ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ

Published : Dec 25, 2025, 04:26 PM IST

ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ, ಬಡವರು, ಮಧ್ಯಮವರ್ಗ ಸೇರಿದಂತೆ ತಮ್ಮ ಆದಾಯಕ್ಕಿಂತ ಹೆಚ್ಚು ಮದುವೆಗೆ ಖರ್ಚು ಮಾಡುತ್ತಾರೆ. ಆದರೆ 2025ರಲ್ಲಿ ಈ ಖರ್ಚು ದುಪ್ಪಟ್ಟಾಗಿದೆ.

PREV
15
ದುಪ್ಪಟ್ಟಾದ ಮದುವೆ ಖರ್ಚು

ಭಾರತದಲ್ಲಿ ಮದುವೆ ಅದ್ಧೂರಿಯಾಗಿ ಮಾಡಲಾಗುತ್ತದೆ. ಸರಳ ವಿವಾಹಗಳು ವಿರಳ. ಪ್ರತಿ ಕುಟುಂಬ ತಮ್ಮ ಕೈಲಾದಷ್ಟು ಅಥವಾ ತಮ್ಮ ಆದಾಯಕ್ಕಿಂತ ಹೆಚ್ಚು ಮದುವೆಗೆ ಖರ್ಚು ಮಾಡುತ್ತಾರೆ. ಆದರೆ 2025ರಲ್ಲಿ ಮದುವೆ ಖರ್ಚು ದುಪ್ಪಟ್ಟಾಗಿದೆ. ಅದ್ಧೂರಿ ಮದುವೆ ಶೇಕಡಾ 8 ರಷ್ಟು ಖರ್ಚು ಹೆಚ್ಚಾಗಿದೆ.

25
ಮದುವೆ ದುಬಾರಿಯಾಗಲು ಒಂದು ಕಾರಣ

ಮದುವೆ ಖರ್ಚು ವೆಚ್ಚ ದುಬಾರಿಯಾಗಲು ಒಂದು ಪ್ರಮುಖ ಕಾರಣ ಚಿನ್ನದ ಬೆಲೆಯಲ್ಲಾಗಿರುವ ಏರಿಕೆ. ಮದುವೆಯಲ್ಲಿ ಚಿನ್ನ ಅತ್ಯಂತ ಪ್ರಮುಖ,ಹಾಗೂ ಪ್ರಧಾನ. ಹೀಗಾಗಿ ಒಟ್ಟಾರೆ ಮದುವೆ ಖರ್ಚು ಭಾರಿ ಏರಿಕೆಯಾಗಿದೆ. ಇನ್ನು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮದುವೆ ಅತೀ ದುಬಾರಿಯಾಗಿ ಮಾರ್ಪಟ್ಟಿದೆ.

35
ಮಿಡ್ಲ್ ಕ್ಲಾಸ್ ಮದುವೆ ಖರ್ಚೆಸ್ಟು?

ಮಧ್ಯಮ ವರ್ಗದ ಮದುವೆ 5 ರಿಂದ 8 ಲಕ್ಷ ರೂಪಾಯಿ ಖರ್ಚಿನಲ್ಲಿ ಮಾಡಾಗುತ್ತಿತ್ತು. ಆದರೆ ಅಂಕಿ ಅಂಶಗಳ ಪ್ರಕಾರ ಇದೀಗ ಖರ್ಚು 8 ರಿಂದ 15 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಅತೀ ಕಡಿಮೆ ಖರ್ಚಿನ ಮದುವೆಗಳು ಕೂಡ 4 ರಿಂದ 6 ಲಕ್ಷಕ್ಕೆ ಏರಿಕೆಯಾಗಿದೆ. ಅದ್ಧೂರಿ ಮದುವೆಗಳ ಖರ್ಚು ಲೆಕ್ಕಕ್ಕೆ ಸಿಗುತ್ತಿಲ್ಲ ಅನ್ನೋ ಹಾಗಿದೆ.

45
ವೆಡ್ ಮಿ ಗುಡ್ ವರದಿ

ವೆಡ್ ಮಿ ಗೂಡ್ ವೆಬ್ ಟೆಕ್ ಸಂಸ್ಥೆ ಅಂಕಿ ಅಂಶ ಪ್ರಕಾರ, ಚಿನ್ನದ ಬೆಲೆ ಏರಿಕೆಯಿಂದ ಮದುವೆ ಖರ್ಚು ಶೇಕಡಾ 8 ರಷ್ಟು ಏರಿಕೆಯಾಗಿದೆ ಎಂದಿದೆ. ಹೀಗಾಗಿ ಸರಾಸರಿ ಮದುವೆ ಖರ್ಚು ವೆಚ್ಚ ಇದೀಗ 39.5 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2026ರಲ್ಲಿ ಈ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವೆಡ್ ಮಿಗುಡ್ ಎಚ್ಚರಿಸಿದೆ.

ವೆಡ್ ಮಿ ಗುಡ್ ವರದಿ

55
50 ಲಕ್ಷ ರೂ ಮದುವೆ ವೆಚ್ಚ 1 ಕೋಟಿ

ಭಾರತದಲ್ಲಿ 50 ಲಕ್ಷ ರೂಪಾಯಿಯಲ್ಲಿ ನಡೆಯುತ್ತಿದ್ದ ಮದುವೆಗಳು ಇದೀಗ 1 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ವೆಡ್ ಮಿ ಗೂಡ್ ಟೆಕ್ ಸಂಸ್ಥೆ ಹೇಳಿದೆ. ಚಿನ್ನದ ಬೆಲೆ ಮಾತ್ರವಲ್ಲ ಇದರ ಜೊತೆಗೆ ಭಾರತದ ಮದುವೆ ಸಂಭ್ರಮ ಹಾಗೂ ದಿನಗಳು ಹೆಚ್ಚಾಗಿದೆ ಎಂದು ವರದಿ ಹೇಳುತ್ತಿದೆ.

50 ಲಕ್ಷ ರೂ ಮದುವೆ ವೆಚ್ಚ 1 ಕೋಟಿ

Read more Photos on
click me!

Recommended Stories