ಕನಸಲ್ಲಿ ತೃತೀಯ ಲಿಂಗಿ ಕಂಡ್ರೆ ಏನರ್ಥ?

First Published Apr 25, 2023, 3:36 PM IST

ಕನಸಿನ ವಿಜ್ಞಾನದ ಪ್ರಕಾರ, ನೀವು ಕನಸಿನಲ್ಲಿ ತೃತೀಯ ಲಿಂಗಿಯನ್ನು ನೋಡಿದ್ರೆ, ಶುಭ ಮತ್ತು ಅಶುಭ ಚಿಹ್ನೆಗಳು ಕಂಡುಬರುತ್ತವೆ. ನಿಮ್ಮ ಕನಸಿನಲ್ಲಿ ಮಂಗಳಮುಖಿಯ ಆಗಮನವು ನಿಮಗೆ ಮಂಗಳಕರವಾಗಿದೆಯೇ ಅಥವಾ ಇಲ್ಲವೇ ಎಂಬುದು ನೀವು ನಪುಂಸಕರನ್ನು ಯಾವ ಸ್ಥಿತಿಯಲ್ಲಿ ನೋಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತೆ. 

ರಾತ್ರಿಯಲ್ಲಿ ಬರುವ ಕನಸುಗಳನ್ನು (dreams) ನಾವು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಕನಸಿನ ವಿಜ್ಞಾನದ ಪ್ರಕಾರ, ಪ್ರತಿಯೊಂದು ಕನಸಿಗೂ ಒಂದು ಅರ್ಥವಿದೆ. ನಿಮ್ಮ ಕನಸಿನಲ್ಲಿ ನೀವು ನಪುಂಸಕರನ್ನು ನೋಡಿದ್ರೆ  ಅದರ ಅರ್ಥವೇನೆಂದು ಇಲ್ಲಿ ತಿಳಿಯೋಣ. ಡ್ರೀಮ್ ಸೈನ್ಸ್ ಪ್ರಕಾರ, ಟ್ರಾನ್ಸ್ಜೆಂಡರನ್ನು ಕನಸಿನಲ್ಲಿ ನೋಡುವುದು ಎಂದರೇನು ಎಂದು ತಿಳಿಯೋಣ.

ಮನೆಗೆ ನಪುಂಸಕರ (transgender)  ಆಗಮನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತೆ ಎಂದು ನೀವು ಕೇಳಿರಬಹುದು. ಆದರೆ, ತೃತೀಯ ಲಿಂಗಿಯರನ್ನು ಕನಸಿನಲ್ಲಿ ನೋಡುವುದು ಮಂಗಳಕರವೇ? ತೃತೀಯ ಲಿಂಗಿಯನ್ನು ಕನಸಿನಲ್ಲಿ ನೋಡುವುದರ ಅರ್ಥವೇನು ಎಂದು ತಿಳಿದುಕೊಳ್ಳೋಣ.

ಕನಸಿನಲ್ಲಿ ಹಣ ನೀಡುವ ತೃತೀಯ ಲಿಂಗಿಯನ್ನು ನೋಡುವುದು
ತೃತೀಯ ಲಿಂಗಿಗಳು ತಮಗೆ ಹಣ ನೀಡುತ್ತಿರೋ ಕನಸು ಯಾರಾದರೂ ಕಂಡರೆ, ಅಂತಹ ಕನಸನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತೆ. ಇದರರ್ಥ ನಿಮ್ಮ ಮನೆಯಲ್ಲಿ ಮಕ್ಕಳನ್ನು ಪಡೆಯುವ ಸಾಧ್ಯತೆಗಳಿವೆ. 
 

ಇದಲ್ಲದೆ, ಅಂತಹ ಕನಸುಗಳನ್ನು (seeing transgender giving money in dream) ಕಾಣುವುದು ಎಂದರೆ ನಿಮ್ಮ ಮನೆಯಲ್ಲಿ ಕೆಲವು ಮಂಗಳ ಕಾರ್ಯಗಳು ನಡೆಯಬಹುದು ಎಂದು ಸಹ ಅರ್ಥ ನೀಡುತ್ತೆ. ಮಂಗಳಮುಖಿಯರು ಸಂತೋಷವಾಗಿರುವಾಗ ನಿಮ್ಮನ್ನು ಆಶೀರ್ವದಿಸುತ್ತಾರೆ.

ತೃತೀಯ ಲಿಂಗಿ ಕನಸಿನಲ್ಲಿ ಕೋಪಗೊಂಡಂತೆ ಕಾಣಿಸಿದ್ರೆ 
ಕನಸಿನಲ್ಲಿ ಯಾರಾದರೂ ತೃತೀಯ ಲಿಂಗಿಯರು ಕೋಪದಿಂದ (angry transgender) ನೋಡಿದ್ರೆ, ಅಂತಹ ಕನಸನ್ನು ಮಂಗಳಕರವೆಂದು ಪರಿಗಣಿಸಲಾಗೋದಿಲ್ಲ. ಅಂತಹ ಕನಸುಗಳನ್ನು ಹೊಂದುವುದು ಎಂದರೆ ನಿಮ್ಮ ಕೆಲವು ಪ್ರಮುಖ ಕೆಲಸಗಳು ಅಪೂರ್ಣವಾಗಿ ಉಳಿಯಬಹುದು ಅಥವಾ ನಿಮ್ಮ ಯಾವುದೇ ಮಹತ್ವಾಕಾಂಕ್ಷೆಗಳು ಅಪೂರ್ಣವಾಗಿ ಉಳಿಯಬಹುದು ಎಂದರ್ಥ.

ಮಂಗಳಮುಖಿಯರು ಕನಸಿನಲ್ಲಿ ಆಶೀರ್ವಾದ ನೀಡಿದ್ರೆ 
ಮಂಗಳಮುಖಿಯರ ಆಶೀರ್ವಾದವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಅಂತಹ ಕನಸುಗಳನ್ನು ಕಾಣುವುದು ಎಂದರೆ ನೀವು ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದರ್ಥ. ನಪುಂಸಕರು ಗೋಧಿ ಅಥವಾ ನಾಣ್ಯಗಳನ್ನು (Coin and Wheat) ಕೊಡೋದನ್ನು ನೀವು ನೋಡಿದರೆ, ನಿಮ್ಮ ಯಾವುದೇ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ ಎಂದರ್ಥ.
 

ಹೋರಾಡುತ್ತಿರುವ ತೃತೀಯ ಲಿಂಗಿಗಳನ್ನು ಕಂಡರೆ 
ಡ್ರೀಮ್ ಸೈನ್ಸ್ ಪ್ರಕಾರ,  ಕನಸಿನಲ್ಲಿ ತೃತೀಯ ಲಿಂಗಿಯರು ಹೋರಾಡೋದನ್ನು (fighting transgender) ನೋಡಿದರೆ, ಮುಂಬರುವ ಸಮಯದಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು ಎಂದರ್ಥ. ಅಂತಹ ಕನಸುಗಳು ಸಂಭವಿಸಿದಾಗ ನೀವು ಎಚ್ಚರಿಕೆಯಿಂದ ವರ್ತಿಸಬೇಕು.

click me!