ಜಾತಕದಲ್ಲಿ ಕುಬೇರ ಯೋಗವಿದ್ದರೆ, ಲಕ್ ಒಕ್ಕರಿಸಿ ಬರುತ್ತೆ!

First Published | May 2, 2024, 5:55 PM IST

ಜಾತಕದಲ್ಲಿ ಕುಬೇರ ಯೋಗದಿಂದಾಗಿ, ವ್ಯಕ್ತಿಯ ಜೀವನದಲ್ಲಿ ಸಂಪತ್ತಿನ ಕೊರತೆ ಇರೋದಿಲ್ಲ. ಕುಬೇರ ಯೋಗಕ್ಕೆ ಸಂಪತ್ತಿನ ದೇವತೆಯಾದ ಕುಬೇರನ ಹೆಸರನ್ನು ಇಡಲಾಗಿದೆ. ಜಾತಕದಲ್ಲಿ ಗ್ರಹಗಳ ಕೆಲವು ವಿಶೇಷ ಸ್ಥಾನಗಳಿವೆ, ಅದು ಕುಬೇರ ಯೋಗವನ್ನು ರೂಪಿಸುತ್ತದೆ. ಬನ್ನಿ, ಕುಬೇರ ಯೋಗ ಯಾವಾಗ ರೂಪುಗೊಂಡಿತ್ತು ಮತ್ತು ಅದರ ಪರಿಣಾಮಗಳು ಯಾವುವು ಎಂದು ತಿಳಿಯಿರಿ.

ಜ್ಯೋತಿಷ್ಯದಲ್ಲಿ, ಕುಬೇರ ಯೋಗವನ್ನು (Kubera Yoga) ಬಹಳ ಮಂಗಳಕರ ಯೋಗವೆನ್ನುತ್ತಾರೆ. ತನ್ನ ಜಾತಕದಲ್ಲಿ ಕುಬೇರ ಯೋಗವನ್ನು ಹೊಂದಿರುವ ವ್ಯಕ್ತಿಯ ಜೀವನವು ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಮತ್ತು ಭೌತಿಕ ಸಂತೋಷದಿಂದ ತುಂಬಿರುತ್ತದೆ. ಕುಬೇರ ಯೋಗವು ಸಂಪತ್ತಿನ ಗಳಿಕೆಯೊಂದಿಗೆ ಸಂಬಂಧ ಹೊಂದಿದೆ. ಈ ಯೋಗಕ್ಕೆ ಸಂಪತ್ತಿನ ದೇವತೆಯಾದ ಕುಬೇರನ ಹೆಸರನ್ನು ಇಡಲಾಗಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಕುಬೇರ ಯೋಗವು ಯಾವಾಗ ರೂಪುಗೊಳ್ಳುತ್ತದೆ ಎಂದು ತಿಳಿಯೋಣ.
 

ಜಾತಕದಲ್ಲಿ ಕುಬೇರ ಯೋಗ ಯಾವಾಗ ಬರುತ್ತೆ?
ಕುಬೇರ ಯೋಗದ ಬಗ್ಗೆ ಹೇಳೊದಾದರೆ, ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಕೆಲವು ವಿಶೇಷ ಸ್ಥಾನಗಳಿವೆ, ಇದರಿಂದಾಗಿ ಕುಬೇರ ಯೋಗವು ರೂಪುಗೊಳ್ಳುತ್ತದೆ. ಜಾತಕದಲ್ಲಿ 2 ಮತ್ತು 11ನೇ ಮನೆಗಳ ಅಧಿಪತಿ ತಮ್ಮದೇ ರಾಶಿಯಲ್ಲಿ ಅಥವಾ ಉನ್ನತ ರಾಶಿಯಲ್ಲಿದ್ದಾಗ ಕುಬೇರ ಯೋಗವು ರೂಪುಗೊಳ್ಳುತ್ತದೆ. 2 ಮತ್ತು 11ನೇ ಮನೆಯ ನಡುವೆ ಪರಸ್ಪರ ರಾಶಿಚಕ್ರ ವಿನಿಮಯ ಅಥವಾ ಸಂಯೋಗ ಇರಬೇಕು. ಈ ಮನೆಗಳ ಅಧಿಪತಿಗಳು ಇತರ ಶುಭ ಗ್ರಹಗಳಿಂದ ಸಕಾರಾತ್ಮಕ ದೃಷ್ಟಿಯನ್ನು ಪಡೆದರೆ, ಕುಬೇರ ಯೋಗ ಇನ್ನಷ್ಟು ಬಲಗೊಳ್ಳುತ್ತದೆ.

Tap to resize

ಜ್ಯೋತಿಷ್ಯದಲ್ಲಿ, ಎರಡನೇ ಮತ್ತು ಹನ್ನೊಂದನೇ ಮನೆಗಳು ಆರ್ಥಿಕ ಸಮೃದ್ಧಿಗೆ ಸಂಬಂಧಿಸಿವೆ
ಜನ್ಮ ಜಾತಕದಲ್ಲಿ 2ನೇ ಮನೆ ಮತ್ತು 11ನೇ ಮನೆಯ ಅಧಿಪತಿಗಳ ಅನುಕೂಲಕರ ಸ್ಥಾನದಿಂದ ಕುಬೇರ ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಎರಡನೇ ಮನೆಯನ್ನು ಸಂಪತ್ತು, ಹಣಕಾಸು, ಭೌತಿಕ ಆಸ್ತಿ ಮತ್ತು ಕುಟುಂಬ ಸಂಪನ್ಮೂಲಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಹನ್ನೊಂದನೇ ಮನೆಯನ್ನು ಲಾಭಗಳು, ಆದಾಯ ಮತ್ತು ಆಸೆಗಳ ನೆರವೇರಿಕೆಯನ್ನು ಪ್ರತಿನಿಧಿಸುತ್ತದೆ.

ಜಾತಕದಲ್ಲಿ ಎರಡನೇ ಮನೆಯ ಅಧಿಪತಿಯು ವ್ಯಕ್ತಿಯ ಸಂಪತ್ತು ಮತ್ತು ಸಂಗ್ರಹಿತ ಸಂಪತ್ತಿನ ಸಂಕೇತ. ಎರಡನೇ ಮನೆ ಮತ್ತು ಅದರ ಅಧಿಪತಿಗೆ ಸಂಬಂಧಿಸಿದ ಗ್ರಹಗಳು ವ್ಯಕ್ತಿಯ ಆರ್ಥಿಕ ಸ್ಥಿತಿ (financial situation) ಮತ್ತು ಭೌತಿಕ ಆಸ್ತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಜಾತಕದಲ್ಲಿ ಹನ್ನೊಂದನೇ ಮನೆ ಬಗ್ಗೆ ಹೇಳೋದಾದ್ರೆ, ಹನ್ನೊಂದನೇ ಮನೆಯ ಅಧಿಪತಿಯು ಲಾಭ, ಆದಾಯ ಮತ್ತು ಆಸೆಗಳ ಈಡೇರಿಕೆಯ ಸಂಕೇತವಾಗಿದೆ. ಇದು ಭರವಸೆಗಳು, ಆಕಾಂಕ್ಷೆಗಳು ಮತ್ತು ವಿವಿಧ ವಿಧಾನಗಳ ಮೂಲಕ ಸಂಪನ್ಮೂಲಗಳು ಮತ್ತು ಹಣ ಪಡೆಯುವ ಸಂಕೇತ.
 

ಜಾತಕದಲ್ಲಿ ಕುಬೇರ ಯೋಗದ ಪರಿಣಾಮ
ಒಬ್ಬ ವ್ಯಕ್ತಿಯ ಜಾತಕದಲ್ಲಿ ಕುಬೇರ ಯೋಗವು (Kubera Yoga) ರೂಪುಗೊಂಡಾಗ, ಅವರಿಗೆ ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ. ಅವರು ಯಾವಾಗಲೂ ಸಂಪತ್ತನ್ನು ಸಂಗ್ರಹಿಸಲು ಅವಕಾಶ ಪಡೆಯುತ್ತಾರೆ. ಅದೇ ಸಮಯದಲ್ಲಿ, ಅವರ ವೃತ್ತಿಜೀವನವು ಯಾವಾಗಲೂ ಹೊಸ ಆಯಾಮಗಳನ್ನು ಸ್ಪರ್ಶಿಸುತ್ತದೆ. ಇದರೊಂದಿಗೆ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.
 

ಆದಾಯ ಹೆಚ್ಚಳ
ತಮ್ಮ ಜಾತಕದಲ್ಲಿ ಕುಬೇರ ಯೋಗವನ್ನು ಹೊಂದಿರುವ ಜನರು ಉದ್ಯೋಗವನ್ನು ಹೊರತುಪಡಿಸಿ ಇತರ ಮೂಲಗಳಿಂದ ಹಣ ಗಳಿಸುತ್ತಲೇ ಇರುತ್ತಾರೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಪಡೆಯುತ್ತಾರೆ. ವಿಶೇಷವಾಗಿ ವ್ಯಾಪಾರ ಮಾಡುವ ಜನರ ಆದಾಯ ವೇಗವಾಗಿ ಹೆಚ್ಚಾಗುತ್ತದೆ. ಜೊತೆಗೆ ಇವರು ಸಂತಸವಾಗಿರುತ್ತಾರೆ. ವ್ಯಕ್ತಿಯು ಹೊಸ ಮನೆ, ವಾಹನ ಖರೀದಿಸುತ್ತಾನೆ ಮತ್ತು ರಿಯಲ್ ಎಸ್ಟೇಟಿನಲ್ಲಿ ಹೆಚ್ಚಿಗೆ ಹೂಡಿಕೆ ಮಾಡುತ್ತಾರೆ. 

ವ್ಯವಹಾರದಲ್ಲಿ ಯಶಸ್ವಿಯಾಗುತ್ತಾರೆ
ಜಾತಕದಲ್ಲಿ ಕುಬೇರ ಯೋಗ ಹೊಂದಿರುವುದು ವ್ಯವಹಾರದಲ್ಲಿ ತುಂಬಾ ಲಾಭ ಗಳಿಸುತ್ತಾರೆ. ಬ್ಯುಸಿನೆಸ್ ಮಾಡೋರು ಸಣ್ಣ ಪ್ರಯತ್ನ ಮ್ಮಾಡಿದ್ರೂ ಉತ್ತಮ ಯಶಸ್ಸನ್ನು (success in business) ಸಾಧಿಸುತ್ತಾರೆ. ಕೆಲವು ವರ್ಷಗಳ ಕಠಿಣ ಪರಿಶ್ರಮದಿಂದಲೇ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಾರೆ. ಅದೇ ಸಮಯದಲ್ಲಿ, ಕುಬೇರ ಯೋಗದ ಪರಿಣಾಮ ಸಂಪತ್ತಿನ ಸಂಗ್ರಹಣೆ ಮೇಲೆ ಅಂದರೆ ಹಣದ ಉಳಿತಾಯದ ಮೇಲೂ ಪ್ರಭಾವ ಬೀರುತ್ತದೆ. ಅಂತಹ ಜನರು ತಮ್ಮ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುತ್ತಾರೆ, ಇದು ಅವರಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ.
 

Latest Videos

click me!