ಮನೆಗಳಲ್ಲಿ ನಾಯಿಗಳನ್ನು ಸಾಕುವುದು ಸಾಮಾನ್ಯ ವಿಷಯ. ಜನರು ವಿವಿಧ ತಳಿಗಳ ನಾಯಿಗಳನ್ನು ಮನೆಗೆ ತಂದು ತಮ್ಮ ಕುಟುಂಬದ ಭಾಗವಾಗಿಸಿಕೊಳ್ಳುತ್ತಾರೆ. ನಾಯಿಯನ್ನು ಅತ್ಯಂತ ನಿಷ್ಠಾವಂತ ಪ್ರಾಣಿ ಎಂದೂ ಕರೆಯುತ್ತಾರೆ. ಅದು ನಮ್ಮ ಮನೆಯನ್ನು ರಕ್ಷಿಸುವುದಲ್ಲದೆ ನಮಗಾಗಿ ತನ್ನ ಜೀವವನ್ನು ತ್ಯಾಗ ಮಾಡುತ್ತದೆ. ಆದರೆ ಜ್ಯೋತಿಷ್ಯದಲ್ಲಿ ಸಹ ನಾಯಿಯನ್ನು ಸಾಕುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ನಿಮಗೆ ತಿಳಿದಿದೆಯೇ. ನಾಯಿಯು ನಮ್ಮ ಜಾತಕದಲ್ಲಿನ ಗ್ರಹ ದೋಷಗಳನ್ನು ಶಾಂತಗೊಳಿಸುತ್ತದೆ. ಕಪ್ಪು ನಾಯಿಯನ್ನು ಸಾಕುವುದು ಇನ್ನೂ ಹೆಚ್ಚು ಶುಭವೆಂದು ಪರಿಗಣಿಸಲಾಗಿದೆ. ಹೇಗೆ ಎಂದು ತಿಳಿಯೋಣ?
27
ಕಪ್ಪು ನಾಯಿಯನ್ನು ಸಾಕುವುದು ಶುಭ
ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಸಂಪತ್ತು, ಮಕ್ಕಳ ಸಂತೋಷ ಮತ್ತು ಗ್ರಹ ದೋಷಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
37
ಸಿಲುಕಿದ ಹಣವನ್ನು ಮರಳಿ ಪಡೆಯಬಹುದು
ಕಪ್ಪು ನಾಯಿಯನ್ನು ಸಾಕಿದ ಮನೆಯು ಶುಭಕರವಾಗಿರುತ್ತೆ. ಇಂತಹ ಮನೆಯಲ್ಲಿ ಹಣದ ಸಂಕಷ್ಟ ಇದ್ದರೆ, ಅದು ಬೇಗನೆ ನಿವಾರಣೆಯಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಉಂಟಾಗುತ್ತದೆ.
ಲಾಲ್ ಕಿತಾಬ್ ಪ್ರಕಾರ, ಮಕ್ಕಳನ್ನು ಪಡೆಯುವಲ್ಲಿ ಸಮಸ್ಯೆ ಇದ್ದರೆ ಕಪ್ಪು ಅಥವಾ ಬಿಳಿ ನಾಯಿಯನ್ನು ಸಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ.
57
ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ
ಜ್ಯೋತಿಷ್ಯದ ಪ್ರಕಾರ, ಕಪ್ಪು ನಾಯಿ ದೆವ್ವ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ. ನಾಯಿಗಳು ಆತ್ಮಗಳನ್ನು ಬೇಗನೆ ನೋಡಬಲ್ಲವು ಎನ್ನುವ ನಂಬಿಕೆ ಇದೆ.
67
ಶನಿ ದೇವರ ವಾಹನ ಕಪ್ಪು ನಾಯಿ.
ಕಪ್ಪು ನಾಯಿಯನ್ನು ಶನಿ ದೇವರ ವಾಹನ ಎಂದು ಹೇಳಲಾಗುತ್ತದೆ. ಅದನ್ನು ಇಟ್ಟುಕೊಳ್ಳುವುದರಿಂದ ಅಥವಾ ಸೇವೆ ಮಾಡುವುದರಿಂದ ಶನಿಯ 'ಸಾಡೆ ಸಾತ್' ಮತ್ತು 'ಧೈಯ'ದ ಪರಿಣಾಮ ಕಡಿಮೆಯಾಗುತ್ತದೆ. ಶನಿ ದೋಷದಿಂದ ಬಳಲುತ್ತಿರುವವರು ಕಪ್ಪು ನಾಯಿಗೆ ಎಣ್ಣೆ ಲೇಪಿತ ರೊಟ್ಟಿಯನ್ನು ತಿನ್ನಿಸಬೇಕು.
77
ಕೇತುವಿನ ರೂಪ
ಕಪ್ಪು ನಾಯಿ ಕೇತು ಗ್ರಹದ ಸಂಕೇತ. ಅದನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುವುದರಿಂದ ಕೇತು ದೋಷ ನಿವಾರಣೆಯಾಗುತ್ತದೆ. ವಿಶೇಷವಾಗಿ 22 ಅಥವಾ ಅದಕ್ಕಿಂತ ಹೆಚ್ಚು ಉಗುರುಗಳನ್ನು ಹೊಂದಿರುವ ನಾಯಿಗಳನ್ನು ಕೇತುವಿನ ರೂಪವೆಂದು ಪರಿಗಣಿಸಲಾಗುತ್ತದೆ.