ಚಾಣಕ್ಯ ನೀತಿ : ಈ ಮೂರು ಜನರನ್ನು ನಿದ್ರೆಯಿಂದ ಎಚ್ಚರಿಸಿದ್ರೆ ನಿಮಗೆ ತೊಂದರೆ ತಪ್ಪಿದ್ದಲ್ಲ

First Published | Dec 26, 2023, 5:02 PM IST

ಆಚಾರ್ಯ ಚಾಣಕ್ಯನು ಈ ಮೂರು ರೀತಿಯ ಜನರು ನಿದ್ರೆಯಿಂದ ಎಂದಿಗೂ ಎಚ್ಚರಗೊಳ್ಳಬಾರದು ಎಂದು ಹೇಳುತ್ತಾರೆ. ನೀವು ಈ ಮೂವರನ್ನು ನಿದ್ರೆಯಿಂದ ಎಬ್ಬಿಸಿದರೆ, ಅದರಿಂದ ನಿಮಗೆ ಸಮಸ್ಯೆ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ. ಆ ಜನರು ಯಾರು ಮತ್ತು ಅವರನ್ನು ಯಾಕೆ ಎಬ್ಬಿಸಬಾರದು ಅನ್ನೋದನ್ನು ನೋಡೋಣ. 
 

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಯಾವ ವಿಷಯಗಳನ್ನು ಮಾಡಬೇಕು. ಯಾವ ವಿಷಗಳನ್ನು ಮಾಡಬಾರದು ಅನ್ನೊದನ್ನು ಸಹ ತಿಳಿಸಿದ್ದಾರೆ. ಇವರ ನೀತಿ ಹೇಳುವಂತೆ ನಿದ್ರೆ ಮಾಡುತ್ತಿರುವ ಈ ಮೂರು ಜನರನ್ನು ಯಾವತ್ತೂ ಎಬ್ಬಿಸಲು ಹೋಗಬಾರದಂತೆ. ಇದರಿಂದ ನೀವು ಸಮಸ್ಯೆಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ. 
 

ಹಾಗಿದ್ರೆ ಯಾರು ನಿದ್ರೆ ಮಾಡುತ್ತಿದ್ದರೆ, ನೀವು ಎಬ್ಬಿಸಲು ಹೋಗಬಾರದು ಮತ್ತು ಯಾಕೆ ಎಬ್ಬಿಸಬಾರದು. ಎಬ್ಬಿಸಿದರೆ ಏನಾಗುತ್ತೆ ಅನ್ನೋದನ್ನು ನೋಡೋಣ. ಆಚಾರ್ಯ ಚಾಣಕ್ಯ ಹೇಳುವಂತೆ ರಾಜ, ಮಗು ಮತ್ತು ಮೂರ್ಖರನ್ನು ಯಾವತ್ತೂ ಎಚ್ಚರಿಸಬಾರದು. 
 

Tap to resize

ಅಪ್ಪಿ ತಪ್ಪಿಯೂ ದೇಶದ ರಾಜ ಅಥವಾ ದೇಶದ ಪ್ರಮುಖ ವ್ಯಕ್ತಿ ಮಲಗಿದ್ದರೆ, ಅಂತವರನ್ನು ಎಬ್ಬಿಸಲು ಹೋಗಲೇಬೇಡಿ ಎಂದಿದ್ದಾರೆ.  ಯಾಕಂದ್ರೆ ರಾಜನನ್ನು ತಪ್ಪಾದ ಸಮಯದಲ್ಲಿ ಎಬ್ಬಿಸಲು ಹೋದ್ರೆ ರಾಜ (King) ಕೋಪಗೊಳ್ಳುತ್ತಾರೆ. ಇದರಿಂದ ಆತ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. 
 

ಅಷ್ಟೇ ಅಲ್ಲ ಮಲಗಿರುವ ಮಕ್ಕಳನ್ನು (sleeping baby) ಸಹ ಯಾವತ್ತೂ ಎಬ್ಬಿಸಲು ಹೋಗಲೇಬಾರದು. ಯಾಕಂದ್ರೆ ಸಣ್ಣ ಮಕ್ಕಳಿಗೆ ನಿದ್ರೆ ಪೂರ್ತಿಯಾಗದೇ ಇದ್ದರೆ ಅವರು ಹಠ ಮಾಡೋದು ಜಾಸ್ತಿ. ಒಂದು ವೇಳೆ ನೀವು ಮಲಗಿರುವ ಮಗುವನ್ನು ಎಬ್ಬಿಸಿದ್ರೆ ಮಗು ಅತ್ತು, ರಂಪಾಟ ಮಾಡುತ್ತೆ, ಅವರನ್ನು ಸಂಭಾಳಿಸೋದೆ ಕಷ್ಟ ಆಗುತ್ತೆ. 
 

ಮತ್ತೊಂದು ವಿಷ್ಯ ಏನಂದ್ರೆ ಮನುಷ್ಯರು ತಪ್ಪಿಯೂ ಮಲಗಿರುವ ಮೂರ್ಖ ಪ್ರಾಣಿಯನ್ನು ಎಬ್ಬಿಸಲು ಹೋಗಲೇಬಾರದು. ಮೂರ್ಖರನ್ನು ಎಬ್ಬಿಸಿದ ಕೂಡಲೇ ಅವರಿಗೆ ಕೋಪ ಬರುತ್ತೆ, ಯೋಚನೆ ಮಾಡದೇ ನಿಮ್ಮ ಜೊತೆ ಜಗಳಕ್ಕೆ ಇಳಿಯುವ ಸಾಧ್ಯತೆ ಇದೆ. 

ಹಾಗಾಗಿ ಈ ಮೂರು ಜನರು ನಿದ್ರಿಸುತ್ತಿರುವಾಗ ಅವರನ್ನು ಎಚ್ಚರಿಸುವ (wakeup) ಬಗ್ಗೆ ಯೋಚನೆ ಮಾಡಲೇಬೇಡಿ. ಅವರಾಗಿಯೇ ಎಚ್ಚರಗೊಂಡ ಬಳಿಕ ನಿಮ್ಮ ಕೆಲಸ ಮಾಡಿಸಿ, ಇಲ್ಲವಾದರೆ ನೀವು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
 

Latest Videos

click me!