ವಿಶ್ವಾವಸು ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ 12 ರಾಶಿಗಳ ವರ್ಷದ ಫಲಾಫಲ
ಯುಗಾದಿಯಂದು ಸಂವತ್ಸರ ಬದಲಾಗುತ್ತದೆ, ಈ ಬಾರಿ ವಿಶ್ವಾವಸು ಸಂವತ್ಸರ, ಈ ವರ್ಷದ 12 ರಾಶಿಗಳ ಬಗ್ಗೆ ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್ ಹೇಳಿದ್ದಾರೆ.
ಯುಗಾದಿಯಂದು ಸಂವತ್ಸರ ಬದಲಾಗುತ್ತದೆ, ಈ ಬಾರಿ ವಿಶ್ವಾವಸು ಸಂವತ್ಸರ, ಈ ವರ್ಷದ 12 ರಾಶಿಗಳ ಬಗ್ಗೆ ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್ ಹೇಳಿದ್ದಾರೆ.
ಮೇಷ ರಾಶಿಗೆ ದೈವಾನುಕೂಲ ಇದ್ದು ವ್ಯವಹಾರಿಕ ಅಭಿವೃದ್ದಿಯಿದೆ. ಅಧಿಕಾರಿ ವರ್ಗಕ್ಕೆ ಮೇಲುಗೈ. ಜನ್ಮ ಶನಿ ಆರಂಭ ಶಾಂತಿಗಳನ್ನು ಮಾಡಿಸಿ.
ವೃಷಭ ರಾಶಿಗೆ ದೈವಾನುಕೂಲವಿದೆ, ಗೆಲ್ಲುವ ವರ್ಷವಿದು. ಮಾತು ಖರ್ಚುಗಳ ಮೇಲೆ ಹಿಡಿತವಿರಲಿ, ಶ್ರೀ ಗುರು ಪೀಠ ಸೇವೆಗಳಾಗಲಿ.
ಮಿಥುನ ರಾಶಿಗೆ ತಾಳ್ಮೆಯಿರಲಿ, ಆಪ್ತರೆ ತಿರುಗಿ ಬೀಳು ಸಾಧ್ಯತೆ ಇದೆ. ಗುರು ಬಲವಿಲ್ಲ. ಶ್ರೀ ಸುಬ್ರಮಣ್ಯ ನಾಗರ ಸೇವೆಗಳಾಗಲಿ.
ಕರ್ಕ ರಾಶಿಗೆ ಶನಿಯ ಶುಭ ಬದಲಾವಣೆಯಿಂದ ಗುರುವಾನುಕೂಲ ವರ್ಷ, ಸ್ರ್ತೀಯರಿಗೆ ಅಧಿಕ ಶುಭ, ಕುಟುಂಬ ಕಲಹ ಸಾಧ್ಯತೆ ಜಾಗ್ರತೆಯಿಂದ ಇರಿ.
ಸಿಂಹ ರಾಶಿಯವರು ಆರೋಗ್ಯದ ಬಗ್ಗೆ ಸ್ವಲ್ಪ ಜಾಗೃತೆ, ಬಾಕಿ ವರ್ಷ ಹರ್ಷ ದಾಯಕ, ಕಫ ದೋಷ ಸಾಧ್ಯತೆ, ಶ್ರೀ ರಾಮ ಸೇವೆಗಳಾಗಲಿ.
ಕನ್ಯಾ ರಾಶಿಗೆ ಶನಿಯ ಬಲ ಹೋಗಿ ರಾಹು ಬಲ ಬರುವುದು. ದೈವಾನೂಕೂಲ ವಿದೆ. ಧೈರ್ಯ ದಿಂದ ಮುನ್ನೆಡೆಯಿರಿ. ಶ್ರೀ ಆಂಜನೇಯನ ಸೇವೆ ಮಾಡಿ.
ತುಲಾ ರಾಶಿಗೆ ಪಟ್ಟ ನಾನಾ ಕಷ್ಟಗಳಿಗೆ ಪರಿಹಾರ ಸಿಗುವ ವರ್ಷ, ವಿಶ್ವಾಸವಿರಲಿ, ದೇವತಾನುಕೂಲವಿದೆ. ಶ್ರೀ ದುರ್ಗಾರಾಧನೆಯಾಗಲಿ.
ವೃಶ್ಚಿಕ ರಾಶಿಗೆ ಅಲ್ಪಕಾಲ ಗುರುವಿನ ಅನುಕೂಲ, ಪಂಚಮ ಶನಿ ಆರಂಭ ವರ್ಷ. ಅನೇಕ ಬದಲಾವಣೆಗಳ ಸಾಧ್ಯತೆ. ತೆರೆದ ಮನಸ್ಕರಾಗಿ ಅವಕಾಶ ನಿಮ್ಮದಾದೀತು. ನರಸಿಂಹ ಪೂಜೆ ಮಾಡಿ.
ಧನು ರಾಶಿಗೆ ಗುರು ಬಲ ಬರುವುದಿದೆ, ತಾಳ್ಮೆ ಇರಲಿ, ವ್ಯವಹಾರಿಕವಾಗಿ ಒಳ್ಳೆ ವರ್ಷ, ವಿದೇಶಿ ವ್ಯವಹಾರಗಳು ಬೆಳೆಯುತ್ತದೆ. ಶ್ರೀ ದುರ್ಗಾರಾಧನೆ ನಡೆಯಲಿ.
ಮಕರ ರಾಶಿಗೆ ಜನ್ಮಶನಿ ಪರಿಹಾರಾ, ಅದೇ ಶುಭ ಸುದ್ದಿ ನಿಮಗೆ. ನಿಂತ ಕಾರ್ಯಗಳು ಮುಂದೆ ಸಾಗುತ್ತವೆ. ಗ್ರಹ ಶಾಂತಿ ಗಣಪತಿ ಪೂಜೆ ಮಾಡಿರಿ.
ಕುಂಭ ರಾಶಿಗೆ ಜನ್ಮ ರಾಹು ಶುರು, ಶನಿ ಬಿಡುಗಡೆ ಗುರುವಾನುಕೂಲ ವರ್ಷ, ನಾನಾ ಅವಕಾಶಗಳ ಸಾಧ್ಯಾತೆ ಇದೆ ಬಳಸಿಕೊಳ್ಳಿ. ಶ್ರೀ ರಂಗ ನಾಥಸ್ವಾಮಿಯ ಸೇವೆ ಮಾಡಿ.
ಮೀನ ರಾಶಿಗೆ ಪದೇ ಪದೇ ನಿಂತ ನೀರಾಗುವ ಅನುಭವ ರಾಹು ಪ್ರಭಾವ ವಿದೆ, ಜೂನ್ ನಂತರ ಪರಿಸ್ಥಿತಿ ತಿಳಿಯಾಗುತ್ತದೆ. ಕುಲ ದೇವರ ಪೂಜೆ ಪಾರ್ಥನೆ ಮಾಡಿ. ಗ್ರಹಗಳ ಶಾಂತಿಯು ಅವಶ್ಯಕ.