ಪುತ್ತೂರು: ಕಾಳಿಮಾತೆಯ ವಿಶೇಷ ಮೆರುಗಿನಲ್ಲಿ ಡಾ.ನಿರುಪಮಾ ರೈ

First Published | Oct 20, 2023, 11:29 PM IST

ಪುತ್ತೂರು(ಅ.20):  ನವರಾತ್ರಿಯ ನವದುರ್ಗೆಯರ ಆರಾಧನೆಯ ಸಡಗರದ ಹಿನ್ನೆಲೆಯಲ್ಲಿ ನಾಳೆ(ಶನಿವಾರ) ಶ್ರೀ ಕಾಳಿಮಾತೆಯ ಪೂಜೆಯ ದಿನವಾಗಿದೆ. ಈ ಸಂದರ್ಭದಲ್ಲಿ ವೈದ್ಯೆ ಡಾ.ನಿರುಪಮಾ ಎಸ್‌. ರೈ ಅವರು ಕಾಳಿಮಾತೆಯ ವಿಶೇಷ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದಾರೆ.
 

ಈ ಸಂದರ್ಭಕ್ಕೆ ಪೂರಕ ಎಂಬಂತೆ ಪುತ್ತೂರು ಸಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯೆ ಡಾ.ನಿರುಪಮಾ ಎಸ್‌. ರೈ ಅವರು ಈ ನವದುರ್ಗೆಯರಲ್ಲಿ ಏಳನೇ ದಿನ ಪೂಜೆಗೊಳ್ಳುವ ಕಾಳಿಮಾತೆಯ ವಿಶೇಷ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಡಾ.ನಿರುಪಮಾ ಎಸ್‌. ರೈ ಅವರ ಶ್ರೀಕಾಳಿಮಾತೆಯ ಅಲಂಕಾರದ ವಿವಿಧ ಪ್ರಕಾರಗಳನ್ನು ಪುತ್ತೂರಿನ ಚೇತನ್‌ ಗಾಣಿಗಾ, ವಿನೋದ್‌ ಶಾಂತಿಗೋಡು, ಯಕ್ಷಿತ್‌ ಬಾರಿಕೆ ಇವರ ಬಳಗ ಕ್ಯಾಮರಾದಲ್ಲಿ ಸೆರೆ ಹಿಡಿದಿದೆ.

Tap to resize

ಪುತ್ತೂರಿನ ಸ್ವಾತಿ ಬ್ಯೂಟಿಪಾರ್ಲರ್‌ನ ಸ್ವಾತಿ ಮತ್ತು ವರ್ಷಾ ಅವರು ಮೇಕಪ್‌ನಲ್ಲಿ ಕಾಳಿಮಾತೆಯ ಮೆರುಗು ನೀಡಿದ್ದಾರೆ. ಡಾ.ನಿರುಪಮಾ ಎಸ್‌. ರೈ ಅವರು ಕಳೆದ ಬಾರಿ ಶ್ರೀದುರ್ಗಾ ಮಾತೆಯ ವಿಶೇಷ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದರು. 

ಡಾ.ನಿರುಪಮಾ ಎಸ್‌. ರೈ. ಅವರ ನವದುರ್ಗೆಯರ ಅಲಂಕಾರ ಇನ್ಟಾಗ್ರಾಂ, ಫೇಸ್‌ಬುಕ್‌ ಮುಂತಾದ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

Latest Videos

click me!