ಏನೇ ಆಗ್ಲಿ ಈ 5 ರಾಶಿಯ ಮುಂದೆ ಮಾತ್ರ ಸುಳ್ಳು ಹೇಳ್ಬೇಡಿ… ಸಿಕ್ಕಾಕಿಕೊಳ್ಳೋದು ಗ್ಯಾರಂಟಿ

First Published | Sep 11, 2023, 4:33 PM IST

ಕೆಲವು ಜನರು ಸುಳ್ಳನ್ನು ತುಂಬಾ ಲೀಲಾಜಾಲವಾಗಿ ಹೇಳ್ತಾರೆ, ಅವರು ಅಂದು ಕೊಳ್ತಾರೆ, ನಾನು ಸುಳ್ಳು ಹೇಳಿದ್ರೆ ಯಾರಿಗೂ ಗೊತ್ತಾಗಲ್ಲ ಅಂತ. ಆದರೆ ಈ 5 ರಾಶಿಯ ಜನರ ಮುಂದೆ ಮಾತ್ರ ಸುಳ್ಳು ಹೇಳ್ಬೇಡಿ. ಅವರು ಬೇಗನೆ ಕಂಡು ಹಿಡಿಯುತ್ತಾರೆ. 
 

ಕೆಲವರು ಸುಳ್ಳು ಹೇಳುವುದು ತುಂಬಾ ಸುಲಭವಾದ ಕೆಲಸ. ಯಾರ ಮುಂದೆ ಬೇಕಾದರೂ, ಯಾವ ಸಂದರ್ಭದಲ್ಲೂ ಅವರಿಂದ ಸುಳ್ಳು ಬಂದು ಬಿಡುತ್ತೆ. ಅವರು ಹೇಳಿದ ಸುಳ್ಳನ್ನು ಎಲ್ಲಾ ಜನರು ನಂಬಿರಬಹುದು. ಆದರೆ, ಈ 5 ರಾಶಿಯ (5 zodiac signs) ಮುಂದೆ ಮಾತ್ರ ಯಾವ ಸುಳ್ಳು, ಪೊಳ್ಳು ನಡೆಯಲ್ಲ, ಯಾಕಂದ್ರೆ, ಈ ರಾಶಿಯವರು ಒಬ್ಬ ವ್ಯಕ್ತಿಯ ಮಾತಿನಿಂದಲೇ ಆತ ಸುಳ್ಳು ಹೇಳುತ್ತಿದ್ದಾನೆಯೇ? ಅಥವಾ ನಿಜ ಹೇಳುತ್ತಿದ್ದಾನೆಯೇ ಅನ್ನೋದನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಆ ರಾಶಿ ಯಾವುದು ತಿಳಿಯೋಣ. 

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ಶಾರ್ಪ್ ಆಗಿರ್ತಾರೆ , ಜೊತೆಗೆ ಇವರಲ್ಲಿ ಗ್ರಾಸ್ಪಿಂಗ್ ಪವರ್ ಸಹ ಹೆಚ್ಚಾಗಿರುತ್ತೆ.. ಅವರು ಜನರ ಭಾವನೆಗಳು ಮತ್ತು ಉದ್ದೇಶಗಳನ್ನು ಆ ವ್ಯಕ್ತಿಯನ್ನು ನೋಡುವ ಮೂಲಕವೇ ಅರ್ಥಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ. ಇದರಿಂದಾಗಿ ಇತರರು ಅವರನ್ನು ಮೋಸ ಮಾಡೋದು ಕಷ್ಟ. ಅಪ್ರಮಾಣಿಕ ವ್ಯಕ್ತಿಯ ಚಲನವಲನವನ್ನು ಅವರು ಬೇಗ ಕಂಡುಹಿಡಿಯುತ್ತಾರೆ. ಬೇಗನೆ ಯಾರ ಮಾತನ್ನೂ ನಂಬೋದಿಲ್ಲ. 

Tap to resize

ಮೀನ ರಾಶಿ (Pisces)
ಮೀನ ರಾಶಿಯವರು ಸೂಕ್ಷ್ಮ ವ್ಯಕ್ತಿಗಳು. ಭಾವನಾತ್ಮಕ ಮಟ್ಟದಲ್ಲಿ ಇತರರೊಂದಿಗೆ ಸಂಪರ್ಕ ಸಾಧಿಸುವ ಸಹಜ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಯಾರಾದ್ರೂ ಸುಳ್ಳು ಹೇಳಿದ್ರೆ ಅವರಿಗೆ ಬೇಗನೆ ತಿಳಿಯುತ್ತೆ. ಈ ರಾಶಿಯವರು ಬಾಡಿ ಲಾಂಗ್ವೇಜ್ (Body Language),  ಧ್ವನಿ ಮತ್ತು ಮುಖದಲ್ಲಿನ ಬದಲಾವಣೆ ಗಮನಿಸುವ ಮೂಲಕ ಸುಳ್ಳನ್ನು ಅರ್ಥಮಾಡಿಕೊಳ್ಳುತ್ತಾರೆ. 

ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ಬೇಗನೆ ಸುಳ್ಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರು ತುಂಬಾನೆ ಅವಲೋಕನ ಮಾಡ್ತಾರೆ ಮತ್ತು ಒಬ್ಬರು ಹೇಳುವ ಕಥೆಯಲ್ಲಿ ಏನೆಲ್ಲಾ ಸರಿ ಇಲ್ಲ ಅನ್ನೋದನ್ನು ತಿಳಿದುಕೊಳ್ಳುತ್ತಾರೆ. ಈ ರಾಶಿಯವರು ಮಾಹಿತಿಯನ್ನು ಒಟ್ಟುಗೂಡಿಸುವಲ್ಲಿ ನಿಪುಣರು ಮತ್ತು ಸುಳ್ಳುಗಳ ಸಂಕೀರ್ಣ ಜಾಲಗಳನ್ನು ಬಿಚ್ಚಿಡಬಹುದು. ಅವರು ಸತ್ಯಗಳು ಮತ್ತು ಪುರಾವೆಗಳನ್ನು ಪರಿಶೀಲಿಸುತ್ತಾರೆ, ಆದ್ದರಿಂದ ಈ ರಾಶಿಯವರ ಮುಂದೆ ಸುಳ್ಳು ಹೇಳಲೇಬೇಡಿ.

ಮಕರ ರಾಶಿ (Capricorn)
ಮಕರ ರಾಶಿಯವರು ಜವಾಬ್ದಾರಿ ಮತ್ತು ಶಿಸ್ತಿನ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಲಭವಾಗಿ ಮೋಸಗೊಳಿಸಲು ಸಾಧ್ಯವೇ ಇಲ್ಲ. ಅವರು ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಗೌರವಿಸುತ್ತಾರೆ, ಮತ್ತು ಅವರು ಇತರರಿಂದ ಅದನ್ನೇ ನಿರೀಕ್ಷಿಸುತ್ತಾರೆ. ಅವರು ಸ್ಪಷ್ಟ ಮತ್ತು ತರ್ಕಬದ್ಧ ಮನಸ್ಥಿತಿಯೊಂದಿಗೆ ಸಂದರ್ಭಗಳನ್ನು ನಿರ್ಣಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಆದ್ದರಿಂದ ಅವರು ಸುಲಭವಾಗಿ ಸುಳ್ಳು ಮತ್ತು ಕುತಂತ್ರವನ್ನು ಅರ್ಥಮಾಡಿಕೊಳ್ಳುತ್ತಾರೆ. 

ತುಲಾ ರಾಶಿ (Libra)
ತುಲಾ ರಾಶಿಯವರು ಯಾವಾಗಲೂ ನ್ಯಾಯದ ಪರವಾಗಿರ್ತಾರೆ. ಅವರು ಪರಿಸ್ಥಿತಿಯ ಎರಡೂ ಬದಿಗಳನ್ನು ನೋಡುವ ಪ್ರತಿಭೆಯನ್ನು ಹೊಂದಿದ್ದಾರೆ, ಆದ್ದರಿಂದ ಅವರು ಜನರ ಕಥೆಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಅನ್ನೋದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.  ಇವರನ್ನು ಮೋಸ ಮಾಡುವ ಕೆಲಸಕ್ಕೆ ಮಾತ್ರ ಹೋಗಲೇಬೇಡಿ. 

Latest Videos

click me!