ಶೀಘ್ರವೇ ಕಲ್ಯಾಣ ಪ್ರಾಪ್ತಿಯಾಗಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು

First Published | Dec 16, 2021, 9:43 PM IST

ಕೆಲವೊಮ್ಮೆ ದಾಂಪತ್ಯದಲ್ಲಿ (married life) ಅನಗತ್ಯ ತೊಂದರೆಗಳು ಉಂಟಾಗುತ್ತವೆ. ಕೆಲವೊಮ್ಮೆ ಮದುವೆ ತಡವಾಗುತ್ತದೆ, ಇನ್ನು ಕೆಲವೊಮ್ಮೆ ಹುಡುಗ ಹುಡುಗಿಯರು ಬೇರೆ ಕೆಲವು ಕಾರಣಗಳಿಂದ ಮದುವೆಯಾಗಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲಾ ಕಾರಣಗಳು ಹಲವಿರುತ್ತವೆ. ಅವುಗಳ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಅದಕ್ಕೂ ಪರಿಹಾರ ಇದೆ. 
 

ಮುಂದಿನ ವರ್ಷ ಮದುವೆಗೆ ಸಿದ್ಧವಾಗಿರುವ ಹುಡುಗರು ಮತ್ತು ಹುಡುಗಿಯರಿಗೆ ಕೆಲವು ಸರಳ ಸಲಹೆಗಳು ಇಲ್ಲಿವೆ . ಇದರಿಂದ ಮದುವೆ (wedding) ಇರುವಂತಹ ಎಲ್ಲಾ ಅಡ್ಡಿ ಆತಂಕಗಳು ಬೇಗ ನಿವಾರಣೆಯಾಗುತ್ತವೆ, ಮತ್ತು ಬೇಗ ಮದುವೆಯಾಗಲು ಸಹಾಯವಾಗುತ್ತದೆ. 

ಹುಡುಗಿಯರು  ವಿವಾಹಕ್ಕಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಿ.
-ಅವಿವಾಹಿತ ಹುಡುಗಿಯರು ಆದಷ್ಟು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಹಾಗೆಯೇ ಕಪ್ಪು ಮತ್ತು ಗಾಢ ನೀಲಿ ಬಟ್ಟೆಗಳನ್ನು (dark blue dress) ಧರಿಸುವುದನ್ನು ತಪ್ಪಿಸಬೇಕು. ಇದರಿಂದ ಬೇಗನೆ ಶುಭ ಕಾರ್ಯ ನಡೆಯುತ್ತದೆ.

Tap to resize

- ಗುರುವಾರ ಉಪವಾಸ ಮಾಡಿ ಮತ್ತು ಹಳದಿ ವಸ್ತುಗಳನ್ನು ದಾನ ಮಾಡಿ. 
- ನಿಮ್ಮ ಕೋಣೆಯಲ್ಲಿ ಗುಲಾಬಿ ಪರದೆಗಳು ಮತ್ತು ಹಾಳೆಗಳನ್ನು ಬಳಸಿ. 
- ಕೇಸರಿಯನ್ನು ಸೇವಿಸಿ. 
-ಪ್ರತಿ ಗುರುವಾರ ಅರಳಿ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ.
 

ಹುಡುಗರಿಗೆ ಕ್ರಮಗಳು  
- ಹುಡುಗರ ಬೇಗ ವಿವಾಹವಾಗಲು ಶುಕ್ರವಾರದಂದು ಉಪವಾಸ (Fasting) ಮಾಡಬೇಕು. 
-ಗುರುವಾರ ನೀರಿನಲ್ಲಿ ಒಂದು ಚಿಟಿಕೆ ಅರಿಶಿನ ಬೆರೆಸಿ ಸ್ನಾನ ಮಾಡಿ. ಗುರುವಿನ ಕೃಪೆಯಿಂದ ವಿವಾಹ  ಶೀಘ್ರದಲ್ಲೇ ನಡೆಯಲಿದೆ.
-ಹಸಿರು, ಗುಲಾಬಿ ಮತ್ತು ಬಿಳಿ ಬಟ್ಟೆಗಳನ್ನು ಬಳಸಿ. ಕಪ್ಪು, ಗಾಢ ನೀಲಿ ಬಟ್ಟೆಗಳನ್ನು ತಪ್ಪಿಸಿ. 

- ಅವಿವಾಹಿತ ಹುಡುಗರು ಮಂಗಳವಾರ ದೇವಾಲಯಕ್ಕೆ ಹೋಗಿ ಪೂಜೆ ಮಾಡಬೇಕು ಮತ್ತು ನಂತರ ಸ್ವಲ್ಪ ಕುಂಕುಮವನ್ನು ತೆಗೆದುಕೊಂಡು ರಾಮ-ಸೀತ ಪಾದಗಳಲ್ಲಿ ಅರ್ಪಿಸಬೇಕು. 21 ಮಂಗಳವಾರದ ವೇಳೆಗೆ ಹೀಗೆ ಮಾಡಿ, ಮದುವೆಯ ಹಾದಿಯಲ್ಲಿನ ದೊಡ್ಡ ತೊಂದರೆ ದೂರವಾಗುತ್ತದೆ. 

ಈ ವಿಷಯಗಳನ್ನು ತಪ್ಪಿಸಿ 
ಆದಷ್ಟು ಬೇಗ ಮದುವೆಯಾಗಲು ಬಯಸುವ ಹುಡುಗ ಹುಡುಗಿಯರು ಮನೆಯ ನೈಋತ್ಯ ಭಾಗದಲ್ಲಿ ಕೋಣೆ ಇರದಂತೆ ಎಚ್ಚರ ವಹಿಸಬೇಕು. ಹಾಗೆ ಮಾಡುವುದರಿಂದ ಅವರ ಮದುವೆಗೆ ದೊಡ್ಡ ಅಡಚಣೆಯನ್ನುಂಟು ಮಾಡುತ್ತದೆ. 

ಅಲ್ಲದೆ ದಕ್ಷಿಣ ದಿಕ್ಕಿನಲ್ಲಿ ತಲೆ ಹಾಕಿ  ಮಲಗುವ ಮೂಲಕ ಸಹ ಮದುವೆಯನ್ನು ವಿಳಂಬಗೊಳಿಸುತ್ತದೆ. ಮದುವೆಯ ಹುಡುಗ ಹುಡುಗಿಯರು ಗಾಳಿಯಾಡುವ ಕೋಣೆಗಳನ್ನು ಹೊಂದಿರಬೇಕು, ಆದರೆ ಅವುಗಳಲ್ಲಿ ಎಲ್ಲಾ ವಸ್ತುಗಳನ್ನು ತುಂಬಿಸಿ ಇಡಬಾರದು. ಅಲ್ಲದೆ ಗೋಡೆಗಳ ಬಣ್ಣವು ಗಾಢ ಬಣ್ಣಗಳಾಗಬಾರದು.

Latest Videos

click me!