ಹೊಸವರ್ಷ 2024 (New Year 2024), ಜನವರಿ 1ನೇ ತಾರೀಖು ಸೋಮವಾರದಂದು ಬರುತ್ತೆ. ಈ ದಿನ ಕೆಲವು ಕೆಲಸಗಳನ್ನು ತಪ್ಪಿ ಸಹ ಮಾಡಬಾರದು. ಒಂದು ವೇಳೆ ಈ ಕೆಲಸ ಮಾಡಿದ್ರೆ, ವರ್ಷ ಪೂರ್ತಿ ನೀವು ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. ಯಾವ ಕೆಲಸಗಳನ್ನು ಮಾಡಬಾರದು ನೋಡೋಣ.
ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ: ಹೊಸ ವರ್ಷದ ಆರಂಭದಲ್ಲಿ ಯಾರಿಂದಲೂ ಸಾಲ (loan) ತೆಗೆದುಕೊಳ್ಳಲು ಹೋಗಬೇಡಿ. ಈ ರೀತಿ ಮಾಡಿದ್ರೆ, ವರ್ಷ ಪೂರ್ತಿ ನೀವು ಸಾಲದಲ್ಲಿ ಮುಳುಗಿರುತ್ತೀರಿ. ಈ ಸಾಲವನ್ನು ಮುಗಿಸೋದಿಕ್ಕೂ ಸಾಧ್ಯವಾಗೋದಿಲ್ಲ.ಇದರಿಂದ ನಿಮ್ಮ ಟೆನ್ಶನ್ ಸಹ ಹೆಚ್ಚುತ್ತೆ.
ಹರಿತವಾದ ವಸ್ತುಗಳನ್ನು ಖರೀದಿಸಬೇಡಿ: 2024ರ ಜನವರಿ 1 ರಂದು ತಪ್ಪಿಯೂ ಹರಿತವಾದ ವಸ್ತುಗಳಾದ (sharp objects) ಚಾಕು, ಚೂರಿ, ಕತ್ತಿ, ಕತ್ತರಿ ಖರೀದಿಸಬೇಡಿ. ಇದರಿಂದ ನೆಗೆಟಿವಿಟಿ ಹೆಚ್ಚುತ್ತದೆ. ಇದರ ಪರಿಣಾಮ ನಿಮ್ಮ ಪೂರ್ತಿ ವರ್ಷದ ಮೇಲೆ ಬೀಳುವ ಸಾಧ್ಯತೆ ಇದೆ.
ಯಾರನ್ನೂ ಬರಿಗೈಯಲ್ಲಿ ಕಳುಹಿಸಬೇಡಿ: 2024ರ ಮೊದಲ ದಿನ ಯಾರಾದರೂ ಬಡವರು ಅಥವಾ ನಿರ್ಗತಿಕರು ನಿಮ್ಮ ಬಳಿ ಏನನ್ನಾದರು ಬೇಡಿಕೊಂಡು ಬಂದರೆ, ಅವರನ್ನು ಬರಿಗೈಯಲ್ಲಿ ಕಳುಹಿಸಲೇಬೇಡಿ. ನಿಮ್ಮ ಕೈಯಲಾದುದನ್ನು ಅವರಿಗೆ ನೀಡಿ ಸಹಕರಿಸಿ (healp others).
ಮಾಂಸಾಹಾರ ಮತ್ತು ಮದ್ಯಪಾನ ಮಾಡಬೇಡಿ: ಹೊಸ ವರ್ಷದ ಮೊದಲ ದಿನ ಹೆಚ್ಚಿನ ಜನರು ಪಾರ್ಟಿ ಮೂಡ್ ನಲ್ಲಿ ಇರುತ್ತಾರೆ. ಇದನ್ನು ಎಂಜಾಯ್ ಮಾಡಲು ಮಾಂಸಾಹಾರ ಮತ್ತು ಮದ್ಯಪಾನ ಮಾಡುತ್ತಾರೆ. ಆದರೆ ವರ್ಷದ ಮೊದಲ ದಿನ ಇದನ್ನು ತಿನ್ನೋದನ್ನು ಅವಾಯ್ಡ್ ಮಾಡಿ.
ಯಾರನ್ನೂ ನೋಯಿಸಬೇಡಿ: ಹೊಸ ವರ್ಷದ ಆರಂಭದ ದಿನ ಯಾರನ್ನೂ ನೋಯಿಸುವ (do not hurt anyone) ಕೆಲಸ ಮಾಡಬೇಡಿ. ನಿಮ್ಮ ಮಾತಿನಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳೋದು ಮುಖ್ಯ. ಹಳೆಯ ನೋವನ್ನು ಮರೆತು, ಹೊಸ ವರ್ಷ ಹೊಸತನ ತುಂಬಿರಲಿ.