ಮೂಲಾಂಕ 1ನ್ನು ಹೊಂದಿರುವ ಮಕ್ಕಳು ಧೈರ್ಯ ಮತ್ತು ನಾಯಕತ್ವದ ಗುಣಗಳಿಂದ (leadership quality) ತುಂಬಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದ ಮಕ್ಕಳ ಮೂಲಾಂಕ 1 ಆಗಿರುತ್ತೆ. ಈ ಸಂಖ್ಯೆಯು ಸೂರ್ಯ ಗ್ರಹದೊಂದಿಗೆ ಸಂಬಂಧ ಹೊಂದಿದೆ, ಇದನ್ನು ಶಕ್ತಿ, ಧೈರ್ಯ ಮತ್ತು ನಾಯಕತ್ವದ ಸಾಮರ್ಥ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಅಂತಹ ಮಕ್ಕಳು ತೀಕ್ಷ್ಣವಾದ ಬುದ್ಧಿವಂತಿಕೆ, ಆತ್ಮವಿಶ್ವಾಸ (self confidence) ಮತ್ತು ಹೋರಾಡುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಜೀವನದಲ್ಲಿ ಮಹತ್ವದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ ಮತ್ತು ಯಾರ ಅಡಿಯಲ್ಲಿಯೂ ಕೆಲಸ ಮಾಡಲು ಇಷ್ಟಪಡುವುದಿಲ್ಲ.