ಬುದ್ಧಿವಂತ ವ್ಯಕ್ತಿ ಈ ಒಂದು ತಪ್ಪು ಮಾಡ್ಲೇ ಬಾರದಂತೆ! ಚಾಣಕ್ಯ ಹೇಳೋ ತಪ್ಪು ಯಾವುದು ಅದು?

First Published | Sep 12, 2023, 3:33 PM IST

ಆಚಾರ್ಯ ಚಾಣಕ್ಯನು ತನ್ನ ನೀತಿಗಳಿಂದ ಪ್ರಸಿದ್ಧ. ಅವರ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ದೈನಂದಿನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ತಪ್ಪಿಸಬಹುದು. ಚಾಣಕ್ಯನ ನೀತಿಗಳು ಯಶಸ್ಸಿಗೆ ರಾಮಬಾಣ ಅಂದ್ರೆ ತಪ್ಪಲ್ಲ. ಜೀವನದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ಏನೇನು ಮಾಡಬೇಕು ಅನ್ನೋದನ್ನು ಚಾಣಕ್ಯ ತಿಳಿಸಿದ್ದಾರೆ. 
 

ಸತ್ಯವನ್ನೇ ಮಾತನಾಡಿ
ನೀವು ಸಂತೋಷದಿಂದಿರಲು ಮತ್ತು ಯಶಸ್ವಿಯಾಗಲು ಬಯಸಿದರೆ, ಯಾವಾಗಲೂ ಸತ್ಯವನ್ನು ಮಾತನಾಡಿ, ಬುದ್ಧಿವಂತಿಕೆಯಿಂದ ಖರ್ಚು ಮಾಡಿ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಎಂದು ಚಾಣಕ್ಯ ಹೇಳುತ್ತಾನೆ. ಇದನ್ನು ಮಾಡುವವರು ಶಾಂತಿಯುತವಾಗಿ ಮಲಗುತ್ತಾರೆ. 

ಪ್ರಬಲ ಶತ್ರು -ದುರ್ಬಲ ಸ್ನೇಹಿತರು ಇರಬಾರದು
ಚಾಣಕ್ಯನ ನೀತಿಯು ಪ್ರಬಲ ಶತ್ರುಗಳು ಮತ್ತು ದುರ್ಬಲ ಸ್ನೇಹಿತರು ಇಬ್ಬರೂ ಯಾವಾಗಲೂ ಒಂದಲ್ಲ ಒಂದು ವಿಷ್ಯಗಳಿಂದ ನಿಮ್ಮನ್ನು ನೋಯಿಸುತ್ತಾರೆ. ಅವರಿಂದ ದೂರ ಇರೋದು ಉತ್ತಮ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. 

Tap to resize

ಹಸಿವಿನಿಂದ ಬಳಲಬಾರದು
ಬುದ್ಧಿವಂತ ವ್ಯಕ್ತಿಯು ಎಂದಿಗೂ ಹಸಿವಿನಿಂದ ಬಳಲಬಾರದು (Should not be hungry). ಬುದ್ಧಿವಂತಿಕೆಯು ಅಜ್ಞಾನವನ್ನು ನಾಶಪಡಿಸುತ್ತದೆ ಮತ್ತು ದೊಡ್ಡ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಸುಲಭವಾಗಿ ನಿವಾರಿಸಬಹುದು. ಆದರೆ ಹಸಿವು ಬುದ್ಧಿಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದು ವ್ಯಕ್ತಿಯ ಜೀವನವನ್ನು ಹಾನಿಗೊಳಿಸುತ್ತದೆ. ಆದುದರಿಂದ ಹಸಿವಿನಿಂದ ಇರಬಾರದು.

ಇಂತಹ ಸ್ಥಳಗಳಲ್ಲಿ ಬಾಳಬಾರದು
ಚಾಣಕ್ಯನ (Chanakya Niti) ಪ್ರಕಾರ, ಎಲ್ಲಿ ಗೌರವವಿಲ್ಲವೋ, ಎಲ್ಲಿ ಗಳಿಸಲು ಸಾಧ್ಯವಿಲ್ಲವೋ, ಎಲ್ಲಿ ಜ್ಞಾನವನ್ನು ಹೆಚ್ಚಿಸುವ ಸಾಧ್ಯತೆಗಳಿಲ್ಲವೋ,  ಎಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ಇಲ್ಲವೋ ಅಂತಹ ಜಾಗದಲ್ಲಿರೋದರಿಂದ ಏನೂ ಪ್ರಯೋಜನ ಇಲ್ಲ. ಅಂತಹ ಸ್ಥಳವನ್ನು ತಕ್ಷಣ ಬಿಡಬೇಕು ಎನ್ನುತ್ತಾರೆ.

ಕರ್ಮ ಮತ್ತು ಜ್ಞಾನ
ಜೀವನದಲ್ಲಿ ಯಶಸ್ಸನ್ನು ಪಡೆಯಲು ಚಾಣಕ್ಯನು (Acharya Chanakya) ಎರಡು ವಿಶೇಷ ಸೂತ್ರಗಳನ್ನು ನೀಡಿದ್ದಾನೆ. ಪಕ್ಷಿಗಳು ಎರಡು ರೆಕ್ಕೆಗಳ ಸಹಾಯದಿಂದ ಆಕಾಶದಲ್ಲಿ ಹಾರುವಂತೆ, ಕರ್ಮ ಮತ್ತು ಜ್ಞಾನದ ಎರಡು ರೆಕ್ಕೆಗಳ ಸಹಾಯದಿಂದ, ವ್ಯಕ್ತಿಯು ಯಶಸ್ಸಿನ ಆಕಾಶದಲ್ಲಿ ಹಾರಲು ಸಾಧ್ಯವಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

Latest Videos

click me!