Gen-Z and Astro: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಶುಭ ಕಾರ್ಯವನ್ನು ಶುಭ ಸಮಯಕ್ಕೆ ಅನುಗುಣವಾಗಿ ಮಾಡಲಾಗುತ್ತದೆ. ಆದರೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಇಂದಿನ ಯುವಕರು ಈ ಸಂಪ್ರದಾಯಗಳನ್ನು ತಮ್ಮದೇ ಆದ ರೀತಿಯಲ್ಲಿ ನವೀಕರಿಸುತ್ತಿದ್ದಾರೆ. Gen-Z ಗಳು ಏನು ಮಾಡ್ತಿದ್ದಾರೆ ಗೊತ್ತಾ?
ಹಿಂದೂ ಧರ್ಮದಲ್ಲಿ, ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಸರಿಯಾದ ಸಮಯ ಮತ್ತು ಶುಭ ಕ್ಷಣವನ್ನು ನಿರ್ಧರಿಸಲಾಗುತ್ತಿತ್ತು. ರಾಹು ಕಾಲದಲ್ಲಿ ಅಥವಾ ಅಶುಭ ಕಾಲದಲ್ಲಿ ಶುಭ ಕಾರ್ಯಗಳನ್ನು ಮುಂದೂಡಲಾಗುತ್ತಿತ್ತು ಮತ್ತು ಸರಿಯಾದ ಕ್ಷಣಕ್ಕಾಗಿ ಕಾಯಲಾಗುತ್ತಿತ್ತು. ಈ ಸಂಪ್ರದಾಯವು ಇಲ್ಲಿಯವರೆಗೆ ಮುಂದುವರೆದಿದೆ, ಆದರೆ ಬದಲಾಗುತ್ತಿರುವ ಕಾಲದೊಂದಿಗೆ, ಇಂದಿನ Gen-Z ಪೀಳಿಗೆ (ಜನನ 1997-2012) ಅದನ್ನು ತನ್ನದೇ ಆದ ರೀತಿಯಲ್ಲಿ ಬದಲಾಯಿಸುತ್ತಿದೆ.
27
ಜಾತಕಗಳನ್ನು ಆಧರಿಸಿ ಟೂರ್ ಪ್ಲ್ಯಾನ್
ಇಂದಿನ ಯುವಕರು ತಮ್ಮ ಜಾತಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ತಮ್ಮ ಜಾತಕದಲ್ಲಿ ವಿದೇಶ ಪ್ರವಾಸದ ಯೋಗ ಇದೆಯೇ? ಮದುವೆ ಯಾವ ತಿಂಗಳು ನಡೆಯುತ್ತದೆ ಮತ್ತು ಪ್ರವಾಸಕ್ಕೆ ಯಾವ ಸಮಯ ಉತ್ತಮವಾಗಿದೆ ಎಂಬಂತಹ ಪ್ರತಿಯೊಂದು ಚಟುವಟಿಕೆಯ ವಿವರಗಳನ್ನು ನಿರ್ಧರಿಸಲು ಅವರು ಜಾತಕ ನೋಡುತ್ತಾರೆ. 2025 ರ ಟ್ರೆಂಡಿಂಗ್ ಗಮನಿಸಿದರೆ, 81% ಭಾರತೀಯ ಯುವಕರು ಐಷಾರಾಮಿ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ.
37
ಆಧ್ಯಾತ್ಮದ ಗೀಳು ಹೆಚ್ಚಾಗಿದೆ
ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಅನೇಕ ಅಪ್ಲಿಕೇಶನ್‌ಗಳು ಮತ್ತು ಸಂಬಂಧಿತ ಮಾಹಿತಿಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುಲಭವಾಗಿ ಲಭ್ಯವಿದೆ. ಇದು ಯುವಕರಲ್ಲಿ ಆಧ್ಯಾತ್ಮದ ಗೀಳು ಬೆಳೆಯಲು ಕಾರಣವಾಗಿದೆ.
Gen-Zಗಳು ಆಧ್ಯಾತ್ಮಿಕತೆಯನ್ನು ತಮಗೆ ಇಷ್ಟ ಬಂದಂತೆ ಆಯ್ಕೆ ಮಾಡುತ್ತಾರೆ. ಅವರು ತಮ್ಮ ಜಾತಕದ ಆಧಾರದ ಮೇಲೆ ತಮ್ಮ ಪ್ರವಾಸಗಳು ಮತ್ತು ಹನಿಮೂನ್ ಸಹ ಪ್ಲಾನ್ ಮಾಡುತ್ತಾರೆ. ಉದಾಹರಣೆಗೆ, ಅವರ ಜಾತಕದಲ್ಲಿನ 7 ನೇ ಮನೆ (ಪ್ರಣಯ/ಪ್ರಯಾಣ) ಇದನ್ನು ಪ್ರತಿಬಿಂಬಿಸುತ್ತದೆ. ಇದರ ಆಧಾರದ ಮೇಲೆ ಅವರು ತಮ್ಮ ಸಂಗಾತಿಗೂ ಇಷ್ಟವಾಗುವ ರೊಮ್ಯಾಂಟಿಕ್ ತಾಣಗಳನ್ನು ಆಯ್ಕೆ ಮಾಡುತ್ತಾರೆ.
57
ಸಾಮಾಜಿಕ ಮಾಧ್ಯಮದ ಪ್ರಭಾವ
ಇನ್‌ಸ್ಟಾಗ್ರಾಮ್‌ನಂತಹ ವಿವಿಧ ಸಾಮಾಜಿಕ ವೇದಿಕೆಗಳಲ್ಲಿ #AstrologyTravel2025 ಎಂಬ ಹ್ಯಾಶ್‌ಟ್ಯಾಗ್ ಅನ್ನು ಯುವಜನರು ಹಂಚಿಕೊಂಡಿರುವ 2 ಮಿಲಿಯನ್‌ಗಿಂತಲೂ ಹೆಚ್ಚು ಪೋಸ್ಟ್‌ಗಳನ್ನು ಕಾಣಬಹುದು. ಚಂದ್ರನ ರಾಶಿಯು ನೀರಿನ ರಾಶಿಯಾಗಿದೆ. ಆದ್ದರಿಂದ ಗೋವಾದ ಕಡಲತೀರಗಳಲ್ಲಿ ಹನಿಮೂನ್ ಪರ್ಫೆಕ್ಟ್ ಎಂದು ಗೋವಾ ಕಡೆ ಹೋಗುವವರೂ ಇದ್ದಾರೆ.
67
ಹನಿಮೂನ್ ಯೋಜನೆಯಲ್ಲಿ ಜಾತಕಗಳ ಪಾತ್ರ
ಹನಿಮೂನ್ ಯೋಜನೆಯಲ್ಲಿ ಜಾತಕವು ಮಹತ್ವದ ಪಾತ್ರ ವಹಿಸುತ್ತದೆ. Gen-Z ಸಾಂಪ್ರದಾಯಿಕ ಹನಿಮೂನ್‌ಗಳನ್ನು ಆಸ್ಟ್ರೋ-ಟೈಲರ್ಡ್ ಆಗಿ ಪರಿವರ್ತಿಸುತ್ತಿದೆ. ಉದಾಹರಣೆಗೆ, ಮೇಷ ರಾಶಿಯವರು ಬೆಂಕಿಯ ಅಂಶವಾಗಿರುವುದರಿಂದ ನೀರಿನ ಹಂಬಲವನ್ನು ಹೊಂದಿರುತ್ತಾರೆ. ಅವರು ಹೆಚ್ಚಾಗಿ ಮಾಲ್ಡೀವ್ಸ್ ಆಯ್ಕೆ ಮಾಡುತ್ತಾರೆ. ಈ ರಾಶಿಯವರು ಜನಸಂದಣಿಯನ್ನು ಇಷ್ಟಪಡುವುದಿಲ್ಲ ಮತ್ತು ತಮ್ಮ ಸಂಗಾತಿಯೊಂದಿಗೆ ಶಾಂತ ಸ್ಥಳದಲ್ಲಿ ಗುಣಮಟ್ಟದ ಸಮಯವನ್ನು ಕಳೆಯಲು ಬಯಸುತ್ತಾರೆ.
77
ಹೀಗೆ ತಮ್ಮ ಟ್ರಾವೆಲ್ ಪ್ಲಾನ್ ಮಾಡ್ತಾರೆ
ಮತ್ತೊಂದೆಡೆ, ಮಿಥುನ ರಾಶಿಯವರು ವಿದೇಶಿ ದೇಶಗಳಿಗೆ ಪ್ರಯಾಣಿಸಲು ಬಯಸುತ್ತಾರೆ. ಸಿಂಹ ರಾಶಿಯವರು ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ಅವರು ವಿವಿಧ ದೇಶಗಳಿಗೆ ಪ್ರಯಾಣಿಸಲು ಮತ್ತು ಪ್ರತಿಯೊಂದು ಸ್ಥಳದ ಸಂಸ್ಕೃತಿಯನ್ನು ಎಕ್ಸ್ ಪ್ಲೋರ್ ಮಾಡಲು ಇಷ್ಟಪಡುತ್ತಾರೆ. ಪ್ಯಾರಿಸ್ ಮತ್ತು ರಾಜಸ್ಥಾನ ಅವರಿಗೆ ಸೂಕ್ತ ತಾಣಗಳಾಗಿವೆ. ಕನ್ಯಾ ರಾಶಿಯವರಿಗೆ ರಾಜಮನೆತನದ ಸ್ಥಳಗಳು ತುಂಬಾ ಇಷ್ಟ. ರಾಜಸ್ಥಾನದ ಜೈಸಲ್ಮೇರ್ ಅವರಿಗೆ ಅತ್ಯುತ್ತಮ ಸ್ಥಳ.