ಮದ್ವೆಯಾಗದ ಹುಡುಗಿಯರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬಾರದಂತೆ… ಯಾಕಿರಬಹುದು?

First Published Mar 23, 2024, 5:37 PM IST

ಕನ್ಯೆಯರು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ. ಕೆಲವೊಂದು ಕೆಲಸಗಳನ್ನು ಹುಡುಗಿಯರು ಮದುವೆಯಾದ ನಂತರವಷ್ಟೇ ಮಾಡಬಹುದು.ಅಂತಹ ಕೆಲಸಗಳು ಯಾವುವು? ಅವುಗಳನ್ನು ಯಾಕೆ ಮಾಡಬಾರದು ತಿಳಿಯೋಣ. 
 

ಕನ್ಯೆಯರು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ನಮ್ಮ ಹಿರಿಯರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ.  ಕನ್ಯೆಯರು ಯಾಕೆ ಕೆಲವೊಂದು ಕೆಲಸ ಮಾಡಬಾರದು, ಅದರಿಂದ ಏನಾಗುತ್ತೆ ಎಂದು ನಿಮಗೂ ಅಚ್ಚರಿಯಾಗಬಹುದು. ನಿಮ್ಮಲ್ಲೂ ಈ ಪ್ರಶ್ನೆ ಇದ್ದರೆ, ನಿಮಗಾಗಿ ಸರಿಯಾದ ಉತ್ತರ ಇಲ್ಲಿದೆ. ನೀವು ಕನ್ಯೆಯಾಗಿದ್ದಲ್ಲಿ, ಈ ಕೆಲಸ ಮಾಡೋದನ್ನು ತಪ್ಪಿಸಿ. 
 

ತುಳಸಿಗೆ ನೀರು ಹಾಕಬಾರದು. 
ತುಳಸಿ ಮಾತೆಯನ್ನು (Tulsi Puja) ವಿಷ್ಣುವಿನ ಪ್ರೀತಿಪಾತ್ರಳೆಂದು ಪರಿಗಣಿಸಲಾಗುತ್ತದೆ. ಮೊದಲು ತುಳಸಿಯು ಜಲಂಧರ್ ಎಂಬ ಅಸುರನ ಹೆಂಡತಿಯಾಗಿದ್ದಳು. ಆದರೆ ವಿಷ್ಣು ತನ್ನ ದೇವ ಕಾರ್ಯದ ಸಲುವಾಗಿ ತುಳಸಿ ಮಾತೆಯ ವಿರುದ್ಧ ಜಾಲ ರಚಿಸಿದನು  ತುಳಸಿಗೆ ಸತ್ಯ ತಿಳಿದಾಗ, ಆಕೆ ತನ್ನ ದೇಹವನ್ನು ಬೆಂಕಿಯಲ್ಲಿ ಅರ್ಪಿಸಿದಳು. ತುಳಸಿಯ ಮೂಲ ಹೆಸರು ವೃಂದಾ, ಅವಳು ನಿಷ್ಠಾವಂತ ಮಹಿಳೆ, ಆದ್ದರಿಂದ ವಿವಾಹಿತ ಮಹಿಳೆ ಮಾತ್ರ ತುಳಸಿಗೆ ನೀರು ಮತ್ತು ಕುಂಕುಮ ಅರ್ಪಿಸಬೇಕು, ಇದರಿಂದ ಆಕೆ ಸುಮಂಗಲಿಯಾಗಿ ಉಳಿಯುತ್ತಾರೆ.  ಕನ್ಯೆಯರು ತುಳಸಿಗೆ ನೀರು ಹಾಕಬಾರದು ಎನ್ನಲಾಗುತ್ತದೆ. 

Latest Videos


ಕಾಲುಂಗುರ ಧರಿಸಬಾರದು
ಮದುವೆಯ ನಂತರವೇ ಕಾಲುಂಗುರ ಧರಿಸಬೇಕು ಎಂದು ಹೇಳಲಾಗುತ್ತದೆ. ಕನ್ಯೆಯರು ಕಾಲುಂಗುರ ಧರಿಸೋದರಿಂದ ಅಶುಭವಾಗುತ್ತದೆ ಎನ್ನಲಾಗುತ್ತದೆ. ಕಾಲುಂಗುರ ಗರ್ಭಾಶಯದ ಮೇಲೆ ಪರಿಣಾಮ ಬೀರುವುದರಿಂದ, ಅಂತಹ ನಂಬಿಕೆ ಇದೆ. ಈ ಕಾರಣದಿಂದಾಗಿ ಕಾಲುಂಗುರವನ್ನು ಕೇವಲ ಸುಮಂಗಲಿ ಮಹಿಳೆಯರು ಮಾತ್ರ ಧರಿಸಬಹುದು ಎನ್ನಲಾಗುತ್ತದೆ. 

ತಮ್ಮ ಕೂದಲನ್ನು ತೆರೆದಿಟ್ಟು ಮಲಗಬಾರದು
ಹುಡುಗಿಯರು ಕೂದಲನ್ನು ತೆರೆದಿಡಬಾರದು ಮತ್ತು ಕೂದಲನ್ನು ತೆರೆದಿಟ್ಟು (open hair) ಮಲಗಬಾರದು ಎಂದು ಮನೆಯ ಹಿರಿಯರು ಆಗಾಗ್ಗೆ ಹೇಳುತ್ತಾರೆ. ಯಾಕೆಂದರೆ, ನಕಾರಾತ್ಮಕ ಶಕ್ತಿಗಳು ಅದರ ಮೇಲೆ ಪ್ರಾಬಲ್ಯ ಸಾಧಿಸಬಹುದು ಎಂಬ ನಂಬಿಕೆ ಇದೆ.  ಕೂದಲು ಬಿಟ್ಟು ಮಲಗೋದರಿಂದ ಕೂದಲು ಹಾಳಾಗುವ ಸಾಧ್ಯತೆ ಕೂಡ ಇದೆ,  ಆದರಿಂದ ಕೂದಲು ಬಿಟ್ಟು ಮಲಗಬಾರದು ಎನ್ನಲಾಗುತ್ತದೆ. 

ಕುಂಕುಮ ಮತ್ತು ಬಿಂದಿ ಧರಿಸಬಾರದು
ಕನ್ಯೆಯರು ಸಿಂಧೂರ ಬಳಸಿ ಬೊಟ್ಟು ಹಾಕಬಾರದು ಅಥವಾ ಬಿಂದಿಯನ್ನು ಹಚ್ಚಬಾರದು ಎಂಬ ನಿಯಮವೂ ಇದೆ. ಕನ್ಯೆ ಹುಡುಗಿ ಬಯಸಿದರೆ, ದೇವರ ಕುಂಕುಮದಿಂದ ಸಣ್ಣ ಬಿಂದಿ ಹಚ್ಚಬಹುದು. ನೆತ್ತಿಯ ಮೇಲೆ ಕುಂಕುಮ ಇಡುವ ಅಧಿಕಾರ ಯಾವುದೇ ಹುಡುಗಿಯರಿಗೆ ಇಲ್ಲ.

ಕನ್ಯೆಯರು ಯಾರ ಪಾದ ಮುಟ್ಟಿ ನಮಸ್ಕರಿಸಬಾರದು
ಪುಟ್ಟ ಹುಡುಗಿಯರು  ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸೋದನ್ನು ನಾವು ನೋಡಿದ್ದೇವೆ. ಆದ ಕನ್ಯೆಯರು ಯಾರ ಪಾದವನ್ನು ಮುಟ್ಟಿ ನಮಸ್ಕರಿಸಬಾರದು. ಯಾಕಂದ್ರೆ ಕನ್ಯೆಯರನ್ನು ದೇವರೆಂದು ಪರಿಗಣಿಸಲಾಗುತ್ತದೆ ಜೊತೆಗೆ, ಅವರನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಹಾಗಾಗಿ ಕನ್ಯೆಯರನ್ನ ಪಾದ ಮುಟ್ಟಿ ನಮಸ್ಕರಿಸಬಾರದು ಎಂದು ಹೇಳಲಾಗುತ್ತದೆ. 

click me!