ಗಂಡ ಹೆಂಡತಿ ನಡುವೆ ಪ್ರೀತಿ ಹೆಚ್ಚಾಗಲು ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ

Published : May 10, 2024, 04:44 PM IST

ಮನೆಯಲ್ಲಿ ಜಗಳಗಳು ಕುಟುಂಬದ ಎಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ಪತಿ-ಪತ್ನಿಯ ಸಂಬಂಧದಲ್ಲಿ ಬಿಕ್ಕಟ್ಟನ್ನೂ ಉಂಟುಮಾಡುತ್ತದೆ.

PREV
14
ಗಂಡ ಹೆಂಡತಿ ನಡುವೆ ಪ್ರೀತಿ ಹೆಚ್ಚಾಗಲು ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ

ವಿವಾಹಿತ ದಂಪತಿಗಳು ಮಾಡಬಾರದ ಕೆಲವು ವಿಷಯಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇವುಗಳನ್ನು ಮಾಡುವುದರಿಂದ ಮನೆಯಲ್ಲಿ ಅಶಾಂತಿ ಉಂಟಾಗುವುದು. ಇದು ಕುಟುಂಬಕ್ಕೆ ಒಳ್ಳೆಯದಲ್ಲ. ಹಾಗಾಗಿ ವಿಶೇಷವಾಗಿ ಪತಿ-ಪತ್ನಿಯರು ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ.ಅವರ ನಡುವೆ ಪ್ರೀತಿ ಹೆಚ್ಚುತ್ತದೆ. 

24

ಮನೆಯಲ್ಲಿ ವಿಶೇಷವಾಗಿ ರಾತ್ರಿ ಊಟ ಮಾಡಿದ ನಂತರ ಖಾಲಿ ಪಾತ್ರೆಗಳನ್ನು ಇಡಬೇಡಿ ಎಂದು ಜ್ಯೋತಿಷ್ಯ ಹೇಳುತ್ತದೆ. ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಹೆಚ್ಚಿಸುತ್ತದೆ.

34

ಇದು ಮನೆಯ ಜನರ ನಡುವಿನ ಸಾಮರಸ್ಯವನ್ನು ಹಾಳುಮಾಡುತ್ತದೆ. ಕುಟುಂಬದ ಸದಸ್ಯರ ಸಂಬಂಧವನ್ನು ಹದಗೆಡಿಸುತ್ತದೆ, ಮನೆಯ ಸಂತೋಷ ಮತ್ತು ಶಾಂತಿಯನ್ನು ಕದಡುತ್ತದೆ. ಹಾಗಾಗಿ ತಿಂದ ನಂತರ ಪಾತ್ರೆಯನ್ನು ಸ್ವಚ್ಛಗೊಳಿಸಿ ವಿಶ್ರಾಂತಿ ತೆಗೆದುಕೊಳ್ಳಿ.

44

ಮನೆಯಲ್ಲಿ ಧೂಪ ದೀಪಗಳನ್ನು ಹಚ್ಚಿ. ಇದು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.. ನಿಮ್ಮ ಮನೆಗೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

Read more Photos on
click me!

Recommended Stories