ತುಲಾ- ಸಿಂಹ ರಾಶಿಯವರು ಯಾವುದೇ ಸರ್ಪ್ರೈಸ್ ನ್ನು ಯೋಜಿಸುವುದರಲ್ಲಿ ನಿಪುಣರು. ತುಲಾ ರಾಶಿಯವರು ಸುಂದರವಾಗಿರುವ ಮೂಲಕ ಸಂಗಾತಿಯನ್ನು ಆಕರ್ಷಿಸುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಈ ಎರಡು ರಾಶಿಚಕ್ರದ ಜೋಡಿಗಳು ದಾಂಪತ್ಯದಲ್ಲಿ ಕ್ರಿಯಾತ್ಮಕವಾಗಿರುತ್ತವೆ. ದಂಪತಿಗಳು ಸಂತೋಷದ ಜೀವನವನ್ನು ನಡೆಸಲು ಅಗತ್ಯವಾದ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ವಾರಾಂತ್ಯದಲ್ಲಿ ಸಂಬಂಧಿಕರೊಂದಿಗೆ ಪಿಕ್ನಿಕ್ ಪ್ಲಾನ್ ಮಾಡುವುದು, ರೆಸ್ಟೊರೆಂಟ್ ಗಳಲ್ಲಿ ಔತಣಕೂಟಗಳನ್ನು ಸವಿಯುವುದು, ಮುಂತಾದ ಚಟುವಟಿಕೆಗಳು ದಾಂಪತ್ಯ ಬಂಧವನ್ನು ಮಧುರಗೊಳಿಸುತ್ತವೆ.