ಅಷ್ಟೇ ಅಲ್ಲ, ತಮ್ಮ ಶಕ್ತ್ಯಾನುಸಾರ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ತಿರುಮಲ ತಿರುಪತಿಯಂತಹ ದೊಡ್ಡ ದೇವಸ್ಥಾನಗಳಲ್ಲಿ ದೇವರಿಗೆ ಚಿನ್ನದ ಕಿರೀಟಗಳನ್ನು ಮಾಡಿಸುತ್ತಾರೆ. ಆಭರಣಗಳನ್ನು ಮಾಡಿಸುತ್ತಾರೆ, ರೇಷ್ಮೆ ವಸ್ತ್ರಗಳನ್ನು ಸಮರ್ಪಿಸುತ್ತಾರೆ. ಲಕ್ಷಗಟ್ಟಲೆ ಹಣವನ್ನು ಹುಂಡಿಯಲ್ಲಿ ಹಾಕುತ್ತಾರೆ. ತಿರುಪತಿ ಹುಂಡಿಯಲ್ಲಿ ಪ್ರತಿದಿನ ಬಡವರು, ಶ್ರೀಮಂತರು ಎಲ್ಲರೂ ಹಾಕುವ ಕಾಣಿಕೆಗಳು ಒಂದು ಕೋಟಿಯಿಂದ ಐದು ಕೋಟಿವರೆಗೆ ಇರುತ್ತದೆ.
ಹೀಗೆ ಚಿಕ್ಕ-ದೊಡ್ಡ ದೇವಸ್ಥಾನಗಳಲ್ಲಿ ಹುಂಡಿಯಲ್ಲಿ ಹಣ ಹಾಕುವುದು ಸಾಮಾನ್ಯ. ಆದರೆ ಹುಂಡಿಯಲ್ಲಿ ಕಾಣಿಕೆ ಹಾಕಲು ಒಂದು ಲೆಕ್ಕಾಚಾರ ಇದೆಯಂತೆ. ಈ ವಿಷಯ ನಿಮಗೆ ತಿಳಿದಿದೆಯೇ..? ಯಾವ ದೇವರ ದೇವಸ್ಥಾನದಲ್ಲಿ ಎಷ್ಟು ಕಾಣಿಕೆ ಹಾಕಿದರೆ ಒಳ್ಳೆಯದು..? ಈ ಬಗ್ಗೆ ಹಿರಿಯರು, ಸ್ವಾಮಿಗಳು ಏನು ಹೇಳುತ್ತಾರೆ..? ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಷ್ಟಕ್ಕೂ ವಿಷಯ ಏನೆಂದರೆ..?