ತುಳಸಿ ವಿವಾಹದಂದು ಸೂರ್ಯಾಸ್ತದ ಬಳಿಕ ಈ ಕೆಲಸ ಮಾಡಿದ್ರೆ ದುಡ್ಡಿನ ಹೊಳೆಯೇ ಹರಿಯುತ್ತೆ!

Published : Nov 22, 2023, 04:30 PM IST

ನವಂಬರ್ 24 ಶುಕ್ರವಾರದಂದು ತುಳಸಿ ವಿವಾಹ ಅಥವಾ ತುಳಸಿ ಪೂಜೆಯನ್ನು ಮಾಡಲಾಗುತ್ತಿದೆ. ಈ ದಿನದಂದು ಸಂಜೆಯ ವೇಳೆ ಕೆಲವೊಂದು ಕೆಲಸಗಳನ್ನು ಮಾಡೋದರಿಂದ ಶುಭ ಸಂಯೋಗ ಉಂಟಾಗುತ್ತೆ ಎಂದು ನಂಬಲಾಗಿದೆ.   

PREV
17
ತುಳಸಿ ವಿವಾಹದಂದು ಸೂರ್ಯಾಸ್ತದ ಬಳಿಕ ಈ ಕೆಲಸ ಮಾಡಿದ್ರೆ  ದುಡ್ಡಿನ ಹೊಳೆಯೇ ಹರಿಯುತ್ತೆ!

ಹಿಂದೂ ಧರ್ಮದಲ್ಲಿ (Hindu Dharm) ತುಳಸಿ ಮದುವೆ ಅಥವಾ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ, ತುಳಸಿ ದೇವಿ ಮತ್ತು ವಿಷ್ಣುವಿನ ರೂಪವಾದ ಶಾಲಿಗ್ರಾಮ ಮದುವೆಯಾಗುತ್ತಾರೆ. ನಂಬಿಕೆಗಳ ಪ್ರಕಾರ, ಈ ದಿನದಂದು ವಿಷ್ಣು ತನ್ನ ಯೋಗ ನಿದ್ರಾದಿಂದ ಎಚ್ಚರಗೊಳ್ಳುತ್ತಾನೆ.  ಧರ್ಮಗ್ರಂಥಗಳ ಪ್ರಕಾರ, ಈ ದಿನ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದರಿಂದ ಶುಭವಾಗುತ್ತದೆ.
 

27

ತುಳಸಿ ವಿವಾಹ 2023  
ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿ ದಿನದಂದು ತುಳಸಿ ವಿವಾಹವನ್ನು (Tulsi Vivah) ನಡೆಸಲಾಗುತ್ತದೆ. ಈ ವರ್ಷ, ತುಳಸಿ ವಿವಾಹವು ನವೆಂಬರ್ 24 ರ ಶುಕ್ರವಾರ ನಡೆಯಲಿದೆ. ಈ ಶುಭ ಸಂಯೋಗದಿಂದ, ಸಂಪತ್ತು (Wealth) ಮತ್ತು ಸಮೃದ್ಧಿ (Prosperity) ಹೆಚ್ಚಲಿದೆ. ಅದಕ್ಕಾಗಿ ನೀವು ಏನು ಮಾಡಬೇಕು ತಿಳಿಯಿರಿ. 

37

ತುಪ್ಪದ ದೀಪ ಬೆಳಗಿಸಿ 
ತುಳಸಿ ಪೂಜೆಯ ಸಂಜೆ, ಸೂರ್ಯಾಸ್ತದ ನಂತರ, ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು (ghee diya) ಬೆಳಗಿಸಬೇಕು. ಇದರಿಂದ ಶುಭವಾಗುತ್ತೆ ಎಂದು ನಂಬಲಾಗಿದೆ. ಸಮೃದ್ಧಿಯೂ ಹೆಚ್ಚಲಿದೆ.

47

ತುಳಸಿ ಮಂತ್ರ ಪಠಣ 
ತುಳಸಿ ಪೂಜೆಯ ದಿನದಂದು, ಸಂಜೆ, ಸೂರ್ಯಾಸ್ತದ (after sunset) ನಂತರ, ತುಳಸಿ ಮಂತ್ರಗಳನ್ನು ಪಠಿಸಬೇಕು ಎಂದು ತಜ್ಞರು ಹೇಳುತ್ತಾರೆ. ತುಳಸಿಯ ಎಂಟು ಹೆಸರುಗಳನ್ನು, ಮಂತ್ರಗಳನ್ನು ಪಠಿಸೋದರಿಂದ ಜೀವನದಲ್ಲಿ ಶುಭವಾಗುತ್ತೆ. 

57

ಸಂತೋಷ ಮತ್ತು ಸಮೃದ್ಧಿ 
ತುಳಸಿ ವಿವಾಹದ ದಿನದಂದು, ತುಳಸಿ ನಮಸ್ತಕ್ ಪಠಿಸುವುದು ಸಂತೋಷ (happiness) ಮತ್ತು ಶಾಂತಿಯನ್ನು ತರುತ್ತದೆ. ಅಷ್ಟೇ ಅಲ್ಲ ಇದರಿಂದ ಸಮೃದ್ಧಿಯೂ ಹೆಚ್ಚುತ್ತದೆ ಎಂದು ತಿಳಿದು ಬಂದಿದೆ. 

67

ಪೂಜೆ ಮಾಡಿ 
ಈ ದಿನ, ತುಳಸಿ ಮತ್ತು ಶಾಲಿಗ್ರಾಮ ಮದುವೆಯಾಗುತ್ತಾರೆ ಎನ್ನುವ ನಂಬಿಕೆ ಇದೆ. ನಿಮಗೆ ಮದುವೆ ಮಾಡಿಸಲು ಸಾಧ್ಯವಾಗದಿದ್ದರೆ, ನೀವು ತುಳಸಿ ಮಾತೆಯ ಸಾಮಾನ್ಯ ಪೂಜೆಯನ್ನು ಸಹ ಮಾಡಬಹುದು.
 

77

ತುಳಸಿಯ ಆರತಿ 
ತುಳಸಿ ಪೂಜೆಯ ದಿನದಂದು, ಮಾತಾ ತುಳಸಿಯನ್ನು ಪೂಜಿಸಿದ ನಂತರ, ಆರತಿಯನ್ನು ಸಹ ಮಾಡಬೇಕು. ಆರತಿ ಮಾಡದೇ ಇದ್ದರೆ ಅಂತಹ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. 
 

Read more Photos on
click me!

Recommended Stories