ದೀಪಾವಳಿ ಸಂದರ್ಭದಲ್ಲಿ ಮಾಡುವಂತಹ ಗೋ ಪೂಜೆ ಮಹತ್ವವೇನು?

Published : Nov 11, 2023, 02:13 PM IST

ಗೋವರ್ಧನ ಪೂಜೆಯ ದಿನ  ಹಸುಗಳು, ಎತ್ತುಗಳು ಮುಂತಾದ ಪ್ರಾಣಿಗಳನ್ನು ಸ್ನಾನ ಮಾಡಿ, ಪಾದಗಳನ್ನು ತೊಳೆಯುವ ಮೂಲಕ ಮತ್ತು ಹೂವುಗಳು, ಹಾರಗಳು ಮತ್ತು ಆಭರಣಗಳಿಂದ ಅಲಂಕರಿಸುವ ಮೂಲಕ ಪೂಜಿಸಲಾಗುತ್ತದೆ. ಈ ದಿನದ ವಿಶೇಷತೆ ಬಗ್ಗೆ ತಿಳಿಯೋಣ.   

PREV
17
ದೀಪಾವಳಿ ಸಂದರ್ಭದಲ್ಲಿ ಮಾಡುವಂತಹ ಗೋ ಪೂಜೆ ಮಹತ್ವವೇನು?

ಐದು ದಿನಗಳ ದೀಪಾವಳಿ ಹಬ್ಬದಲ್ಲಿ, ಅಮಾವಾಸ್ಯೆ ನಂತರ, ಕಾರ್ತಿಕ ಶುಕ್ಲ ಪ್ರತಿಪಾದದಂದು ಗೋವರ್ಧನ ಪೂಜೆಯೊಂದಿಗೆ ಹಸುಗಳನ್ನು ಸಹ ಭಕ್ತಿಯಿಂದ ಪೂಜಿಸಲಾಗುತ್ತದೆ. ಇದರೊಂದಿಗಿನ ಘಟನೆಯು ಭಗವಾನ್ ಶ್ರೀ ಕೃಷ್ಣನಿಗೆ ಸಂಬಂಧಿಸಿದೆ, ಅವರ ಕಥೆ ಏನು ಅನ್ನೋದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. 

27

ಗೋವರ್ಧನ ಪೂಜೆ 
ಬ್ರಜ್ ಪ್ರದೇಶದ ಮಥುರಾದಲ್ಲಿ ಶ್ರೀ ಕೃಷ್ಣನ ಅವತಾರವೆತ್ತಿದ ನಂತರ, ಗೋಪಾಲಕರ ಕುಟುಂಬದಲ್ಲಿ ಬೆಳೆದನು. ಅಲ್ಲಿ ಹಸುಗಳನ್ನು ಮೇಯಿಸಲು ಪ್ರಾರಂಭಿಸಿದರು. ಮೊದಲಿಗೆ ಈ ಪ್ರದೇಶದಲ್ಲಿ ಇಂದ್ರನ ಪೂಜೆ ಮಾಡಲಾಗುತ್ತಿತ್ತು. ಆದರೆ ಕೃಷ್ಣನು ಇಂದ್ರನ ಬದಲಿಗೆ ಗೋವರ್ಧನ ಪರ್ವತ ಮತ್ತು ಹಸುಗಳನ್ನು ಪೂಜಿಸಲು ಸಲಹೆ ನೀಡಿದರು. ಗೋವರ್ಧನ ಪರ್ವತ ಮತ್ತು ಹಸು ನಮ್ಮ ನಿಜವಾದ ಆಸ್ತಿ, ನಮ್ಮ ಜೀವನವು ಅವುಗಳಿಂದ ನಡೆಸಲ್ಪಡುತ್ತದೆ, ಆದ್ದರಿಂದ ಇಂದ್ರನನ್ನು ಪೂಜಿಸುವುದನ್ನು ನಿಲ್ಲಿಸಿ ಮತ್ತು ಗೋವರ್ಧನನನ್ನು ಪೂಜಿಸಲು ಪ್ರಾರಂಭಿಸಿ ಎಂದು ಹೇಳಿದರು. 

37

ಈ ಹಿನ್ನೆಲೆಯಲ್ಲಿ ಕಾರ್ತಿಕ ಶುಕ್ಲ ಪಕ್ಷದ ಪ್ರತಿಪಾದದಂದು ಗೋವರ್ಧನ ಪೂಜೆಯನ್ನು (Govardhan Puja) ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ, ಭಕ್ತರು ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತಾರೆ ಮತ್ತು ಗೋವರ್ಧನ ಪರ್ವತವನ್ನು ಪೂಜಿಸುತ್ತಾರೆ. ಪೂಜೆಯ ಸಮಯದಲ್ಲಿ, ಭಗವಂತನು ಸ್ವತಃ ದೈತ್ಯ ರೂಪವನ್ನು ತಾಳಿ ತನ್ನನ್ನು ಗೋವರ್ಧನ ಎಂದು ಘೋಷಿಸಿಕೊಂಡನು. 
 

47

ಭಗವಂತನು ಗೋವರ್ಧನನ ರೂಪದಲ್ಲಿ ಬ್ರಜ್ ನಿವಾಸಿಗಳು ನೀಡಿದ 56 ಭಕ್ಷ್ಯಗಳನ್ನು ತಿಂದನಂತೆ. ದೇವರಾಜ ಇಂದ್ರನಿಗೆ ಈ ವಿಷಯ ತಿಳಿದಾಗ, ಅವನು ತುಂಬಾ ಕೋಪಗೊಂಡನು, ಜೊತೆಗೆ ಬ್ರಜ್ ಪ್ರದೇಶದಲ್ಲಿ ವಿನಾಶಕಾರಿ ಮಳೆಯಾಗುವಂತೆ ಶಾಪ ನೀಡಿದನು. ಬೃಜ್ ಜನತೆ ಮತ್ತು ಹಸುಗಳು ಮಳೆಯಿಂದ ಕಂಗೆಟ್ಟಾಗ, ಭಗವಾನ್ ಶ್ರೀ ಕೃಷ್ಣನು (Shri Krishna) ತನ್ನ ತಂತ್ರದಿಂದ ಗೋವರ್ಧನ ಪರ್ವತವನ್ನು ತನ್ನ ಒಂದು ಬೆರಳಿನಲ್ಲಿ ಎತ್ತಿ ಎಲ್ಲಾ ಗ್ರಾಮಸ್ಥರಿಗೆ ಆಶ್ರಯ ನೀಡಿದನು. 
 

57

ಈ ಸಮಸ್ಯೆಯನ್ನು ಪರಿಹರಿಸಲು ಶ್ರೀಕೃಷ್ಣನು ಸುದರ್ಶನ ಚಕ್ರ ಮತ್ತು ಶೇಷನಾಗನಿಗೆ ಆದೇಶಿಸಿದನು. ಸುದರ್ಶನ ಚಕ್ರವು ಪರ್ವತದ ತುದಿಯನ್ನು ತಲುಪಿ ಮಳೆಯನ್ನು ಹೀರಿಕೊಂಡಿತು ಮತ್ತು ಶೇಷನಾಗನು ಕುಂಡಲಾಕರ ತಾಳಿ ಗೋವರ್ಧನ ಪರ್ವತದಿಂದ ನೀರು ಇಳಿಯದಂತೆ ತಡೆದನು. ದೇವರಾಜ ಇಂದ್ರನು ಏಳು ದಿನಗಳವರೆಗೆ ತನ್ನ ಎಲ್ಲಾ ಶಕ್ತಿಯನ್ನು ಪ್ರಯತ್ನಿಸಿದನು, ಆದರೆ ಅವನಿಗೆ ಬ್ರಜ್ ಜನರ ಕೂದಲನ್ನು ಸೋಕಲು ಸಹ ಸಾಧ್ಯವಾಗಲಿಲ್ಲ.
 

67

ಈ ಸಂದರ್ಭದಲ್ಲಿ, ಇಂದ್ರನಿಗೆ ತನ್ನ ತಪ್ಪಿನ ಅರಿವಾಗಿ ಶ್ರೀಕೃಷ್ಣನಲ್ಲಿ ಕ್ಷಮೆ ಯಾಚಿಸಿದನು. ಐರಾವತ ಭಗವಾನ್ ಶ್ರೀ ಕೃಷ್ಣನಿಗೆ ಆಕಾಶ ಗಂಗೆಯ ಅಭಿಷೇಕ ಮಾಡಿದ್ರೆ, ಕಾಮಧೇನು ಭಗವಾನ್ ಶ್ರೀ ಕೃಷ್ಣನನ್ನು ತನ್ನ ಹಾಲಿನಿಂದ ಅಭಿಷೇಕ ಮಾಡಿ ಸಂಭ್ರಮಿಸಿತು. ಇದರಿಂದ ಶ್ರೀಕೃಷ್ಣ ಗೋವಿಂದನಾಗಿ ಖ್ಯಾತಿ ಪಡೆದರು.  ಅಂದಿನಿಂದ, ಭಗವಾನ್ ಶ್ರೀ ಕೃಷ್ಣನ ಸಂತೋಷಕ್ಕಾಗಿ ಕಾರ್ತಿಕ ಶುಕ್ಲ ಪಕ್ಷದ ಪ್ರತಿಪಾದದಂದು ಗೋವರ್ಧನ ಪೂಜೆಯನ್ನು ಮಾಡಲು ಆರಂಭಿಸಲಾಯಿತು. 
 

77

ಈ ರೀತಿ ಪೂಜಿಸಿ
ಕಾರ್ತಿಕ ಶುಕ್ಲ ಪ್ರತಿಪಾದದಂದು ಗೋವರ್ಧನ ಪೂಜೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ. ಗೋವರ್ಧನ ಪೂಜೆಯ ದಿನದಂದು ಹಸುಗಳನ್ನು ಹಾಲು ಕರೆಯುವುದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ, ಹಸುಗಳು, ಎತ್ತುಗಳು ಮುಂತಾದ ಪ್ರಾಣಿಗಳನ್ನು ಸ್ನಾನ ಮಾಡಿ, ಪಾದಗಳನ್ನು ತೊಳೆಯುವ ಮೂಲಕ ಮತ್ತು ಹೂವುಗಳು, ಹಾರಗಳು ಮತ್ತು ಆಭರಣಗಳಿಂದ ಅಲಂಕರಿಸುವ ಮೂಲಕ ಪೂಜಿಸಲಾಗುತ್ತದೆ.
 

Read more Photos on
click me!

Recommended Stories