ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಗಳ ಸ್ವಭಾವವನ್ನು ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರದಲ್ಲಿ ಮೂಲ ಸಂಖ್ಯೆಗೆ ಬಹಳ ಮಹತ್ವವಿದೆ. ಹುಟ್ಟಿದ ದಿನಾಂಕದ ಆಧಾರದ ಮೇಲೆ ಮೂಲ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಕೆಲವು ದಿನಗಳಲ್ಲಿ ಹುಟ್ಟಿದವರು ತುಂಬಾ ವಿಶೇಷವಾಗಿರುತ್ತಾರೆ. ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಹಾಗಾದರೆ ಯಾವ ದಿನಗಳಲ್ಲಿ ಹುಟ್ಟಿದವರು ಸ್ನೇಹಿತರಿಗಾಗಿ ಪ್ರಾಣವನ್ನೂ ಲೆಕ್ಕಿಸುವುದಿಲ್ಲ ಎಂದು ಇಲ್ಲಿ ತಿಳಿದುಕೊಳ್ಳೋಣ.
ಸಂಖ್ಯಾಶಾಸ್ತ್ರದ ಪ್ರಕಾರ ಮೂಲ ಸಂಖ್ಯೆ 1 ಹೊಂದಿರುವ ವ್ಯಕ್ತಿಗಳು ಸ್ನೇಹಕ್ಕಾಗಿ ಏನು ಬೇಕಾದರೂ ಮಾಡುತ್ತಾರಂತೆ. ಯಾವುದೇ ತಿಂಗಳಿನಲ್ಲಿ 1, 10, 19, 28 ದಿನಗಳಲ್ಲಿ ಹುಟ್ಟಿದವರ ಮೂಲ ಸಂಖ್ಯೆ 1 ಆಗಿರುತ್ತದೆ. ಈ ಸಂಖ್ಯೆಯ ಅಧಿಪತಿ ಸೂರ್ಯ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ವ್ಯಕ್ತಿತ್ವ, ನಾಯಕತ್ವ, ಆರೋಗ್ಯ, ಅಧಿಕಾರ, ಆತ್ಮವಿಶ್ವಾಸಗಳಿಗೆ ಕಾರಕ ಎಂದು ಪರಿಗಣಿಸಲಾಗುತ್ತದೆ.