ನೀವು ಇನ್ನೂ ಸಾದಾ ನೀರಿನಿಂದ ಸ್ನಾನ ಮಾಡುತ್ತೀರಾ? ಹಾಗಿದ್ರೆ ಸ್ನಾನದ ನೀರಿನಲ್ಲಿ ಈ ವಸ್ತುಗಳನ್ನು ಸೇರಿಸೋ ಮೂಲಕ ನಿಮ್ಮ ದೇಹದ ದಾರಿದ್ರ್ಯದಿಂದ ಹಿಡಿದು ನಿಮ್ಮ ಮನಸ್ಸು ಸಹ ಶುದ್ಧೀಕರಿಸಲಾಗುತ್ತೆ. ಅದು ಹೇಗೆ ಅನ್ನೋದನ್ನು ನೀವು ತಿಳಿಯಲು ಬಯಸಿದ್ರೆ ಮುಂದೆ ಓದಿ
ಸ್ನಾನ (Bath) ನಮ್ಮ ದೇಹದ ಮೇಲ್ಭಾಗವನ್ನು ಶುದ್ಧೀಕರಿಸುತ್ತೆ, ಆದರೆ ಸ್ನಾನ ಮಾಡೋದರಿಂದ ನಮ್ಮ ಆಂತರಿಕ ಮನಸ್ಸನ್ನು ಸ್ವಚ್ಛಗೊಳಿಸಬಹುದಾ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ರೋಗಗಳನ್ನು ತಪ್ಪಿಸಬಹುದಾ? ಉತ್ತರ ಹೌದು. ಹೌದು, ಪ್ರತಿದಿನ ಸ್ನಾನ ಮಾಡೊದರಿಂದ ದೇಹ ಪೂರ್ತಿಯಾಗಿ ಕ್ಲೀನ್ ಆಗುತ್ತದೆ. ಅಲ್ಲದೇ ಇದರಿಂದ ಮನಸ್ಸೂ ಶಾಂತವಾಗುತ್ತೆ, ನೆಮ್ಮದಿ ಕೂಡ ಸಿಗುತ್ತೆ. ಜೊತೆಗೆ ಹಲವು ಸಮಸ್ಯೆಗಳು ಸಹ ದೂರವಾಗುತ್ತೆ. ಅದು ಹೇಗೆ ಅನ್ನೋದನ್ನು ನೋಡೋಣ.
27
ಸಾಮಾನ್ಯ ನೀರಿನ ಬದಲು, ಕೆಲವು ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಪ್ರತಿದಿನ ಸ್ನಾನ ಮಾಡಿದ್ರೆ, ಅನೇಕ ದೈಹಿಕ ಸಮಸ್ಯೆಗಳನ್ನು ಸಹ ನಿವಾರಿಸಬಹುದು. ಇಷ್ಟೇ ಅಲ್ಲ, ಇದು ಮನಸ್ಸನ್ನು ಶುದ್ಧೀಕರಿಸುತ್ತೆ ಮತ್ತು ನಕಾರಾತ್ಮಕತೆಯನ್ನು(Negativity) ದೂರವಿಡುತ್ತೆ. ಆದ್ದರಿಂದ ಯಾವ ವಸ್ತುಗಳನ್ನು ನೀರಿನಲ್ಲಿ ಬೆರೆಸುವ ಮೂಲಕ ಸ್ನಾನ ಮಾಡಬಹುದು ಎಂದು ಇಲ್ಲಿ ತಿಳಿಯೋಣ.
37
ಉಪ್ಪು (Salt)
ಮನಸ್ಸಿನಲ್ಲಿ ಸಾಕಷ್ಟು ನಕಾರಾತ್ಮಕ ಆಲೋಚನೆಗಳಿದ್ದರೆ, ಎಲ್ಲಾ ಕಡೆಯಿಂದಲೂ ನಕಾರಾತ್ಮಕತೆಯಿಂದ ಸುತ್ತುವರೆದಿದ್ದರೆ. ಸ್ನಾನದ ನೀರಿನಲ್ಲಿ ಒಂದು ಟೀಸ್ಪೂನ್ ಉಪ್ಪನ್ನು ಬೆರೆಸಿ ಸ್ನಾನ ಮಾಡಬೇಕು. ಇದು ದಾರಿದ್ರ್ಯ ಮತ್ತು ನಕಾರಾತ್ಮಕತೆ ತೆಗೆದುಹಾಕುತ್ತೆ ಮತ್ತು ಅದೃಷ್ಟವೂ ಹೊಳೆಯಲು ಪ್ರಾರಂಭಿಸುತ್ತೆ.
47
ಕಪ್ಪು ಎಳ್ಳು (Black Sesame)
ಸಂಕ್ರಾಂತಿ ಸಂದರ್ಭದಲ್ಲಿ, ಅನೇಕ ಜನರು ಎಳ್ಳು ನೀರಿನಿಂದ ಸ್ನಾನ ಮಾಡೋದನ್ನು ನೀವು ನೋಡಿರಬಹುದು. ಆದರೆ ನಾವು ವರ್ಷವಿಡೀ ಸ್ನಾನದ ನೀರಿನಲ್ಲಿ ಸ್ವಲ್ಪ ಕಪ್ಪು ಎಳ್ಳನ್ನು ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ, ಬಡತನ ದೂರವಾಗುತ್ತೆ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಕುಟುಂಬದಲ್ಲಿ ಸಂತೋಷ ಸಹ ನೆಲೆಯಾಗುತ್ತೆ.
57
ಹಾಲು (Milk)
ಸ್ನಾನದ ನೀರಿಗೆ ಸ್ವಲ್ಪ ಪ್ರಮಾಣದ ಹಾಲು ಮತ್ತು ಕೇಸರಿ ದಳಗಳನ್ನು ಸೇರಿಸೋದ್ರಿಂದ, ಚರ್ಮ ಹೊಳೆಯಲು ಪ್ರಾರಂಭಿಸುತ್ತೆ. ಬಣ್ಣವೂ ಹೊಳೆಯುತ್ತೆ. ಇಷ್ಟೇ ಅಲ್ಲ, ಹಾಲು ಮತ್ತು ಕೇಸರಿ ನೀರಿನಿಂದ ಸ್ನಾನ ಮಾಡೋದರಿಂದ ರೋಗಗಳಿಂದ ತ್ವರಿತ ಪರಿಹಾರ ಸಿಗುತ್ತೆ ಮತ್ತು ಜೀವಿತಾವಧಿ ಹೆಚ್ಚಿಸುತ್ತೆ.
67
ಶ್ರೀಗಂಧದ ಪುಡಿ(Sandal powder)
ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ಬಯಸೋದಾದ್ರೆ ಮತ್ತು ಮುಖದ ಸೌಂದರ್ಯ ಸುಧಾರಿಸಲು ಬಯಸಿದ್ರೆ, ಶ್ರೀಗಂಧವನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಪೇಸ್ಟ್ ಮಾಡಿ ಮತ್ತು ಈ ಪೇಸ್ಟ್ ಅನ್ನು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ.
77
ತುಪ್ಪ(Ghee)
ಸ್ನಾನದ ನೀರಿಗೆ ಸ್ವಲ್ಪ ತುಪ್ಪ ಸೇರಿಸುವ ಮೂಲಕ, ನೀವು ರೋಗಗಳನ್ನು ತೊಡೆದುಹಾಕುತ್ತೀರಿ ದೇಹವು ಆರೋಗ್ಯಕರವಾಗಿರುತ್ತೆ. ಹಾಗೆ ಚರ್ಮವು ಮೃದುವಾಗುತ್ತೆ. ಹಾಗಾಗಿ ಚಳಿಗಾಲದಲ್ಲಿ, ತುಪ್ಪವನ್ನು ಸೇರಿಸಿ ಸ್ನಾನ ಮಾಡಬೇಕು. ನೀವು ಮಾಡ್ತೀರಿ ಅಲ್ವಾ?