ಮಕರ ಸಂಕ್ರಾಂತಿ ಪುಣ್ಯ ಕಾಲ ಬೆಳಗ್ಗೆ 9 ರಿಂದ ಸಂಜೆವರೆಗೂ ದಿನಪೂರ್ತಿ ಇರುತ್ತದೆ. ಮಹಾಪುಣ್ಯಕಾಲ - ಬೆಳಗ್ಗೆ 9 ರಿಂದ 10.45 ವರೆಗೆ ಇದೆ. ಸ್ನಾನ, ತರ್ಪಣ, ದಾನ ವಿಧಿಗಳನ್ನು ಮತ್ತು ಸಹಸ್ರ ದೇವನ ಯಜ್ಞವನ್ನು ಮಾಡುವುದರಿಂದ ಪುಣ್ಯ ಫಲಸಿಗುತ್ತದೆ. ಫಲ ಸಿಗಲು ಹಿತ್ತಾಳೆ , ಬೆಳ್ಳಿ ಕೊಡಪ ಗಳಲ್ಲಿ ನೀರು ತುಂಬಿ , ತುಳಸಿ ಆಕ್ಷತೆ ಹಾಕಿ ಪುರುಷ ಸೂಕ್ತದಿಂದ ಜಪ ಮಾಡಿ, ಹಾಗೇ ಗಂಗಾ ಕಾವೇರಿ ಸ್ಮರಣೆ ಮಾಡಿ. ಹೀಗೆ ಮಾಡುವಾಗ ಪೂರ್ವಕ್ಕೆ ಮುಖ ಹಾಕಿ ಸ್ಮರಣೆ ಮಾಡಿ ಒಳ್ಳೆಯದಾಗುತ್ತದೆ. ಹಾಗೇ 12 ರಾಶಿಗಳ ಫಲಾಫಲ ಎನು ಎಂಬುದನ್ನು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ಹೇಳಿದ್ದಾರೆ.