ನಿಮ್ಮ ಪ್ರೀತಿಯ ಜೀವನದ ಮೇಲೆ ಶುಕ್ರ ಗ್ರಹ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

First Published | Feb 16, 2024, 4:47 PM IST

ದಾಂಪತ್ಯ ಜೀವನದಲ್ಲಿ ಪ್ರೀತಿ, ಪ್ರಣಯ ಮತ್ತು ಉತ್ತಮ ಬಂಧ ಇರೋದು ತುಂಬಾನೆ ಮುಖ್ಯವಾಗಿದೆ. ನಿಮ್ಮ ಶುಕ್ರನ ಸ್ಥಾನವು ದುರ್ಬಲವಾಗಿದ್ದರೆ, ನಿಮ್ಮ ಪ್ರೀತಿಯ ಜೀವನ ಅಥವಾ ವೈವಾಹಿಕ ಜೀವನವೂ ಡಲ್ ಆಗಿರಬಹುದು. 

ಅದು ವೈವಾಹಿಕ ಜೀವನವಾಗಿರಲಿ (married life) ಅಥವಾ ಪ್ರೇಮ ಜೀವನವಾಗಿರಲಿ, (love life) ಎರಡರಲ್ಲೂ ಪ್ರೀತಿ, ಪ್ರೇಮ ಮತ್ತು ಉತ್ತಮ ಬಂಧ ಇರೋದು ತುಂಬಾನೆ ಮುಖ್ಯ.  ಸಂಬಂಧದಲ್ಲಿ ಪ್ರೀತಿ, ಪ್ರೇಮದ ಕೊರತೆಯಿದ್ದರೆ, ಸಂಬಂಧವು ತೊಡಕಾಗಿ ತೋರಬಹುದು ಅಥವಾ ಆ ಸಂಬಂಧ ದೀರ್ಘಕಾಲ ಉಳಿಯೋದೆ ಇಲ್ಲ. 

ನಿಮ್ಮ ಜಾತಕದಲ್ಲಿನ ಶುಕ್ರ ಗ್ರಹವು ನಿಮ್ಮ ಪ್ರೀತಿಯ ಜೀವನದ ಯಶಸ್ಸು ಅಥವಾ ವೈಫಲ್ಯಕ್ಕೆ (love failure) ಕಾರಣವಾಗಬಹುದು. ಜಾತಕದಲ್ಲಿ ಶುಕ್ರನ ಸ್ಥಾನವು ದುರ್ಬಲವಾಗಿದ್ದರೆ, ನಿಮ್ಮ ಪ್ರೀತಿಯ ಜೀವನ ಅಥವಾ ವೈವಾಹಿಕ ಜೀವನವೂ ನೀರಸ ಆಗಿರಬಹುದು

Tap to resize

ಜ್ಯೋತಿಷ್ಯದಲ್ಲಿ, ಶುಕ್ರನನ್ನು ಪ್ರೀತಿ, ಪ್ರಣಯ, ಗ್ಲಾಮರ್, ಭೌತಿಕ ಸಂತೋಷ ಮತ್ತು ಸೌಲಭ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನವು ದುರ್ಬಲವಾಗಿದ್ದರೆ ನಿಮ್ಮ ಲವ್ ಲೈಫ್ ಅಥವಾ ವೈವಾಹಿಕ ಜೀವನದಲ್ಲಿ ನೀರಸೆ ಇರುತ್ತದೆ, ಅಷ್ಟೇ ಅಲ್ಲ ವಿವಾಹಿತರಿಗೆ ಮಕ್ಕಳಾಗದೇ ಇರಬಹುದು. ಶುಕ್ರನ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಶುಕ್ರನ ದೋಷ ಉಂಟಾಗುತ್ತದೆ.

mantra jaap 2022

ಶುಕ್ರನನ್ನು ಈ ರೀತಿ ಬಲಪಡಿಸುವ ಮೂಲಕ ಜೀವನದಲ್ಲಿ ಪ್ರಣಯ ಹೆಚ್ಚಿಸಿ
ನಿಮ್ಮ ಪ್ರೀತಿಯ ಜೀವನ ಅಥವಾ ವೈವಾಹಿಕ ಜೀವನದಲ್ಲಿ ಪ್ರಣಯದ ಕೊರತೆಯಿದ್ದರೆ ಅಥವಾ ನಿಮ್ಮ ಸಂಗಾತಿಯೊಂದಿಗೆ ನೀವು ಚೆನ್ನಾಗಿ ಹೊಂದಿಕೊಳ್ಳದಿದ್ದರೆ, ನೀವು ಶುಕ್ರವಾರ ಉಪವಾಸ (fasting)ಮಾಡುವ ಮೂಲಕ ಶುಕ್ರ ಗ್ರಹವನ್ನು ಪೂಜಿಸಬೇಕು. ಶುಕ್ರನ ಬೀಜ ಮಂತ್ರ ಓಂ ಶುನ್ ಶುಕ್ರಾಯ ನಮಃ ಎಂದು ಪಠಿಸಬೇಕು. ಈ ಮಂತ್ರವನ್ನು 64 ಸಾವಿರ ಬಾರಿ ಪಠಿಸಬೇಕು.

ಶುಕ್ರ ಗ್ರಹವನ್ನು ಬಲಪಡಿಸಲು, ಹಾಲು, ಅಕ್ಕಿ, ಸಕ್ಕರೆ ಕ್ಯಾಂಡಿ, ಬಿಳಿ ಬಟ್ಟೆ, ಸುಗಂಧ ದ್ರವ್ಯ, ಮೊಸರು, ಬಿಳಿ ಹೂವುಗಳು (white flowers), ಬಿಳಿ ಶ್ರೀಗಂಧ ಇತ್ಯಾದಿಗಳನ್ನು ಶುಕ್ರವಾರ ದಾನ ಮಾಡಬೇಕು. ಇದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತೆ. 
 

ನೀವು ರತ್ನದ ಕಲ್ಲುಗಳನ್ನು ನಂಬಿದರೆ, ನೀವು 4 ರಿಂದ 5 ವಜ್ರವನ್ನು (diamond) ಧರಿಸಬೇಕು. ವಜ್ರದ ಜೊತೆಗೆ, ನೀವು ಬಿಳಿ ಟೋಪಾಜ್, ರೈನ್ ಸ್ಟೋನ್, ಜಿರ್ಕಾನ್, ಓಪಲ್ ಸಬ್ ಜೆಮ್ ಸ್ಟೋನ್ ಧರಿಸಬಹುದು. ಅವುಗಳನ್ನು ಧರಿಸುವುದರಿಂದ ಶುಕ್ರ ಗ್ರಹವು ಬಲಗೊಳ್ಳುತ್ತದೆ. ಆದಾಗ್ಯೂ, ರತ್ನದ ಕಲ್ಲುಗಳನ್ನು ಧರಿಸುವ ಮೊದಲು, ನಿಮ್ಮ ಜಾತಕವನ್ನು ಅರ್ಹ ಜ್ಯೋತಿಷಿಗಳಿಗೆ ತೋರಿಸಿ. ಕೆಲವು ರಾಶಿಚಕ್ರ ಚಿಹ್ನೆಗಳು ವಜ್ರಗಳನ್ನು ಧರಿಸದಂತೆ ಸೂಚಿಸಲಾಗಿದೆ.

Latest Videos

click me!