾಲ್‌ಪೇಪರ್ ಹಾಕಬೇಡಿ.