ಜೀವನದಲ್ಲಿ ಖುಷ್ ಖುಷಿಯಾಗಿರಬೇಕಾ? ಮಹಾಭಾರತ ಹೇಳಿದ ಜೀವನ ಪಾಠ ಕಲಿತುಕೊಳ್ಳಿ ಸಾಕು!

First Published | Nov 18, 2023, 11:52 AM IST

ಮಹಾಭಾರತ ಅನ್ನೋದು ಕೇವಲ ಕುರುಕ್ಷೇತ್ರ ಯುದ್ಧವಲ್ಲ. ಮಹಾಭಾರತದಿಂದ ನಾವು ಕಲಿಯಬೇಕಾದ್ದು ತುಂಬಾ ಇದೆ. ಇಲ್ಲಿದೆ ಮಹಾಭಾರತದಿಂದ ಆಯ್ದ ಜೀವನ ಪಾಠಗಳು. ಇವುಗಳನ್ನು ಅಳವಡಿಸಿಕೊಂಡ್ರೆ ಜೀವನದಲ್ಲಿ ಯಶಸ್ಸು ಗ್ಯಾರಂಟಿ. 
 

ಮಹಾಭಾರತಕ್ಕೆ (Mahabharata) ಸಂಬಂಧಿಸಿದ ಪಾತ್ರಗಳು ಮತ್ತು ಕಥೆಗಳು ಎಲ್ಲರಿಗೂ ತಿಳಿದಿವೆ. ಹಿಂದೂ ಧರ್ಮದ ಈ ಪುಸ್ತಕದಿಂದ ನಾವು ಬಹಳಷ್ಟು ಕಲಿಯುತ್ತೇವೆ. ನೀವು ಜೀವನದಲ್ಲಿ ಯಶಸ್ಸನ್ನು ಬಯಸಿದರೆ, ಈ ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಡಿ. ಇದು ನಿಮಗೆ ಜೀವನದಲ್ಲಿ ಯಶಸ್ಸು ನೀಡುತ್ತೆ. ಮಹಾಭಾರತದಿಂದ ನಾವು ಏನನ್ನು ಕಲಿಯಬೇಕು ಎಂದು ತಿಳಿಯೋಣ.

ಕೆಟ್ಟ ಸಹವಾಸದಿಂದ ದೂರವಿರಿ 
ಜೀವನದಲ್ಲಿ ಕೆಟ್ಟ ಸಹವಾಸದಿಂದ ಯಾವಾಗಲೂ ದೂರವಿರಬೇಕು ಎಂದು ಮಹಾಭಾರತ ನಮಗೆ ಕಲಿಸುತ್ತದೆ. ಕೆಟ್ಟ ಸಹವಾಸದಿಂದ ದೂರ ಇರದಿದ್ದರೆ ಒಬ್ಬ ವ್ಯಕ್ತಿಯು ಜೀವನದಲ್ಲಿ (career life) ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ.

Tap to resize

ಉತ್ತಮ ಸ್ನೇಹಿತರ ಆಯ್ಕೆ 
ಜೀವನದಲ್ಲಿ ಸ್ನೇಹಿತರು (best friends) ಯಾವಾಗಲೂ ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುತ್ತಾರೆ. ಶ್ರೀಕೃಷ್ಣನು ಪಾಂಡವರನ್ನು ಬೆಂಬಲಿಸಿದಂತೆಯೇ. ಅದೇ ರೀತಿ, ಉತ್ತಮ ಸ್ನೇಹಿತನನ್ನು ಆಯ್ಕೆ ಮಾಡುವುದು ಪ್ರತಿ ಕಷ್ಟಕರ ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡುತ್ತೆ . 

ಜೀವನದಿಂದ ಕಲಿಯಿರಿ
ಮಹಾಭಾರತದಲ್ಲಿ, ಅರ್ಜುನನು ತನ್ನ ಗುರುಗಳಿಂದ ಮಾತ್ರವಲ್ಲ ಎಲ್ಲಾ ಅನುಭವಗಳಿಂದ ಕಲಿತನು. ನಾವು ಯಾವಾಗಲೂ ನಮ್ಮ ವೈಫಲ್ಯಗಳಿಂದ (learn from life) ಕಲಿಯಬೇಕು. ಇದು ವ್ಯಕ್ತಿಯನ್ನು ಬಹಳ ದೂರ ಹೋಗುವಂತೆ ಮಾಡುತ್ತದೆ.

ಅಪೂರ್ಣ ಜ್ಞಾನವು ಅಪಾಯಕಾರಿ 
ಯಾವುದರ ಬಗ್ಗೆಯೂ ಅಪೂರ್ಣ ಜ್ಞಾನ ಹೊಂದಿರೋದು ತುಂಬಾ ಅಪಾಯಕಾರಿ. ಜೀವನದಲ್ಲಿ ಯಶಸ್ಸನ್ನು ಪಡೆಯಲು, ಒಬ್ಬರು ಯಾವಾಗಲೂ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. 

ಕೆಟ್ಟ ಅಭ್ಯಾಸಗಳನ್ನು ತೊಡೆದುಹಾಕಿ 
ಜೀವನದಲ್ಲಿ ಯಶಸ್ಸನ್ನು ಪಡೆಯಲು, ವ್ಯಕ್ತಿಯು ಕೆಟ್ಟ ಅಭ್ಯಾಸಗಳಿಂದ (bad habits) ದೂರವಿರಬೇಕು. ಈ  ಕೆಟ್ಟ ಅಭ್ಯಾಸಗಳು ನಿಮ್ಮನ್ನು ಜೀವನದಲ್ಲಿ ಮುಂದೆ ಸಾಗಲು ಬಿಡುವುದಿಲ್ಲ.

ಸತ್ಯವನ್ನು ಬೆಂಬಲಿಸಿ
ಹಿಂದೂ ಧರ್ಮದ ಪ್ರತಿಯೊಂದು ಪುಸ್ತಕವೂ ಸತ್ಯದ ಹಾದಿಯಲ್ಲಿ ನಡೆಯಲು ನಮಗೆ ಕಲಿಸುತ್ತದೆ. ಜೀವನದಲ್ಲಿ ಯಶಸ್ವಿಯಾಗಲು, ಒಬ್ಬರು ಯಾವಾಗಲೂ ಸತ್ಯವನ್ನು ಬೆಂಬಲಿಸಬೇಕು. ಇದು ವ್ಯಕ್ತಿಯನ್ನು ಯಾವಾಗಲೂ ಎತ್ತರಕ್ಕೆ ಹೋಗುವಂತೆ ಮಾಡುತ್ತದೆ.

ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. 
ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾವು ಭಾವನೆಗಳನ್ನು ನಿಯಂತ್ರಿಸಬೇಕು ಎಂದು ಮಹಾಭಾರತ ನಮಗೆ ಕಲಿಸುತ್ತದೆ. ಭಾವನೆಗಳಲ್ಲಿ ತೆಗೆದುಕೊಂಡ ನಿರ್ಧಾರವು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. 

Latest Videos

click me!