ಸುಳ್ಳು ಹೇಳೋದ್ರಲ್ಲಿ ನಿಪುಣರು ಈ ಹುಡುಗೀರು… ಇಂಥವರಿಂದ ಹುಷಾರಾಗಿರ್ರಪ್ಪಾ ಹುಡುಗ್ರು…

Published : Feb 22, 2025, 01:54 PM ISTUpdated : Feb 22, 2025, 02:48 PM IST

ಈ ಮೂರು ದಿನಾಂಕಗಳಲ್ಲಿ ಜನಿಸಿದ ಹುಡುಗಿಯರನ್ನು ಸುಳ್ಳು ಹೇಳುವುದರಲ್ಲಿ ಮಾಸ್ಟರ್ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಅಂತಹ ಹುಡುಗಿಯರಿಂದ ದೂರ ಉಳಿದರೆ ಉತ್ತಮ. ಯಾವ ಹುಡುಗಿಯರಿಂದ ದೂರ ಉಳಿಯಬೇಕು ಅನ್ನೋದನ್ನು ನೊಡೋಣ.   

PREV
17
ಸುಳ್ಳು ಹೇಳೋದ್ರಲ್ಲಿ ನಿಪುಣರು ಈ ಹುಡುಗೀರು… ಇಂಥವರಿಂದ ಹುಷಾರಾಗಿರ್ರಪ್ಪಾ ಹುಡುಗ್ರು…

ಸಂಖ್ಯಾಶಾಸ್ತ್ರದ (Numerology) ಪ್ರಕಾರ, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಅದು ಅವರ ಒಳ್ಳೆಯ ಗುಣ ಇರಲಿ, ಕೆಟ್ಟ ಗುಣ ಇರಲಿ, ಅವರು ಜೀವನದಲ್ಲಿ ಏನಾಗಬೇಕು ಅನ್ನೊದು ಇರಲಿ, ಎಲ್ಲವೂ ಅವರು ಹುಟ್ಟಿದ ದಿನಾಂಕದ ಮೂಲಕ ತಿಳಿಯಬಹುದು. 

27

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಹುಡುಗಿಯರು ಸುಳ್ಳು ಹೇಳೋದರಲ್ಲಿ ನಿಸ್ಸೀಮರಾಗಿರುತ್ತಾರೆ. ಅದರಲ್ಲೂ ಕೆಲವು ಜನ್ಮ ದಿನಾಂಕಗಳಿವೆ, ಆ ದಿನಗಳಂದು ಯಾವ ಹುಡುಗಿ ಜನಿಸಿರುತ್ತಾಳೋ, ಆ ಹುಡುಗಿ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರಂತೆ. ಅಂತಹ ಹುಡುಗಿಯರಿಂದ ದೂರ ಉಳಿಯೋದೇ ಉತ್ತಮ ಎನ್ನಲಾಗುತ್ತೆ. 
 

37

ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ವಿಶ್ವಾಸವನ್ನು ಗೆಲ್ಲಲು ಸುಳ್ಳು ಕಥೆಗಳನ್ನು ಹೇಳುತ್ತಾರೆ. ಅದನ್ನು ನಿಜವೆಂದು ನಂಬಿಸುವಂತೆ ಸುಳ್ಳು ಹೇಳುತ್ತಾರೆ. ಇವರ ಹೂವಿನಂತಹ ಮಧುರ ಮಾತುಗಳನ್ನು ಕೇಳಿ, ಮನಸೋಲುವವರು ಹೆಚ್ಚಿರುತ್ತಾರೆ. ಆದರೆ ಬಳಿಕ ಅವರ ನಿಜ ಕಥೆ ಕೇಳಿದ ಮೇಲೆ ತಲೆ ಮೇಲೆ ಕೈಹೊತ್ತು ಕೂರಬೇಕಾಗುತ್ತೆ. ಹಾಗಾದ್ರೆ ಆ ಮೂರು ದಿನಾಂಕಗಳು ಯಾವುವು ನೋಡೋಣ. 
 

47

ಈ ಮೂರು ದಿನಾಂಕಗಳಲ್ಲಿ ಒಂದು 4. ಹೌದು ಯಾವುದೇ ತಿಂಗಳ 4 ನೇ ತಾರೀಖಿನಂದು ಜನಿಸಿದ ಹುಡುಗಿಯರು ತಮ್ಮ ಇಮೇಜ್ ಗಾಗಿ ಸುಳ್ಳು ಹೇಳುತ್ತಾರೆ. ಎಲ್ಲರೆದುರು ತಾವು ಉತ್ತಮ ರೀತಿಯಲ್ಲಿ ಕಾಣಿಸಿಕೊಳ್ಳಬೇಕು. ಎಲ್ಲರೂ ತಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವ ಹುಚ್ಚು ಮನಸ್ಸಿನಿಂದ ಸುಳ್ಳು ಹೇಳುತ್ತಾ ಅರಮನೆಯನ್ನೇ ಸೃಷ್ಟಿ ಮಾಡಿಬಿಡುತ್ತಾರೆ. 

57

ಎರಡನೇಯ ದಿನಾಂಕ 13. ಯಾವುದೇ ತಿಂಗಳ 13 ನೇ ತಾರೀಖಿನಂದು ಜನಿಸಿದ ಹುಡುಗಿಯರು ಸಹ ಸುಳ್ಳು ಹೇಳೋದರಲ್ಲಿ ಬಹಳ ಮುಂದಿರುತ್ತಾರೆ. ಅಷ್ಟೇ ಅಲ್ಲ ಅವರು ಹಠಮಾರಿಗಳಾಗಿರುತ್ತಾರೆ. ತಮ್ಮ ಹಠವನ್ನು ಸಾಧಿಸೋದಕ್ಕಾಗಿ ಅವರು ಸುಳ್ಳುಗಳ ಸರಮಾಲೆಯನ್ನು (lots of lies) ಹೇಳುತ್ತಾರೆ. ಹಾಗಾಗಿ ಈ ತಾರೀಕಿನಂದು ಜನಿಸಿದ ಹುಡುಗಿಯನ್ನು ಸಹ ಸಂಪೂರ್ಣವಾಗಿ ನಂಬಬೇಡಿ. 
 

67

ಈ ಮೂರು ದಿನಾಂಕಗಳಲ್ಲಿ ಮೂರನೆಯದು 22. ಯಾವುದೇ ತಿಂಗಳ 22 ರಂದು ಜನಿಸಿದ ಹುಡುಗಿಯರು ಹೇಗೆ ಸುಳ್ಳು ಹೇಳುತ್ತಾರೆ ಅಂದರೆ, ಅವರ ಮುಂದಿರುವ ವ್ಯಕ್ತಿಗೆ ಸ್ವಲ್ಪವೂ ಅನುಮಾನ ಬಾರದ ರೀತಿಯಲ್ಲಿ ಸುಳ್ಳು ಹೇಳುತ್ತಾರೆ. ಈ ವ್ಯಕ್ತಿಗಳಿಗೆ ತಮ್ಮ ಮೇಲೆ ಸಾಕಷ್ಟು ಆತ್ಮವಿಶ್ವಾಸವನ್ನೂ ಹೊಂದಿರುತ್ತಾರೆ. ಹಾಗಾಗಿ ಅವರ ಬಾಯಲ್ಲಿ ಸುಳ್ಳುಗಳು ಲೀಲಾಜಾಲವಾಗಿ ಬರುತ್ತೆ. 
 

77

ನೀವು ನೆನಪಿನಲ್ಲಿ ಇಡಬೇಕಾದ ಒಂದು ವಿಷ್ಯ ಅಂದ್ರೆ  4, 13, 22ನೇ ತಾರೀಕಿನಂದು ಜನಿಸಿದವರು ಸುಳ್ಳು ಹೇಳುತ್ತಾರೆ ನಿಜಾ. ಆದರೆ ಆ ತಾರೀಕಿನಂದು ಜನಿಸಿದ ಎಲ್ಲಾ ಹುಡುಗಿಯರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು ಆಗಿರೋದಿಲ್ಲ. ಕೆಲವರು ಸತ್ಯ ಸಂಧರೂ ಆಗಿರುತ್ತಾರೆ. ಇದು ಅವರ ಹುಟ್ಟಿದ ದಿನಾಂಕದ ಜೊತೆಗೆ, ರಾಶಿ, ನಕ್ಷತ್ರಗಳ ಮೇಲೆ ಸಹ ಪರಿಣಾಮ ಬೀರುತ್ತದೆ. 
 

Read more Photos on
click me!

Recommended Stories