ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನ 3 ನೇ ತಾರೀಕಿನಂದು ಹುಟ್ಟಿದವರಿಗೆ ಯಶಸ್ಸು ಕಾದಿದೆ. ಇವರು ಮಾತನಾಡುವುದರಲ್ಲಿ ಬಹಳ ಪ್ರತಿಭಾವಂತರು ಇವರು ತಮ್ಮ ಜೀವನದಲ್ಲಿ ಯಶಸ್ಸನ್ನು ಬಹಳ ಬೇಗನೆ ಸಾಧಿಸುತ್ತಾರೆ. ಪರಿಚಯವಿಲ್ಲದ ಜನರೊಂದಿಗೆ ಯಾವುದೇ ಹಿಂಜರಿಕೆ ಮತ್ತು ಭಯವಿಲ್ಲದೆ ಮಾತನಾಡುವ ಸಾಮರ್ಥ್ಯ ಇವರಿಗೆ ಇದೆ. ಇವರು ಏನನ್ನಾದರೂ ಸಾಧಿಸಲು ಕಷ್ಟಪಟ್ಟು ದುಡಿಯಬೇಕಾಗಿಲ್ಲ. ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಯಾರಾದರೂ ಒಂದು ರೀತಿಯಲ್ಲಿ ಅವರಿಗೆ ಸಹಾಯ ಮಾಡುತ್ತಾರೆ. ಇವರ ಮಾತು ಇತರರನ್ನು ಆಕರ್ಷಿಸುತ್ತದೆ. ಜನರಿಗೆ ಇವರ ಮೇಲೆ ಗೌರವ ಹೆಚ್ಚು. ಈ ಗುಣದಿಂದಲೇ ಇವರಿಗೆ ಅವಕಾಶಗಳು ಸಿಗುತ್ತವೆ.