Astrology Tips: ಚಿನ್ನ ಕಳೆದು ಹೋಗೋದು ಶುಭವೇ ಅಥವಾ ಅಶುಭವೇ?

First Published Sep 20, 2022, 4:41 PM IST

ಚಿನ್ನವು ಎಲ್ಲರನ್ನೂ ಆಕರ್ಷಿಸುತ್ತದೆ. ಅದರಲ್ಲೂ ಹೆಂಗಸರು ಚಿನ್ನದ ಓಲೆ ಬೇಕು, ಚಿನ್ನದ ಸರ ಬೇಕು, ಬಳೆ ಬೇಕು ಎಂದು ಒಂದೊಂದು ಬೇಡಿಕೆ ಇಡುತ್ತಾರೆ. ಆದರೆ ಚಿನ್ನದ ಬೆಲೆ ಹೆಚ್ಚುತ್ತಲೇ ಹೋಗುತ್ತಿರೋದ್ರಿಂದ, ಖರೀದಿ ಮಾಡೋದು ಸಹ ಕಷ್ಟವಾಗಿದೆ. ಚಿನ್ನದ ಬಗ್ಗೆ ಜ್ಯೋತಿಷ್ಯದಲ್ಲಿ ಹಲವು ಮಾಹಿತಿಯನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಗುರು ಗ್ರಹದ ಅಂಶವೆಂದು ಪರಿಗಣಿಸಲಾಗುತ್ತದೆ. ಅದು ಕಳೆದುಹೋದರೆ ಅಥವಾ ಸಿಕ್ಕಿದರೆ, ಅದರರ್ಥ ಏನಿರುತ್ತೆ, ತಿಳಿದುಕೊಳ್ಳಿ.

ಚಿನ್ನವು ಅತ್ಯಂತ ಅಮೂಲ್ಯವಾದ ಲೋಹಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದಲ್ಲಿ, ಚಿನ್ನವನ್ನು ಪವಿತ್ರ ಲೋಹವಾಗಿ ನೋಡಲಾಗುತ್ತದೆ. ಚಿನ್ನದ ಹೊಳಪು ಎಲ್ಲರನ್ನೂ ಆಕರ್ಷಿಸುತ್ತದೆ. ಮಹಿಳೆಯರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ವಿವಾಹಿತ ಮಹಿಳೆಯರ ಮಂಗಳಸೂತ್ರದಲ್ಲಿ ಇದು ಯಾವುದರ ಸೂಚನೆ ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದರೆ, ತಿಳಿದುಕೊಳ್ಳೋಣ.

ಜ್ಯೋತಿಷ್ಯದಲ್ಲಿ ಚಿನ್ನದ ಮಹತ್ವ (importance of gold)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನವು ಗುರುವಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಗುರುವನ್ನು ದೇವ ಗುರು ಬೃಹಸ್ಪತಿ ಎಂದೂ ಸಹ ಕರೆಯಲಾಗುತ್ತದೆ. ಗುರುಗ್ರಹವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಇದನ್ನು ಜ್ಞಾನ, ಆಡಳಿತ, ಉನ್ನತ ಸ್ಥಾನ ಮತ್ತು ಸಂತೋಷ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ.

ಚಿನ್ನವನ್ನು ಕಳೆದುಕೊಳ್ಳುವುದು ಶುಭವೋ? ಅಶುಭವೋ?
ಚಿನ್ನವು ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸಹ ಸಂಬಂಧ ಹೊಂದಿದೆ. ಅದನ್ನು ಕಳೆದುಕೊಳ್ಳುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ಚಿನ್ನವನ್ನು ರಕ್ಷಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಚಿನ್ನವನ್ನು ಕಳೆದುಕೊಳ್ಳುವುದು ದುರಾದೃಷ್ಟದ (bad luck) ಸಂಕೇತವಾಗಿದೆ. ಇದರೊಂದಿಗೆ, ಇದು ಗುರುವಿನ ದುರ್ಬಲತೆಯ ಸಂಕೇತವೂ ಆಗಿರಬಹುದು. 
 

ಗುರುವಿನ ದುರ್ಬಲತೆಯ ಕಾರಣದಿಂದಾಗಿ, ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುವುದು ಕಷ್ಟ. ಶಿಕ್ಷಣ ಕ್ಷೇತ್ರದಲ್ಲಿ ಅಡೆತಡೆ ಉಂಟಾಗುತ್ತದೆ. ಇದರೊಂದಿಗೆ, ವೈವಾಹಿಕ ಜೀವನದಲ್ಲಿಯೂ (married life) ಸಮಸ್ಯೆ ಉಂಟಾಗುತ್ತೆ. ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬರಬಹುದು. ಚಿನ್ನವು ಕಳೆದುಹೋದರೆ, ನೀವು ಗುರುವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  

ಕುತ್ತಿಗೆಯ ಚಿನ್ನವನ್ನು ಅಂದರೆ ಸರ (neck chain) ಕಳೆದುಕೊಳ್ಳುವುದು ವೈಭವದ ಇಳಿಕೆಯ ಸಂಕೇತವಾಗಿದೆ. ಚಿನ್ನದ ಕಡಗವನ್ನು ಕಳೆದುಕೊಳ್ಳುವುದು - ಇದು ಗೌರವದಲ್ಲಿ ಇಳಿಕೆಯ ಸಂಕೇತವಾಗಿರಬಹುದು. ಚಿನ್ನದ ಉಂಗುರವನ್ನು ಕಳೆದುಕೊಳ್ಳುವುದು - ಚಿನ್ನದ ಉಂಗುರವನ್ನು ಕಳೆದುಕೊಳ್ಳುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೂಗಿನ ಚಿನ್ನವನ್ನು ಕಳೆದುಕೊಳ್ಳುವುದು - ಇದನ್ನು ವೈಫಲ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕಿವಿಯೋಲೆಗಳನ್ನು (earing) ಕಳೆದುಕೊಳ್ಳುವುದು - ಕಿವಿಯಲ್ಲಿ ಧರಿಸಿದ ಚಿನ್ನವು ಕಳೆದುಹೋದರೆ, ಆಗ ಕೆಲವು ಅಶುಭ ಸುದ್ದಿಗಳನ್ನು ಪಡೆಯುವ ಸೂಚನೆ ಇರಬಹುದು.
ಆದುದರಿಂದ ಮುಂದೆ ಚಿನ್ನ ಕಳೆದುಹೋದರೆ ಇದರ ಬಗ್ಗೆ ಎಚ್ಚರ ವಹಿಸೋದು ಮುಖ್ಯ. 
 

click me!