ಈ ನಾಲ್ಕು ರಾಶಿಯವರು ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ!

First Published Dec 20, 2022, 4:20 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ, ಎಲ್ಲಾ 12 ರಾಶಿಗಳಲ್ಲಿ 4 ತುಂಬಾ ಭಾವನಾತ್ಮಕ ಮತ್ತು ಮೃದು ಹೃದಯಿ ಎಂದು ಹೇಳಲಾಗುತ್ತೆ. ಈ ರಾಶಿಯ ಜನರ ವಿಶೇಷತೆಯೆಂದರೆ ಅವರು ತಮ್ಮ ಸ್ವಂತ ಹಾನಿಯನ್ನು ಮಾಡಿದ ನಂತರವೂ ಇತರರಿಗೆ ಒಳ್ಳೆಯದನ್ನು ಮಾಡಲು ಹಿಂಜರಿಯೋದಿಲ್ಲ. ಯಾವ ರಾಶಿಯವರು ತುಂಬಾ ಭಾವನಾತ್ಮಕ ಮತ್ತು ಮೃದು ಹೃದಯಿಗಳು ಎಂದು ತಿಳಿಯೋಣ.

ಈ ರಾಶಿಯವರು ಮೃದು ಹೃದಯಿ (Soft hearted) ಮತ್ತು ಬುದ್ಧಿವಂತರು.

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ಕೆಲವು ರಾಶಿಯವರು ಮೃದು ಹೃದಯದ ಮತ್ತು ಸಂವೇದನಾಶೀಲರಾಗಿರುತ್ತಾರೆ. ನೀವು ಈ ರಾಶಿಯ ಜನರ ಸಹಾಯ ಕೇಳಿದರೆ, ಅಸಮಾಧಾನಗೊಂಡಾಗಲೂ ಸಹಾಯ ಮಾಡಲು  ಹಿಂಜರಿಯೋದಿಲ್ಲ. ಆದರೆ ಭಾವನಾತ್ಮಕತೆ ಮತ್ತು ಮೃದು ಹೃದಯದಿಂದಾಗಿ, ಅವರು ಅನೇಕ ಬಾರಿ ನಷ್ಟ ಅನುಭವಿಸಬೇಕಾಗುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರನ್ನು ಮೃದು ಹೃದಯಿಗಳು ಎಂದು ಕರೆಯಲಾಗಿದೆ ಎಂದು ನೋಡೋಣ.

ವೃಷಭ ರಾಶಿಯ(Taurus) ಜನರಲ್ಲಿ ಭಾವನಾತ್ಮಕತೆಯ ಗುಣ

ವೃಷಭ ರಾಶಿಯ ಧಾತು ಭೂಮಿ. ಧಾತುವಿನ ಪ್ರಕಾರ, ಈ ಜನರು ನೆಲದೊಂದಿಗೆ ಸಂಪರ್ಕ ಹೊಂದಿದ್ದಾರೆ. ಇವರಿಗೆ ಅಹಂ ಇರೋದಿಲ್ಲ ಮತ್ತು ಎಲ್ಲರೊಂದಿಗೂ ಸಮಾನವಾಗಿ ಮಾತನಾಡುತ್ತಾರೆ. ಇವರ ಸಭ್ಯತೆ ಜನರನ್ನು ಅವರತ್ತ ಆಕರ್ಷಿಸುತ್ತೆ ಮತ್ತು ಪ್ರತಿಯೊಬ್ಬರೂ ಅವರನ್ನು ಮತ್ತೆ ಮತ್ತೆ ಭೇಟಿಯಾಗಲು ಬಯಸುತ್ತಾರೆ. 

ವೃಷಭ ರಾಶಿಯ ಜನರ ಸಾಮಾಜಿಕ ವಲಯವು (Social Zone) ಕಡಿಮೆ, ಆದರೆ ಅವರೊಂದಿಗೆ ಯಾರು ಸಂಬಂಧ (Relationship) ಹೊಂದಿದ್ದಾರೋ, ಅವರು ಎಂದಿಗೂ ಇವರಿಂದ ದೂರವಿರೋದಿಲ್ಲ. ಇವರ ಸೃಜನಶೀಲ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯು ಇವರನ್ನು ಸಮಾಜದಲ್ಲಿ ಗೌರವಿಸುವಂತೆ ಮಾಡುತ್ತೆ.
 

ಕರ್ಕಾಟಕ ರಾಶಿಯವರು ಸ್ವಭಾವತಃ ಸೌಮ್ಯ ಸ್ವಭಾವದವರು

ಚಂದ್ರನ (Moon) ಮಾಲೀಕತ್ವದ ಕರ್ಕಾಟಕ ಜನರು ಯಾರೊಂದಿಗೂ ಬೆರೆಯಲು ಇಷ್ಟಪಡೋದಿಲ್ಲ. ಇವರು ಹೆಚ್ಚಾಗಿ ಒಬ್ಬರೇ ಇರಲು ಇಷ್ಟ ಪಡುತ್ತಾರೆ. ಆದರೆ ಇವರು ಯಾರನ್ನಾದರೂ ಭೇಟಿಯಾದಾಗ, ತಮ್ಮ ಸಭ್ಯತೆಯಿಂದ ಇತರ ವ್ಯಕ್ತಿಯನ್ನು ಮೆಚ್ಚಿಸುತ್ತಾರೆ. 

ಚಂದ್ರನಂತೆ, ಕರ್ಕಾಟಕ ರಾಶಿಯವರ ಸೌಮ್ಯ ಸ್ವಭಾವವನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇವರು ತಮ್ಮ ಸ್ನೇಹಿತರನ್ನು ತನ್ನ ಕುಟುಂಬದ ಸದಸ್ಯರಂತೆ ನಡೆಸಿಕೊಳ್ಳುತ್ತಾರೆ ಕರ್ಕಾಟಕ ರಾಶಿಯವರು ಬುದ್ಧಿವಂತರು (Intelligent) ಮತ್ತು ಇವರು ಪ್ರತಿಯೊಂದು ಪರಿಸ್ಥಿತಿಯಲ್ಲಿ ತಮ್ಮನ್ನು ಬ್ಯಾಲೆನ್ಸ್ ಆಗಿ ಇಟ್ಟುಕೊಳ್ಳುವಲ್ಲಿ ಪರಿಣತಿ ಹೊಂದಿದ್ದಾರೆ.

ಕನ್ಯಾ(Virgo) ರಾಶಿಯವರು ತುಂಬಾ ಉದಾರಿಗಳು

ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ, ಆದ್ದರಿಂದ ಇವರನ್ನು ತುಂಬಾ ಬುದ್ಧಿವಂತರು ಎಂದು ಪರಿಗಣಿಸಲಾಗುತ್ತೆ. ಈ ರಾಶಿಯ ಜನರು ತಮ್ಮನ್ನು ತಾವು ಹೇಗೆ ಸರಿಯಾಗಿ ವ್ಯಕ್ತಪಡಿಸಬೇಕೆಂದು ತಿಳಿದಿದ್ದಾರೆ ಮತ್ತು ಜನರು ಇವರ ಮಾತುಗಳನ್ನು ಇಷ್ಟಪಡಲು ಇದೇ ಕಾರಣ. 

ಕನ್ಯಾ ರಾಶಿಯವರು ಎಲ್ಲರಿಗೂ ಗೌರವ ನೀಡಲು ಪ್ರಯತ್ನಿಸುತ್ತಾರೆ. ಜನರು ತಮ್ಮ ತಿಳುವಳಿಕೆ ಮತ್ತು ಶಾಂತ ಸ್ವಭಾವದಿಂದ ಆಕರ್ಷಿತರಾಗುತ್ತಾರೆ. ಇತರ ಜನರ ಬಗ್ಗೆ ಇವರ ಸಹಕಾರ ಮನೋಭಾವವೂ ಇವರ ಉತ್ತಮ ಗುಣವಾಗಿದೆ. ಕನ್ಯಾ ರಾಶಿಯವರು ಯಾವಾಗಲೂ ಅಗತ್ಯವಿರುವ ಸಹಾಯ(Help) ಒದಗಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ.
 

ಮಕರ ರಾಶಿಯವರು(Capricorn ) ಗೌರವ ನೀಡುತ್ತಾರೆ

ಶನಿಯ ಮಾಲೀಕತ್ವವನ್ನು ಹೊಂದಿರುವ ಜನರನ್ನು ಮಕರ ರಾಶಿಯ ನ್ಯಾಯಯುತರೆಂದು ಪರಿಗಣಿಸಲಾಗುತ್ತೆ. ಇವರು ನೆಲದೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಎಲ್ಲರಿಗೂ ಗೌರವ ಮತ್ತು ಹಕ್ಕುಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಈ ಕಾರಣದಿಂದಾಗಿಯೇ ಇವರ ಜನಪ್ರಿಯತೆಯು ಸಾಮಾಜಿಕ ಮಟ್ಟದಲ್ಲಿ ತುಂಬಾ ಹೆಚ್ಚಾಗಿದೆ.

ಒಮ್ಮೆ ಮಕರ ರಾಶಿಯವರೊಂದಿಗೆ ಸಂಪರ್ಕಕ್ಕೆ ಬರುವ ವ್ಯಕ್ತಿಯು ಇವರ ಸಭ್ಯ ನಡವಳಿಕೆಯಿಂದ ಪ್ರಭಾವಿತರಾಗದೆ ಇರಲು ಸಾಧ್ಯವಿಲ್ಲ. ಇವರು ತಮ್ಮ ಬುದ್ಧಿವಂತಿಕೆಯನ್ನು(Intelligence) ತಮ್ಮ ಒಳ್ಳೆಯದಕ್ಕಿಂತ ಹೆಚ್ಚಾಗಿ ಇತರರಿಗೆ ಒಳ್ಳೆಯದನ್ನು ಮಾಡಲು ಬಳಸುತ್ತಾರೆ.

click me!