ಭಾರತದ ಬಗ್ಗೆ ಈ ಯುಗದ ನಾಸ್ಟ್ರಮಸ್ ಭವಿಷ್ಯ ಹೇಳಿದ್ದೇನು? ಹುಲಿಯಂತೆ ಚಿತ್ರಿಸಿದ ಅರ್ಥವೇನು?

First Published | Apr 9, 2024, 3:31 PM IST

'ಲಿವಿಂಗ್ ನಾಸ್ಟ್ರಾಡಾಮಸ್' ಎಂದೂ ಕರೆಯಲ್ಪಡುವ ಅಥೋಸ್ ಸಲೋಮೆ, ಬಗ್ಗೆ ನೀವು ಕೇಳಿದ್ದೀರಾ? ಇಲ್ಲ ಅಂದ್ರೆ ನೀವು ಇವರ ಬಗ್ಗೆ ತಿಳಿದುಕೊಳ್ಳಲೇಬೇಕು. ಯಾಕಂದ್ರೆ ಇವರೊಬ್ಬ ಜ್ಯೋತಿಷಿ. ಇವರು ಹೇಳುವ ಪ್ರತಿಯೊಂದು ಭವಿಷ್ಯವಾಣಿ ಸಹ ನಿಜವಾಗುತ್ತದೆ. ಬನ್ನಿ ಇವರ ಬಗ್ಗೆ ತಿಳಿಯೋಣ. 
 

ತುಂಬಾ ಜ್ಯೋತಿಷಿಗಳು ಭವಿಷ್ಯವಾಣಿ ಹೇಳೋದನ್ನು ಕೇಳಿರಬಹುದು. ಆದ್ರೆ ಹೆಚ್ಚಿನವು ಯಾವುವೂ ನಿಜವಾಗಿರೋದೆ ಇಲ್ಲ. ಯಾವತ್ತೊ ಒಂದು ನಿಜವಾಗಿರುತ್ತೆ. ಅಂತದರಲ್ಲಿ ಇಲ್ಲೊಬ್ಬ ವ್ಯಕ್ತಿ ಭವಿಷ್ಯವನ್ನು (Future) ಕಣ್ಣಲ್ಲಿ ಕಾಣಬಲ್ಲನು. ಪ್ರಪಂಚದಲ್ಲಿ ಮುಂದೆ ಆಗಲಿರುವ ಪ್ರಾಕೃತಿಕ ವಿಕೋಪಗಳ (Natural Disaster) ಬಗ್ಗೆ ತಿಳಿಯಬಲ್ಲನು. ಹಾಗಿದ್ರೆ 2024 ರಲ್ಲಿ ಏನೇನು ನಡೆಯಲಿದೆ ಎಂದು ಈತ ಹೇಳಿದ್ದಾರೆ ಕೇಳಿ. 
 

ಬ್ರೆಜಿಲ್‌ನಲ್ಲಿ ಅಥೋಸ್ ಸಲೋಮ್ (Athos Solame) ಎಂಬ ವ್ಯಕ್ತಿ ಇದ್ದಾನೆ. ಈತನ ಭವಿಷ್ಯವಾಣಿ ನಿಜವಾದ ಅದೆಷ್ಟೋ ಉದಾಹರಣೆಗಳಿವೆ. ಕೊರೋನಾ ಕುರಿತು ಭವಿಷ್ಯ ನುಡಿದಿದ್ದರು, ಸೌರ ಚಂಡ ಮಾರುತ ಉಂಟಾಗುವ ಬಗ್ಗೆ ಸಹ ಭವಿಷ್ಯ ನುಡಿದಿದ್ದರು. ಇವೆರಡೂ ಸಹ ನಿಜವಾಗಿತ್ತು. ಅದಾದ ನಂತರ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು. ಇದೀಗ ಅಥೋಸ್ ಅವರು 2024 ರ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಅಥೋಸ್ ಸಲೋಮ್ ಅವರನ್ನು ಲಿವಿಂಗ್ ನಾಸ್ಟ್ರಾಡಾಮಸ್ (Living Nostradamus) ಎಂದೂ ಕರೆಯಲಾಗುತ್ತದೆ. ತಮ್ಮ ಭವಿಷ್ಯವಾಣಿಯಲ್ಲಿ, ಅವರು ವಿಶ್ವದ ವಿವಿಧ ಮೂಲೆಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು ಭಾರತದ ಬಗ್ಗೆ ಸಹ ಭವಿಷ್ಯ ನುಡಿದಿದ್ದಾರೆ.

Tap to resize

ಅಥೋಸ್ ಸಲೋಮೆ ಯಾರು?
ಬ್ರೆಜಿಲಿಯನ್ ಮೂಲದ ಮನೋವಿಜ್ಞಾನಿಯಾಗಿರುವ (Psychologist) ಅಥೋಸ್ ಸಮೋಮೆ ತನ್ನ ಬಗ್ಗೆ ಹೆಚ್ಚು ತಿಳಿಸದೆ ತನ್ನ ಜೀವನವನ್ನು ನಿಗೂಢವಾಗಿರಿಸಿದ್ದಾನೆ. ಇವರು ತಮ್ಮ ಭವಿಷ್ಯವಾಣಿಗಳ ಮೂಲಕವೇ ಜನಪ್ರಿಯತೆಗೆ ಬಂದವರು. ಇವರು ಹೇಳಿದಾ ಅದೆಷ್ಟೋ ಮಾತುಗಳು, ಭವಿಷ್ಯದಲ್ಲಿ ನಡೆದದ್ದು, ಜನರನ್ನು ಅಚ್ಚರಿಗೆ ದೂಡಿತ್ತು. 

2024ರಲ್ಲಿ ಏನೆಲ್ಲಾ ಆಗಬಹುದು ಅನ್ನೋದರ ಭವಿಷ್ಯ ನುಡಿದ ಅಥೋಸ್ ಸಲೋಮೆ 

ಕೇಟ್ ಮಿಡಲ್ಟನ್ ಆರೋಗ್ಯ ಸಮಸ್ಯೆ
'ಐರಿಶ್ ಮಿರರ್' ವರದಿಯ ಪ್ರಕಾರ, ಸಲೋಮೆ ಅವರು ಕೇಟ್ ಮಿಡಲ್ಟನ್ (Kate Midleton) ಕುರಿತು ಸಹ ಭವಿಷ್ಯ ನುಡಿದಿದ್ದರು. ಕೇಟ್ ಮತ್ತು ವಿಲಿಯಂ ರಾಜ ರಾಣಿಯಾಗಿ ಕಿರೀಟ ಧರಿಸುವ ಮುನ್ನ ಕೇಟ್ ದೊಡ್ಡದಾದ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದರು, ಇದೀಗ ಮಿಡಲ್ಟನ್ ಕ್ಯಾನ್ಸರ್ ರೋಗ ಹೊಂದಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

ಮೂರನೇ ಮಹಾಯುದ್ಧದ ಭೀತಿ
ದಕ್ಷಿಣ ಚೀನಾ ಸಮುದ್ರದಲ್ಲಿ ನಡೆದ ಘಟನೆಯ ಬಗ್ಗೆ ಅಥೋಸ್ ಸಲೋಮ್ ಹೇಳಿದ್ದರು, ಇದು ಪ್ರಮುಖ ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸುವ ಒಂದು ಬೆದರಿಕೆಯಾಗಿದೆ. ಇವರು ಹೇಳಿದಂತೆ 2024 ರ ಮೊದಲ ಹಂತದಲ್ಲಿ ಯುಎಸ್, ಚೀನಾ ಮತ್ತು ರಷ್ಯಾ ನಡುವೆ ಮುಖಾಮುಖಿಯಾಗಬಹುದು ಎಂದು ಹೇಳಿದ್ದರು.  

ರಷ್ಯಾ-ಉಕ್ರೇನ್ ಯುದ್ಧ ಉಲ್ಬಣಗೊಳ್ಳಲಿದೆ
ಪೂರ್ವ ಯುರೋಪಿನ ವಿಷಯಕ್ಕೆ ಬಂದಾಗಲೆಲ್ಲಾ, 2024 ರ ಅರ್ಧಾವಧಿಯಲ್ಲಿ ಗಡಿ ಘರ್ಷಣೆಗಳು ಅಥವಾ ನ್ಯಾಟೋ ದೇಶಗಳು ಭಾಗವಹಿಸಿದರೆ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಭವಿಷ್ಯವಾಣಿ ನುಡಿದಿದ್ದಾರೆ. 

ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ
ವಿವಿಧ ಮಧ್ಯಸ್ಥಗಾರರ ಬಾಹ್ಯ ಹಸ್ತಕ್ಷೇಪ ಮತ್ತು ಸಂಘರ್ಷಗಳಿಂದಾಗಿ ಮಧ್ಯಪ್ರಾಚ್ಯವು ಅಸ್ಥಿರವಾಗಲಿದೆ ಎಂದು ಸಲೋಮ್ ತಿಳಿಸಿದ್ದಾರೆ. ಆಫ್ರಿಕಾದ ದೇಶಗಳಾದ ಲಿಬಿಯಾ, ಸುಡಾನ್ ಮತ್ತು ನೈಜೀರಿಯಾ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯಿಂದಾಗಿ ವಿವಾದಗಳೊಂದಿಗೆ ಸಂಘರ್ಷಗಳಿಗೆ ಗುರಿಯಾಗುತ್ತವೆ ಎಂದಿದ್ದರು. ಏಷ್ಯಾದ ಬಗ್ಗೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಮತ್ತು ಕೊರಿಯಾ ಪರ್ಯಾಯ ದ್ವೀಪಗಳು ಕಳವಳಕಾರಿ ಕ್ಷೇತ್ರಗಳಾಗಿವೆ ಎಂದೂ ಸಹ ಹೇಳಿದ್ದಾರೆ. 

ಭಾರತದ ಬಗ್ಗೆ ಭವಿಷ್ಯ
2024 ರಲ್ಲಿ ಭಾರತದ ಪ್ರಗತಿಯ ಬಗ್ಗೆ ಸಲೋಮ್ ಭವಿಷ್ಯ ನುಡಿದಿದ್ದಾರೆ. ಅವರು ಅದನ್ನು ಹುಲಿಯಂತೆ ಚಿತ್ರಿಸಿದ್ದಾರೆ. ಅಂದರೆ ಭಾರತ ಸ್ಟ್ರಾಂಗ್ ದೇಶವಾಗಲಿದೆ ಎನ್ನುವ ಅರ್ಥ ಇರಬಹುದು. ಇನ್ನು ಆಫ್ರಿಕಾದಲ್ಲಿ ಫಿನ್ಟೆಕ್ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುವ ಮೂಲಕ ಟೆಕ್ ಕ್ಷೇತ್ರಗಳಲ್ಲಿ ಜಾಗೃತಿಯ ಬಗ್ಗೆ ಅವರು ಮಾತನಾಡಿದರು. ಫಿಲಿಪೈನ್ಸ್, ವಿಯೆಟ್ನಾಂ ಮತ್ತು ಚೀನಾದ ಕೆಲವು ಭಾಗಗಳಲ್ಲಿ ಚಂಡಮಾರುತದ ಉಲ್ಬಣವಾಗುವ ಬಗ್ಗೆಯೂ ಸಲೋಮ್ ಊಹಿಸಿದ್ದಾರೆ.

Latest Videos

click me!