ಗುರವಾರ ಗಂಡ-ಹೆಂಡ್ತಿ ಈ ಕೆಲಸ ಮಾಡಿದ್ರೆ ಒಳ್ಳೇಯದಾಗಲ್ವಂತೆ! ಮಾಡ್ಬೇಡಿ ಆ ಕೆಲ್ಸ

First Published | Mar 30, 2024, 4:48 PM IST

ಪಕ್ಷಿಗಳಲ್ಲಿ ವಿಶೇಷವಾದ ಗರುಡ ದೇವರು ಗುರುವಾರ ವಿಷ್ಣುವನ್ನು ಪೂಜಿಸುವ ಮೂಲಕ ವಿಷ್ಣುವನ್ನು ಮೆಚ್ಚಿಸಿದ್ದಾನೆ ಮತ್ತು ವಿಷ್ಣುವಿನ ಅನುಗ್ರಹ ಪಡೆಯುತ್ತಾನೆ. ಗುರುವಾರ ಗಂಡ ಮತ್ತು ಹೆಂಡತಿ ಯಾವ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ಗರುಡ ಪುರಾಣದಿಂದ ತಿಳಿಯೋಣ. 

ಗುರುವಾರ ಭಗವಾನ್ ವಿಷ್ಣುವಿಗೆ (God Vishnu) ಸಮರ್ಪಿತ. ವಿಷ್ಣು ದೇವರು ಮತ್ತು ಗ್ರಹ ಜೀವನದಲ್ಲಿ ಸಂತೋಷವು ಅವನ ಆಶೀರ್ವಾದದಿಂದ ಮಾತ್ರ ಬರುತ್ತದೆ. ಗುರುವಾರವನ್ನು ವಿಷ್ಣುವಿನ ಆರಾಧನೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಪಕ್ಷಿಗಳಲ್ಲಿ ವಿಶೇಷವಾದ ಗರುಡ ದೇವರು ಗುರುವಾರ ವಿಷ್ಣುವನ್ನು ಪೂಜಿಸುವ ಮೂಲಕ ವಿಷ್ಣುವನ್ನು ಮೆಚ್ಚಿಸಿದ್ದಾನೆ ಮತ್ತು ವಿಷ್ಣುವಿನ ಅನುಗ್ರಹ ಪಡೆದಿದ್ದಾನೆ. ಗಂಡ ಹೆಂಡತಿ ಚೆನ್ನಾಗಿರಬೇಕು ಅಂದ್ರೂ ಕೂಡ ವಿಷ್ಣುವಿನ ಪೂಜೆ ಮಾಡಬೇಕು. 

ಗುರುವಾರ ಗಂಡ ಹೆಂಡತಿ ಮಾಡುವ ಕೆಲವೊಂದು ಕೆಲಸಗಳು ಅವರ ಜೀವನದಲ್ಲಿ ಅಶಾಂತಿ ಮತ್ತು ತೊಂದರೆ ತರಬಹುದು. ಹಾಗಾಗಿ ಕೆಲವು ಕೆಲಸಗಳನ್ನು ಮಾಡದೇ ಇದ್ದರೇನೆ ಉತ್ತಮ. ಗುರುವಾರ ಗಂಡ ಮತ್ತು ಹೆಂಡತಿ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ. 
 

Latest Videos


ಗುರುವಾರದಂದು ಏನು ಮಾಡೋದು ಶುಭ?
ಗುರುವಾರ ಚಿನ್ನ, ಬೆಳ್ಳಿ ಅಥವಾ ಆಭರಣಗಳು (gold silver jewellery) ಅಥವಾ ಯಾವುದೇ ಬಟ್ಟೆಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಈ ವಸ್ತುಗಳನ್ನು ಖರೀದಿಸುವುದು ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವನ್ನು ಬಲಪಡಿಸುತ್ತದೆ. ಹಳದಿ ಅಕ್ಕಿ ಸೇರಿದಂತೆ ಹಳದಿ ವಸ್ತುಗಳು ಮತ್ತು ಹಳದಿ ಬಟ್ಟೆಯನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಆದರೆ ಈ ದಿನದಂದು,  ಅನೇಕ ವಿಷಯಗಳನ್ನು ನಿಷೇಧಿಸಲಾಗಿದೆ.

ಗುರುವಾರ ಕೆಲವೊಂದು ನಿಷೇಧಿತ ಕೆಲಸ ಮಾಡಿದರೆ, ಮನೆಯಲ್ಲಿ ಗಂಡ-ಹೆಂಡತಿ (Husband and wife) ಜಗಳ ಮತ್ತು ಉದ್ಯೋಗ-ವ್ಯವಹಾರದಲ್ಲಿ ನಷ್ಟವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಮಹಿಳೆಯರ ಜನ್ಮ ಜಾತಕದಲ್ಲಿ ಗುರು ಗ್ರಹ ಅವಳ ಮಗು ಮತ್ತು ಪತಿ ಇಬ್ಬರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ದಿನ, ಮಹಿಳೆಯರು ತಮ್ಮ ಮಕ್ಕಳು ಅಥವಾ ಗಂಡಂದಿರ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡಬಾರದು.

ಗುರುವಾರ ಏನು ಮಾಡಬಾರದು?
ಈ ದಿನ, ಮನೆಯ ಯಾವುದೇ ಸದಸ್ಯರು ವಿಷ್ಣು ಮತ್ತು ಮಹಾಲಕ್ಷ್ಮಿ ದೇವಿಯನ್ನು (Goddess Lakshmi) ಒಟ್ಟಿಗೆ ಪೂಜಿಸಬಾರದು.
ಅಕ್ಕಿಯಿಂದ ಮಾಡಿದ ಅನ್ನ ಅಥವಾ ಖಿಚಡಿಯನ್ನು ಸೇವಿಸಬಾರದು. ಹಾಗೆ ಮಾಡುವುದರಿಂದ ಹಣ ನಷ್ಟ ಮತ್ತು ಬಡತನಕ್ಕೆ ಕಾರಣವಾಗುತ್ತದೆ.
ಗುರುವಾರ ಹೆಸರು ಬೇಳೆ ಸೇವನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಗುರುವಾರ ಕೂದಲನ್ನು ಸಾಬೂನು ಅಥವಾ ಶಾಂಪೂ ಬಳಸಿ ತೊಳೆಯಬೇಡಿ (hair wash). ಹಾಗೆ ಮಾಡುವುದರಿಂದ ದೇವರ ಆಶೀರ್ವಾದ ಕಡಿಮೆಯಾಗುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆ ಉಂಟಾಗಬಹುದು. ಅಷ್ಟೇ ಅಲ್ಲ ಈ ದಿನ ಕೂದಲನ್ನು ಕತ್ತರಿಸಬಾರದು ಎಂದು ಸಹ ಹೇಳಲಾಗುತ್ತೆ. 

ಗುರುವಾರ, ಮಹಿಳೆಯರು ತಮ್ಮ ತಲೆಯನ್ನು ತೊಳೆದರೆ ಅಥವಾ ಕೂದಲನ್ನು ಕತ್ತರಿಸಿದರೆ, ಗುರು ಹ್ರಹವು ದುರ್ಬಲಗೊಳ್ಳುತ್ತದೆ, ಇದು ಪತಿ ಮತ್ತು ಮಕ್ಕಳ ಪ್ರಗತಿಗೆ ಅಡ್ಡಿಯಾಗುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ. 
 

ಧರ್ಮಗ್ರಂಥಗಳು ಗುರುವಾರದಂದು ಉಗುರು ಕತ್ತರಿಸುವುದು ಮತ್ತು ಶೇವಿಂಗ್ (shaving) ಮಾಡುವುದನ್ನು ನಿಷೇಧಿಸುತ್ತವೆ. ಉಗುರು ಕತ್ತರಿಸೋದು ಅಥವಾ ಶೇವಿಂಗ್ ಮಾಡುವುದು ಗುರು ಗ್ರಹವನ್ನು ದುರ್ಬಲಗೊಳಿಸುತ್ತದೆ, ಇದು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

click me!