ವಾಮಾಚಾರ: ರಸ್ತೆಯಲ್ಲಿ ಈ ವಸ್ತು ಕಂಡ್ರೆ ದೂರ ಓಡಿ, ಮುಟ್ಟೋ ಸಾಹಸ ಮಾಡಿದ್ರೆ ಜೀವನ ನರಕ!

First Published | Jul 2, 2024, 7:09 PM IST

ರಸ್ತೆಯಲ್ಲಿ ನಡೆಯುವಾಗ, ಅನೇಕ ಬಾರಿ ಕೆಲವೊಂದು ವಸ್ತುಗಳು ಸುತ್ತಲೂ ಬಿದ್ದಿರುವುದನ್ನು ಕಾಣಬಹುದು, ಅವುಗಳನ್ನು ತುಂಬಾ ಅಶುಭ ಅಥವಾ ಅಪಶಕುನ ಅಂತಾರೆ.  ಈ ವಸ್ತುಗಳನ್ನು ದಾಟೋದು, ಮುಟ್ಟೋದು ಮಾಡಿದ್ರೆ ಜೀವನ ನರಕ ಆಗುತ್ತೆ. 
 

ರಸ್ತೆಯಲ್ಲಿ ನಡೆಯುವಾಗ ಕೆಲವು ವಸ್ತುಗಳನ್ನು ದಾಟಬಾರದು, ಎತ್ತಬಾರದು ಅಥವಾ ಮುಟ್ಟಬಾರದು ಎಂದು ನಮ್ಮ ತಾತ ಮುತ್ತಜ್ಜನ ಕಾಲದಿಂದಲೂ ಹೇಳ್ಕೊಂಡು ಬಂದಿದ್ದಾರೆ. ಈ ವಸ್ತುಗಳು ಹಾನಿಕಾರಕ ಮತ್ತು ಅಶುಭದ ಸಂಕೇತ. ಅಷ್ಟೇ ಅಲ್ಲ ಹೆಚ್ಚಿನ ವಸ್ತುಗಳು ವಾಮಾಚಾರ  (black magic)ತಂತ್ರಗಳಿಗೆ ಸಂಬಂಧಿಸಿವೆ, ಇದು ಸಂತೋಷದ ಜೀವನದಲ್ಲಿ ಸಮಸ್ಯೆಗಳನ್ನು ತರಬಹುದು ಎಚ್ಚರ. 

ನಿಂಬೆ ಮೆಣಸು, ಕೂದಲಿನ ರಾಶಿ ಹೀಗೆ ಕೆಲವೊಂದು ವಿಚಿತ್ರವಾದ ವಸ್ತುಗಳು ರಸ್ತೆ ಮೇಲೆ ಬಿದ್ದಿರೋದನ್ನ ನಾವು ನೋಡ್ತೀವಿ. ಅವುಗಳನ್ನು ನೋಡಿದರೆ, ದೂರ ಇರಿ. ಈ ವಸ್ತುಗಳು ನಕಾರಾತ್ಮಕ ಶಕ್ತಿಗಳನ್ನು (Negative Energy) ಹೊಂದಿರುತ್ತವೆ. ಈ ವಸ್ತುಗಳೊಂದಿಗೆ ಸಂಪರ್ಕಕ್ಕೆ ಬರೋದರಿಂದ ನಿಮ್ಮ ಪರಿಶುದ್ಧತೆಯೇ ನಾಶವಾಗುತ್ತದೆ. ಅಷ್ಟೇ ಅಲ್ಲ ಜೀವನದಲ್ಲಿ ಸಮಸ್ಯೆಗಳು ತಾಂಡವವಾಡಬಹುದು. ಹಾಗಿದ್ರೆ ಅಂತಹ ವಸ್ತುಗಳು ಯಾವುವು ಅನ್ನೋದನ್ನ ತಿಳಿಯೋಣ. 

Latest Videos


ನಿಂಬೆ-ಮೆಣಸು (Mirchi and Lemon)
ಅನೇಕ ಬಾರಿ ನಿಂಬೆ ಮೆಣಸು ರಸ್ತೆಯ ಮೇಲೆ ಬಿದ್ದಿರುವುದನ್ನು ನೋಡ್ತೀವಿ. ರಸ್ತೆಯಲ್ಲಿ ಬಿದ್ದಿರುವ ನಿಂಬೆ ಮೆಣಸಿನ ಮೇಲೆ ತಪ್ಪಿಯೂ ಕಾಲಿಡಬಾರದು ಅಥವಾ ಅವುಗಳನ್ನು ದಾಟಲೂ ಬಾರದು. ಈ ವಸ್ತುಗಳ ಮೇಲೆ ಕಾಲಿಟ್ರೆ ನಕಾರಾತ್ಮಕ ಶಕ್ತಿಯು ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀವನದಲ್ಲಿ ವಿವಿಧ ರೀತಿಯ ಅಶುಭ ಘಟನೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಜೊತೆಗೆ ಜೀವನದಲ್ಲಿ ನಡೆಯುವ ಪ್ರಗತಿ ಮತ್ತು ಉತ್ತಮ ಕಾರ್ಯಗಳಿಗೆ ಅಡ್ಡಿಯಾಗಲು ಪ್ರಾರಂಭಿಸುತ್ತವೆ.
 

ಕೂದಲಿನ ರಾಶಿ 
ರಸ್ತೆಯಲ್ಲಿ, ನಿಂಬೆ ಮೆಣಸಿನ ಜೊತೆಗೆ ಕೂದಲಿನ ಮುದ್ದೆ ನೋಡಿದ್ರೆ, ಅದು ಸಹ ವಾಮಾಚಾರದ ಚಿಹ್ನೆ ಅನ್ನೋದು ನೆನಪಿರಲಿ. ಅವುಗಳ ಮೇಲೆ ರಾಹುವಿನ ಪ್ರಭಾವವಿರುತ್ತೆ. ಆದ್ದರಿಂದ, ರಸ್ತೆ ಮೇಲೆ ಬಿದ್ದಿರುವ ಕೂದಲನ್ನು ಎಂದಿಗೂ ದಾಟಬಾರದು ಅಥವಾ ಮುಟ್ಟಬಾರದು. ಅಂತಹ ಕೂದಲಿನಿಂದ ದೂರ ಹೋಗಿ. ಒಂದು ವೇಳೆ ನೀವು ದಾಟಿದ್ರೆ ರಾಹುವಿನ ಕೋಪಕ್ಕೆ ಬಲಿಯಾಗಬಹುದು. ಇದರಿಂದ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗಬಹುದು.

ಸತ್ತ ಪ್ರಾಣಿಗಳು ಮತ್ತು ಮೂಳೆಗಳು (Dead animals and bones)
ಸತ್ತ ಪ್ರಾಣಿಯನ್ನು ರಸ್ತೆಯಲ್ಲಿ ನೋಡಿದ್ರೆ, ದಿಕ್ಕನ್ನು ಬದಲಾಯಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಸತ್ತ ಪ್ರಾಣಿಯನ್ನು ಮರೆತೂ ಕೂಡ ದಾಟಬೇಡಿ. ಅನೇಕ ಬಾರಿ ಚಾಲಕರ ನಿರ್ಲಕ್ಷ್ಯದಿಂದಾಗಿ, ಪ್ರಾಣಿಗಳು ಸಾವನ್ನಪ್ಪಿರುತ್ತೆ.  ನೀವು ಅವುಗಳನ್ನ ದಾಟಿದ್ರೆ ಇದು ಸಾವಿಗೆ ಕಾರಣವಾಗುತ್ತದೆ. ಆದ್ದರಿಂದ ನೀವು ದಾರಿಯಲ್ಲಿ ಅಂತಹ ಪ್ರಾಣಿ - ಪಕ್ಷಿಗಳನ್ನ ನೋಡಿದರೆ, ದೂರದಿಂದ ಹೋಗುವುದು ಉತ್ತಮ.

ಗೊಂಬೆ (Doll)
ಕೆಲವು ಕಡೆ ಬಟ್ಟೆಯಿಂದ ಮಾಡಿದ ಕಪ್ಪು ಗೊಂಬೆಗಳನ್ನು ನೀವು ನೋಡಬಹುದು. ಅವುಗಳನ್ನು ಸಹ ದಾಟುವಂತಹ ಸಹಾಸ ಮಾಡಬೇಡಿ. ಇವುಗಳನ್ನು ವಾಮಾಚರ ಮಾಡಿ ಇಡಲಾಗುತ್ತದೆ. ನೀವು ಅದನ್ನ ತುಳಿದರೆ ಅದರ ಕೆಟ್ಟ ಪರಿಣಾಮ ನಿಮ್ಮ ಮೇಲೆ ಉಂಟಾಗುವ ಸಾಧ್ಯತೆ ಇದೆ. 

ಕುಂಕುಮ 
ಕೆಲವೊಮ್ಮೆ ನಡೆದುಕೊಂಡು ಹೋಗುವಾಗ ಅಥವಾ ಮನೆಯ ಬಳಿ, ಕಾಗದದಲ್ಲಿ ಕಟ್ಟಿದ ಕುಂಕುಮ ಸಿಗೋದನ್ನು ನೀವು ನೋಡಿರಬಹುದು. ಇವುಗಳನ್ನು ಸಹ ನೀವು ಮುಟ್ಟಬಾರದು. ಕೆಲವರು ನಿಮ್ಮ ಮನೆಗೆ ಅಥವಾ ನಿಮ್ಮ ಮೇಲೆ ಮಾಟ ಮಾಡಿಸಿ ಕುಂಕುಮ ತಂದು ಹಾಕುವ ಸಾಧ್ಯತೆ ಇದೆ. ಹಾಗಾಗಿ ಅದನ್ನು ಮುಟ್ಟಲೇಬಾರದು. ಮುಟ್ಟಿದ್ರೆ ನಿಮ್ಮ ಜೀವನದಲ್ಲಿ ಎಲ್ಲವೂ ಕೆಟ್ಟದಾಗುತ್ತಲೇ ಹೋಗುತ್ತೆ

click me!