ಹನುಮಂತನನ್ನೇ ಇಷ್ಟಪಟ್ಟಿದ್ದ ರಾವಣನ ಪುತ್ರಿ…ವಿದೇಶದಲ್ಲಿ ಈಕೆಗಿದೆ ಅದೃಷ್ಟ ದೇವತೆಯ ಸ್ಥಾನ!

Published : May 21, 2025, 05:59 PM ISTUpdated : May 21, 2025, 06:00 PM IST

ರಾಮಾಯಣದಲ್ಲಿ ಬರುವ ರಾವಣನ ಮಕ್ಕಳಾದ ಅಕ್ಷಯ್ ಕುಮಾರ್ ಮತ್ತು ಮೇಘನಾಥರ ಬಗ್ಗೆ ಎಲ್ಲರೂ ಕೇಳಿರಬಹುದು ಮತ್ತು ಓದಿರಬಹುದು. ಆದರೆ ರಾವಣನಿಗೆ ಒಬ್ಬಳು ಮಗಳಿದ್ದಳು ಎಂದು ನಿಮಗೆ ತಿಳಿದಿದೆಯೇ? ಬನ್ನಿ ಆಕೆಯ ಬಗ್ಗೆ ತಿಳಿಯೋಣ.   

PREV
17
ಹನುಮಂತನನ್ನೇ ಇಷ್ಟಪಟ್ಟಿದ್ದ ರಾವಣನ ಪುತ್ರಿ…ವಿದೇಶದಲ್ಲಿ ಈಕೆಗಿದೆ ಅದೃಷ್ಟ ದೇವತೆಯ ಸ್ಥಾನ!

ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತಮಾನಸಗಳು ರಾವಣನ ಪುತ್ರರ ಬಗ್ಗೆ ಮಾತ್ರ ಉಲ್ಲೇಖಿಸುತ್ತವೆ. ರಾವಣನಿಗೆ ಮೇಘನಾದ್ (Meghanad), ಅಕ್ಷಯ್ ಕುಮಾರ್ ಮತ್ತು ಪ್ರಹಸ್ತ ಎಂಬ ಮೂವರು ಗಂಡು ಮಕ್ಕಳಿದ್ದರು. ಆದರೆ ಗಂಡು ಮಕ್ಕಳಲ್ಲದೆ, ರಾವಣನಿಗೆ ಒಬ್ಬಳು ಮಗಳೂ ಇದ್ದಳು ಎಂದು ನಿಮಗೆ ತಿಳಿದಿದೆಯೇ? ಥೈಲ್ಯಾಂಡ್ ಮತ್ತು ಕಾಂಬೋಡಿಯಾದಲ್ಲಿ ಆಕೆಯನ್ನು ಪೂಜಿಸುತ್ತಾರೆ. 
 

27

ರಾವಣನ ಮಗಳನ್ನು ಎಲ್ಲಿ ಪೂಜಿಸಲಾಗುತ್ತದೆ?
ರಾವಣನ ಹೆಣ್ಣುಮಕ್ಕಳನ್ನು ಆನಂದ ರಾಮಾಯಣ (Ananda Ramayana), ಆಧ್ಯಾತ್ಮ ರಾಮಾಯಣ ಮತ್ತು ದಕ್ಷಿಣ ಭಾರತದ ಕೆಲವು ಜಾನಪದ ಕಥೆಗಳಲ್ಲಿಯೂ ಉಲ್ಲೇಖಿಸಲಾಗಿದೆ. ರಾವಣನ ಹೆಣ್ಣುಮಕ್ಕಳಲ್ಲಿ ಒಬ್ಬಳ ಹೆಸರು ಸ್ವರ್ಣ ಮತ್ಸ್ಯ ಮತ್ತು ಇನ್ನೊಬ್ಬ ಮಗಳ ಹೆಸರು ಕುಂಭಿನಿ. ರಾವಣನ ಮಗಳು ಸ್ವರ್ಣ ಮತ್ಸ್ಯ ಅಥವಾ ಸುವರ್ಣಂಚಳನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾದಲ್ಲಿ ಪೂಜಿಸಲಾಗುತ್ತದೆ.

37

ವಿದೇಶಿ ರಾಮಾಯಣದಲ್ಲಿ ಇವರ ಉಲ್ಲೇಖ ಇದೆ
ರಾವಣನ ಮಗಳು ಸ್ವರ್ಣ ಮತ್ಸ್ಯ (Swarna Matsya) ಅಥವಾ ಸುವರ್ಣಮಾಚಳ ಉಲ್ಲೇಖವು ಥೈಲ್ಯಾಂಡ್‌ನ ರಾಮಕೀನ್ ರಾಮಾಯಣ ಮತ್ತು ಕಾಂಬೋಡಿಯಾದ ರಾಮಕೇರ್ ರಾಮಾಯಣದಲ್ಲಿ ಕಂಡುಬರುತ್ತದೆ. ಸುವರ್ಣಮಾಚಳ ದೇಹವು ಚಿನ್ನದಂತೆ ಹೊಳೆಯುತ್ತಿತ್ತು ಮತ್ತು ಅವಳನ್ನು ಚಿನ್ನದ ಮತ್ಸ್ಯಕನ್ಯೆ ಎಂದೂ ಕರೆಯಲಾಗುತ್ತದೆ ಎಂದು ಹೇಳಲಾಗುತ್ತದೆ.

47

ರಾವಣನ ಮಗಳು ಹನುಮನನ್ನು ಪ್ರೀತಿಸಿದ್ದಳಂತೆ
ಥೈಲ್ಯಾಂಡ್ ಮತ್ತು ಕಾಂಬೋಡಿಯಾದ (Cambodia) ರಾಮಾಯಣದ ಪ್ರಕಾರ, ರಾವಣನ ಮಗಳು ಸ್ವರ್ಣ ಮತ್ಸ್ಯ ಹನುಮಂತನನ್ನು ಪ್ರೀತಿಸಿದ್ದಳಂತೆ. ವಾನರ ಸೈನ್ಯವು ಲಂಕಾಗೆ ಹೋಗಲು ಸಮುದ್ರದಲ್ಲಿ ಕಲ್ಲುಗಳನ್ನು ಹಾಕಿ ಸೇತುವೆಯನ್ನು ನಿರ್ಮಿಸುತ್ತಿದ್ದಾಗ, ಮೊದಲಿಗೆ ಆ ಕಲ್ಲುಗಳು ಅಲ್ಲಿಂದ ಕಣ್ಮರೆಯಾಗುತ್ತಿದ್ದವಂತೆ.

57

ನಂತರ ಹನುಮಂತನು ಸಮುದ್ರತಳಕ್ಕೆ ಹೋಗಿ ನೋಡಿದಾಗ ಅಲ್ಲಿ ರಾವಣನ ಮಗಳು ಸುವರ್ಣಮಚ್ಚ ಅಂದರೆ ಸ್ವರ್ಣ ಮತ್ಸ್ಯ ರಾಮಸೇತುವನ್ನು (Rama Setu) ನಿರ್ಮಿಸದಂತೆ ಈ ಕೆಲಸವನ್ನು ಮಾಡುತ್ತಿದ್ದಳು ಅನ್ನೋದು ತಿಳಿದು ಬಂತು. ಆವಾಗ ಹನುಮಂತನು ಆಕೆಯ ಮನ ಒಲಿಸಲು ಪ್ರಯತ್ನಿಸಿ, ಕೊನೆಗೆ ಮನಒಲಿಸಿ ಬಂಡೆ ಕಲ್ಲುಗಳನ್ನು ವಾಪಾಸ್ ನೀಡುವಂತೆ ಮಾಡಿದನು. ನಂತರ ರಾಮಸೇತು ಪೂರ್ಣಗೊಂಡಿತು. 
 

67

ವಿದೇಶಗಳಲ್ಲಿ ರಾವಣನ ಮಗಳ ಪ್ರತಿಮೆಗಳು
ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ದೇವಾಲಯಗಳಲ್ಲಿ ರಾವಣನ ಮಗಳು ಸ್ವರ್ಣ ಮತ್ಸ್ಯಳ ಪ್ರತಿಮೆಗಳನ್ನು ಕಾಣಬಹುದು. ಇಲ್ಲಿನ ಜನರು ಆಕೆಯನ್ನು ಪೂಜಿಸುತ್ತಾರೆ ಮತ್ತು ಹನುಮಂತ ಮತ್ತು ಸ್ವರ್ಣ ಮತ್ಸ್ಯನ ನಡುವಿನ ಪ್ರೀತಿಯನ್ನು ಸಹ ಅನೇಕ ದೇವಾಲಯಗಳಲ್ಲಿ ಚಿತ್ರಿಸಲಾಗಿದೆ.

77

ಅದೃಷ್ಟ ದೇವತೆ 
ಥೈಲ್ಯಾಂಡ್ ಮತ್ತು ಕಾಂಬೋಡಿಯಾದಲ್ಲಿ, ರಾವಣನ ಮಗಳು ಸ್ವರ್ಣ ಮತ್ಸ್ಯಳನ್ನು ಅದೃಷ್ಟದ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅವಳ ವಿಗ್ರಹಗಳನ್ನು ಇಲ್ಲಿನ ಅಂಗಡಿಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ. ಜನರು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅದೃಷ್ಟದ ಸಂಕೇತವಾಗಿ (sign of luck)ತಮ್ಮ ಮನೆಯಲ್ಲಿ ಇಡುತ್ತಾರೆ.
 

Read more Photos on
click me!

Recommended Stories