ಗೋಧಿ ಹಿಟ್ಟಿನ ಈ ಪರಿಹಾರ ಸೂತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ!!

First Published | Sep 24, 2021, 7:49 PM IST

 ಹಣ, ಪ್ರಗತಿ ಎನ್ನುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಆದರೆ, ಕೆಲವರ ಕೈಯಲ್ಲಿ ಮಾತ್ರ ಹಣ ಉಳಿಯುವುದೇ ಇಲ್ಲ. ಎಷ್ಟೇ ದುಡಿದರೂ, ಎಲ್ಲಾ ಹಣ ಖರ್ಚಾಗಿಯೇ ಹೋಗುತ್ತದೆ. ಹೀಗಾದಾಗ ಇಂತಹ ಪರಿಸ್ಥಿತಿಯಲ್ಲಿ, ಹಣದ ಕೊರತೆಯಿಂದಾಗಿ, ಮನೆಯಲ್ಲಿ ಜಗಳಗಳು ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಂತೋಷ ಮತ್ತು ಶಾಂತಿ ಮಾಯವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರವಿದೆ. 

ಮನೆಯಲ್ಲಿನ ಹಣದ ಸಮಸ್ಯೆ ತಡೆಯಲು, ಕೆಲವು ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ಸೂಚಿಸಲಾಗಿದೆ. ಈ ಪರಿಹಾರ ಕಾರ್ಯಗಳನ್ನು ಕೈಗೊಂಡರೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅವು ಯಾವುದು? ಅದರೈಂದ ಲಕ್ಷ್ಮೀಯನ್ನು ಹೇಗೆ ಒಲಿಸಿಕೊಳ್ಳುವುದು ಇಲ್ಲಿದೆ ಸಂಪೂರ್ಣ ಮಾಹಿತಿ. 

 ಈ ವಿಷಯಗಳನ್ನು ಮೊದಲು ಖಚಿತಪಡಿಸಿಕೊಳ್ಳಿ :
 ಮನೆಯಲ್ಲಿ ಗೋಧಿ ಹಿಟ್ಟು ಇಡುವ ಡಬ್ಬದಲ್ಲಿ 5 ತುಳಸಿ ಎಲೆಗಳು ಮತ್ತು 2 ಕೇಸರಿ ಬೀಜಗಳನ್ನು ಹಾಕಿಡಿ. ಹೀಗೆ ಮಾಡುವುದರಿಂದ, ಬಹು ಬೇಗ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳು ಸಿಗುತ್ತವೆ.  

Tap to resize

ಗುರುವಾರ ತಿಂಡಿಗೆ ಸ್ವಲ್ಪ ಅರಿಶಿನ ಸೇರಿಸಿ ಹಸುವಿಗೆ ಆಹಾರವಾಗಿ ನೀಡುವುದರಿಂದ ಆದಾಯ ಹೆಚ್ಚಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೆ, ಈ ಪರಿಹಾರವು ಮನೆಯ ಋಣಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ. ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. 

ಶನಿವಾರ ಗೋಧಿಯನ್ನು ರುಬ್ಬಿಸುವ ಮೂಲಕ ಮನೆಯಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆದಾಯದ ಮೂಲ ಹೆಚ್ಚಾದಾಗ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಇದರಿಂದ ಯಾವುದೇ ಕೆಲಸಗಳನ್ನು ಮಾಡಿದರೂ ಅದರಿಂದ ಲಾಭ ಪಡೆದುಕೊಳ್ಳಬಹುದು. 

ಇದರ ಹೊರತಾಗಿ, ಸಂಬಂಧದಲ್ಲಿ ಶನಿವಾರ ಗೋಧಿ ರುಬ್ಬಿದರೆ ಮಾಧುರ್ಯ ಉಳಿಯುತ್ತದೆ. ಗೋಧಿಯನ್ನು ರುಬ್ಬುವಾಗ, ಅದಕ್ಕೆ ಸ್ವಲ್ಪ ಕಡಲೆಯನ್ನು ಸೇರಿಸುವುದನ್ನು ಮರೆಯಬೇಡಿ. ಇದನ್ನು ಮಾಡುವುದರಿಂದ, ಮನೆಯಲ್ಲಿ ಹಣ ಉಳಿಯಲು ಆರಂಭವಾಗುತ್ತದೆ.

ಅದೃಷ್ಟ (Luck) ಪಡೆಯಲು, ಹಿಟ್ಟಿಗೆ ಸ್ವಲ್ಪ ಪ್ರಮಾಣದ ಸಕ್ಕರೆ  ಸೇರಿಸಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ಮಾಡುವುದರಿಂದ, ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರವಾಗುತ್ತದೆ. ಇದಲ್ಲದೇ, ಶನಿ (Saturn), ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳಿಂದಲೂ ಮುಕ್ತಿ ಸಿಗುತ್ತದೆ.
 

Latest Videos

click me!