ಹೆಣ್ಣಿಗೆ ನಾಚಿಕೆಯೇ ಭೂಷಣ ಎಂಬ ಮಾತಿದೆ. ಆದ್ರೆ ಎಲ್ಲಾ ವಿಷಯಗಳಲ್ಲಿ ಹೆಣ್ಣು ನಾಚಿಕೆಯಿಂದ ಹಿಂದೆ ಉಳಿಯಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಸಂಸಾರದಲ್ಲಿ ಹೆಣ್ಣು ನಾಚಿಕೊಳ್ಳಬಾರದು. ಹೆಂಡತಿಯನ್ನು ರಕ್ಷಿಸುವುದು ಗಂಡನ ಕರ್ತವ್ಯವೋ ಅದೇ ರೀತಿ ಗಂಡನಿಗೆ ಕಷ್ಟ ಬಂದಾಗ ಅವನ ಪ್ರತಿಯೊಂದು ಬೇಕು ಬೇಡಗಳನ್ನು ನೋಡಿಕೊಳ್ಳುವುದು ಹೆಂಡತಿಯ ಜವಾಬ್ದಾರಿ ಆಗಿರುತ್ತದೆ.
ಪತಿ ಮತ್ತು ಪತ್ನಿ ಪರಸ್ಪರರ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯಲ್ಲಿ ಎಂದಿಗೂ ನಾಚಿಕೆಪಡಬಾರದು. ಈ ವಿಷಯಗಳಲ್ಲಿ ನಾಚಿಕೊಂಡ್ರೆ ಸಂಸಾರದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇರುತ್ತೆ.
ಇನ್ನು ಪುರುಷ ತನ್ನ ಸಂಗಾತಿಯಿಂದ ಅತಿಯಾಗಿ ಪ್ರೀತಿ ನಿರೀಕ್ಷೆ ಮಾಡುತ್ತಾನೆ. ಹೆಣ್ಣು ನಾಚಿಕೊಂಡು ಪ್ರೀತಿ ನೀಡುವಲ್ಲಿ ಕೊರತೆಯನ್ನುಂಟು ಮಾಡಬಾರದು.
ಒಂದು ವೇಳೆ ಸಂಗಾತಿ/ಪತ್ನಿಯಿಂದ ಪ್ರೀತಿಯಲ್ಲಿ ಕೊರತೆ ಉಂಟಾದ್ರೆ ಪುರುಷ ಹೊರಗೆ ಹೊಸ ಪ್ರೀತಿಯ ಹುಡುಕಾಟದಲ್ಲಿರುತ್ತಾನೆ. ಇದು ಸಂಸಾರಕ್ಕೆ ತುಂಬಾ ಅಪಾಯಕಾರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.