ಮಹಾಕುಂಭದಿಂದ ಮನೆಗೆ ಗಂಗಾಜಲ ತಂದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿರಲಿ

Published : Feb 25, 2025, 04:43 PM ISTUpdated : Feb 25, 2025, 05:20 PM IST

ಮಹಾ ಕುಂಭಮೇಳದಿಂದ ಮನೆಗೆ ತಂದಿರುವ ಗಂಗಾಜಲವನ್ನು ಎಲ್ಲಿ ಇಡಬೇಕು? ಹಾಗೂ ಅದರಿಂದ ಏನು ಮಾಡಬೇಕು ಅನ್ನೋದರ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.   

PREV
18
ಮಹಾಕುಂಭದಿಂದ ಮನೆಗೆ ಗಂಗಾಜಲ ತಂದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿರಲಿ

ಹಿಂದೂ ಧರ್ಮದಲ್ಲಿ, ಗಂಗಾ ಜಲ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ನೀವು ಕುಂಭಮೇಳದಿಂದ ಗಂಗಾ ಜಲ (Gangajal) ತಂದಿದ್ದರೆ, ನಿಮ್ಮ ಮನೆಯಲ್ಲಿ ಅದರ ಶುದ್ಧತೆಯನ್ನು ಕಾಪಾಡಿಕೊಳ್ಳಲು ನೀವು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಅನುಸರಿಸಬೇಕು.

28

ಹಿಂದೂ ಧರ್ಮದಲ್ಲಿ, ಗಂಗಾ ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಗಂಗೆಯಲ್ಲಿ ಸ್ನಾನ ಮಾಡಿದರೆ ಎಲ್ಲಾ ರೀತಿಯ ಧೋಷಗಳು, ಪಾಪಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತೆ. ಅದಕ್ಕಾಗಿಯೇ ನಮ್ಮ ಸನಾತನ ಧರ್ಮದಲ್ಲಿ (Sanatan Dharma) ಗಂಗಾಜಲಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇದೆ. 
 

38

ಇದೀಗ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ (Prayagraj)ಮಹಾಕುಂಭಮೇಳ ನಡೆಯುತ್ತಿದ್ದು, ಜನರು ಕುಂಭ ಮೇಳದಿಂದ ಗಂಗಾ ನೀರನ್ನು ಮನೆಗೆ ತರುತ್ತಾರೆ. ಅಂತಹ ಸಂದರ್ಭಗಳಲ್ಲಿ, ಮನೆಯಲ್ಲಿ ಅದರ ಶುದ್ಧತೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗಿರೋದು ಮುಖ್ಯ. ಅದಕ್ಕಾಗಿ ಏನು ಮಾಡಬೇಕು ನೋಡೋಣ. 
 

48

 ನಿಮ್ಮ ಮನೆಯಲ್ಲಿ ನೀವು ಗಂಗಾ ಜಲವನ್ನು ತಂದು ಇಟ್ಟಿದ್ದರೆ, ಖಂಡಿತವಾಗಿಯೂ ಆ ಮನೆಯಲ್ಲಿ ಮಾಂಸ, ಮೀನು ಮೊದಲಾದ ಮಾಂಸಾಹರವನ್ನು ಮಾಡುವುದು ಅಥವಾ ಆಲ್ಕೋಹಾಲ್ ಸೇವಿಸುವುದನ್ನು ಮಾಡಬಾರದು. ಇದರಿಂದ ಗ್ರಹ ದೋಷಗಳಿಗೆ ಕಾರಣವಾಗಬಹುದು.

58

ನಾವು ಸಾಮಾನ್ಯವಾಗಿ ನೋಡಿದರೆ, ಜನ ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ (plastic bottle) ಗಂಗಾಜಲವನ್ನು ತುಂಬುತ್ತಾರೆ. ಆದರೆ ಗಂಗಾ ಜಲವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಇಡುವುದು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಗಂಗಾಜಲವನ್ನು ತಾಮ್ರ, ಹಿತ್ತಾಳೆ ಅಥವಾ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಇಡಬೇಕು.
 

68

ನೀವು ನಿಮ್ಮ ಮನೆಯಲ್ಲಿ ಉತ್ತಮ ರೀತಿಯಲ್ಲಿ ಗಂಗಾಜಲವನ್ನು ಸಂಗ್ರಹಿಸಿಡಬೇಕು ಎಂದು ಬಯಸಿದ್ರೆ, ನೀವು ಮನೆಯ ದೇವಾಲಯದಲ್ಲಿ, ಅಥವಾ ದೇವರ ಕೋಣೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ಗಂಗಾ ಜಲವನ್ನು ಇಡುವುದು ತುಂಬಾನೆ ಮಂಗಳಕರ ಮತ್ತು ಫಲಪ್ರದವಾಗಿದೆ.

78

ಅಷ್ಟೇ ಅಲ್ಲ ಪ್ರತಿದಿನ ನಿಮ್ಮ ಮನೆಯ ಸುತ್ತಲೂ ಗಂಗಾ ಜಲವನ್ನು ಸಿಂಪಡಿಸುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ. ಮನೆಯಲ್ಲಿ ನೆಮ್ಮದಿ ನೆಲೆಯಾಗುತ್ತೆ. ಅಷ್ಟೇ ಅಲ್ಲ ಗಂಗಾಜಲವು ನಕಾರಾತ್ಮಕ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಬಹುದು. ಇನ್ನು ಮನೆಯ ಮುಖ್ಯ ದ್ವಾರದಲ್ಲಿ ಗಂಗಾ ಜಲವನ್ನು ಸಿಂಪಡಿಸುವುದರಿಂದ ಸಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತೆ, ಇದು ಮನೆಯನ್ನು ಶುದ್ಧೀಕರಿಸುತ್ತದೆ. ನಕಾರಾತ್ಮಕ ಅಥವಾ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡೋದಿಲ್ಲ. 
 

88

ಗಂಗಾ ಜಲವನ್ನು ಬಳಸುವ ಮೊದಲು ಯಾವಾಗಲೂ ಅದಕ್ಕೆ ಗೌರವ ಸಲ್ಲಿಸಿ . ಯಾವತ್ತೂ ಗಂಗಾಜಲವನ್ನು ಕೆಟ್ಟ ಉದ್ದೇಶಗಳಿಗಾಗಿ ಬಳಕೆ ಮಾಡಬೇಡಿ. ಅದನ್ನು ಕೆಟ್ಟ ಅಥವಾ ಗಲೀಜಾಗಿರುವ ಜಾಗದಲ್ಲಿ ಇಡಲೇಬೇಡಿ. ಇದರಿಂದ ನಿಮಗೆ ತೊಂದರೆ ತಪ್ಪಿದ್ದಲ್ಲ. 
 

click me!

Recommended Stories