ಗಣೇಶನಿಗೆ ನಮನ - ಧನ್ವಂತರಿ ಪಠಣ, 2026 ಹೂವಿನಂತೆ ಹೋಗ್ಬೇಕೆಂದ್ರೆ ಈ ಒಂಭತ್ತು ಮಂತ್ರ ಮರೆಯಬೇಡಿ

Published : Dec 17, 2025, 09:10 PM IST

New Year 2026 resolutions : 2025 ಮುಗೀತಿದೆ. 2026ಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಅಂದ್ರೆ ನೀವು ಕೆಲ ಮಂತ್ರವನ್ನು ಜಪಿಸಬೇಕು. ಒಂಭತ್ತು ಮಂತ್ರದಲ್ಲಿ ಸುಖಿ ಜೀವನದ ಗುಟ್ಟು. 

PREV
19
ಹೊಸ ವರ್ಷಕ್ಕೆ ಹೊಸ ಕನಸು

ಹೊಸ ಕ್ಯಾಲೆಂಡರ್ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನ ಬಾಕಿ ಇದೆ. ಹೊಸ ವರ್ಷದ ಜೊತೆ ಹೊಸ ಕನಸು ಚಿಗುರುತ್ತಿದೆ. ಹೊಸ ವರ್ಷ (new year)ದಲ್ಲಿ ಏನೆಲ್ಲ ಮಾಡ್ಬೇಕು ಎನ್ನುವ ಪಟ್ಟಿ ಸಿದ್ಧವಾಗಿದೆ. ಹೊಸ ವರ್ಷದಲ್ಲಿ ಸಮೃದ್ಧಿ ಮತ್ತು ಪ್ರಗತಿಗಾಗಿ ಮತ್ತಷ್ಟು ಶ್ರಮಿಸಬೇಕು, ಯಶಸ್ಸಿನ ತುತ್ತತುದಿ ತಲುಪಬೇಕು ಎನ್ನುವವರು ನೀವಾಗಿದ್ದರೆ ಒಂಭತ್ತು ಮಂತ್ರವನ್ನು ತಪ್ಪದೇ ಪಾಲಿಸಿ.

29
ಮೊದಲ ಹಾಗೂ ಪ್ರಮುಖ ಮಂತ್ರ

ನಮ್ಮ ಜೀವನದಲ್ಲಿ ಏಳ್ಗೆ ಆಗ್ಬೇಕು ಅಂದ್ರೆ ಪ್ರತಿದಿನ ಸೂರ್ಯೋದಯಕ್ಕೆ ಮುನ್ನ ಹಾಸಿಗೆಯಿಂದ ಎದ್ದೇಳೋದನ್ನು ಕಲಿಯಿರಿ. ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ನಿಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ. ಈ ಮಂತ್ರ ಗುರಿಗಳನ್ನು ತಲುಪಲು, ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಹಕಾರಿ.

39
ಸೂರ್ಯನ ಪೂಜೆ

ಸನಾತನ ಧರ್ಮದಲ್ಲಿ ಕಣ್ಣಮುಂದೆ ಗೋಚರಿಸುವ ಸೂರ್ಯ, ಅದೃಷ್ಟದ ದೇವ ಎಂದು ನಂಬಲಾಗಿದೆ. ಪ್ರತಿ ದಿನ ನೀವು ಸೂರ್ಯನ ಪೂಜೆ ಮಾಡ್ತಾ ಬಂದಲ್ಲಿ ಅದೃಷ್ಟ ಮತ್ತು ಆರೋಗ್ಯ ಎರಡೂ ಸುಧಾರಿಸುತ್ತದೆ. ಉದಯಿಸುತ್ತಿರುವ ಸೂರ್ಯನನ್ನು ನೀವು ಪೂಜೆ ಮಾಡ್ಬೇಕು. ಸೂರ್ಯದೇವನಿಗೆ ಜಲ ಅರ್ಪಿಸಿ ಪೂಜೆ ಮಾಡುವುದು ಹೆಚ್ಚು ಮಂಗಳಕರ.

49
ವಿನಾಯಕನ ಪೂಜೆ

ಸನಾತನ ಧರ್ಮದಲ್ಲಿ ವಿಘ್ನಗಳನ್ನು ದೂರ ಮಾಡುವ ದೇವರು ಗಣೇಶ ಎಂದು ನಂಬಲಾಗಿದೆ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕು, ಯಾವುದೇ ಅಡೆತಡೆ ಬರಬಾರದು ಅಂದ್ರೆ ಗಣಪತಿ ಪೂಜೆ ಮಾಡ್ಬೇಕು. ನೀವು ಪ್ರತಿದಿನ ಗಣೇಶನ ಪೂಜೆ ಮಾಡಿ. ಅಲ್ಲದೆ ಶ್ರೀ ಗಣೇಶಾಯ ನಮಃ ಮಂತ್ರವನ್ನು ಪಠಿಸಿ. ಇದರಿಂದ ಎಲ್ಲ ದೋಷ, ಸಮಸ್ಯೆ ನಿವಾರಣೆಯಾಗುತ್ತದೆ.

59
ರೋಗದಿಂದ ದೂರ

ಪ್ರತಿಯೊಬ್ಬರೂ ರೋಗದಿಂದ ಮುಕ್ತಿ ಬಯಸ್ತಾರೆ. ದೀರ್ಘಕಾಲದಿಂದ ಕಾಯಿಲೆ ನಿಮ್ಮನ್ನು ಕಾಡ್ತಿದ್ದರೆ ಅದರ ಪರಿಹಾರವಾಗಿ ನೀವು ಪ್ರತಿ ದಿನ ಧನ್ವಂತರಿ ಮಂತ್ರ ಜಪಿಸಿ. ಓಂ ನಮೋ ಭಗವತೇ ಧನ್ವಂತರಾಯ ವಿಷ್ಣುರೂಪಾಯ ನಮೋ ನಮಃ ಮಂತ್ರ ಜಪಿಸುತ್ತ ಬಂದಲ್ಲಿ ರೋಗ ದೂರವಾಗುತ್ತದೆ. ಆರೋಗ್ಯಕರ ದೇಹ ನಿಮ್ಮದಾಗುತ್ತದೆ. ವರ್ಷವಿಡೀ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನೀವು ಯೋಗ, ಧ್ಯಾನದ ಜೊತೆ ಈ ಮಂತ್ರ ಪಠಿಣಿ.

69
ಮನೆ – ಮನಸ್ಸಿನ ಸ್ವಚ್ಛತೆ

ಸ್ವಚ್ಛತೆ ಇರುವಲ್ಲಿ, ದೇವರು ಮತ್ತು ಸಂಪತ್ತಿನ ದೇವತೆ ಲಕ್ಷ್ಮಿ ನೆಲೆಸುತ್ತಾಳೆ. ನಿಮ್ಮ ಮನೆ ವರ್ಷವಿಡೀ ಸಂಪತ್ತು ಮತ್ತು ಸಮೃದ್ಧಿಯಿಂದ ತುಂಬಿರಬೇಕೆಂದು ನೀವು ಬಯಸಿದರೆ ನಿಯಮಿತವಾಗಿ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ. ಸೂರ್ಯೋದಯಕ್ಕಿಂತ ಮೊದಲೇ ಮುಖ್ಯ ದ್ವಾರವನ್ನು ಕ್ಲೀನ್ ಮಾಡಿ. ಅರಿಶಿನ ಬೆರೆಸಿದ ನೀರನ್ನು ಸಿಂಪಸಡಿಸಬೇಕು. ನಂತ್ರ ರಂಗೋಲಿ ಹಾಕಬೇಕು.

79
ಸಾಲದಿಂದ ಮುಕ್ತಿ

ಸಾಲದ ಹೊರೆ ಹೆಚ್ಚಾಗಿದ್ದು, ಮುಂದಿನ ವರ್ಷ ಈ ಸಾಲದ ಭಾರ ಮೈಮೇಲೆ ಇರಬಾರದು ಅಂದ್ರೆ ಒಂದು ಮಂತ್ರವನ್ನು ಸದಾ ನೆನಪಿಟ್ಟುಕೊಳ್ಳಿ. ಮಂಗಳವಾರ ಸಾಲದ ಕಂತುಗಳನ್ನು ಮರುಪಾವತಿಸಬೇಕು. ಹಾಗೆಯೇ ಯಾವುದೇ ಮಂgಳವಾರ ನೀವು ಸಾಳವನ್ನು ಪಡೆಯಬೇಡಿ. ಹಿಂದೂ ನಂಬಿಕೆ ಪ್ರಕಾರ, ಸಾಲವನ್ನು ತ್ವರಿತವಾಗಿ ತೊಡೆದುಹಾಕಲು, ಋಣಮೋಚನ ಮಂಗಳ ಸ್ತೋತ್ರವನ್ನು ಪಠಿಸಬೇಕು.

89
ನಕಾರಾತ್ಮಕ ಶಕ್ತಿ

ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರಬಾರದು ಅಂದ್ರೆ ನೀವು ಅಮವಾಸ್ಯೆ ಹಾಗೂ ಹುಣ್ಣಿಮೆ ದಿನ ಹವನ ಮಾಡ್ಬೇಕು. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆ ನಿಲ್ಲುತ್ತದೆ.

99
ಸಂಪೂರ್ಣ ಯಶಸ್ಸು

ಹೊಸ ವರ್ಷದಲ್ಲಿ ಸಂಪೂರ್ಣ ಯಶಸ್ಸು ಲಭಿಸಬೇಕು ಅಂದ್ರೆ ಗುರುಗಳು ಹಾಗೂ ಹಿರಿಯರ ಆಶೀರ್ವಾದ ಬಹಳ ಮುಖ್ಯ. ಎಂದಿಗೂ ಅವರನ್ನು ನಿರ್ಲಕ್ಷ್ಯ ಮಾಡದೆ, ಗೌರವದಿಂದ ಅವರನ್ನು ನೋಡಿ, ಅವರು ಸಂತೋಷವಾಗಿರುವಂತೆ ನೋಡಿಕೊಳ್ಳಿ.

Read more Photos on
click me!

Recommended Stories