ಸೂರ್ಯಾಸ್ತದ ನಂತರ ನಿಯಮಗಳು
ಸೂರ್ಯಾಸ್ತದ (sun set) ನಂತರ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ, ಈ ನಿಯಮಗಳನ್ನು ನೋಡಿಕೊಳ್ಳದಿದ್ದರೆ, ತಾಯಿ ಲಕ್ಷ್ಮಿ ಕೋಪದಿಂದ ವರ್ತಿಸಬಹುದು. ಲಕ್ಷ್ಮೀ ದೇವಿ ಕೋಪಗೊಂಡರೆ ಏನಾಗುತ್ತದೆ ಅನ್ನೋದು ನಿಮಗೂ ಗೊತ್ತಿದೆ ಆಲ್ವಾ? ಆದುದರಿಂದ ಈ ನಿಯಮಗಳನ್ನು ಪಾಲಿಸಿ...
ಉಗುರುಗಳು ಮತ್ತು ಕೂದಲನ್ನು ಕತ್ತರಿಸಬೇಡಿ :
ರಾತ್ರಿಯಲ್ಲಿ ಉಗುರುಗಳು (nails) ಮತ್ತು ಕೂದಲನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಮಾಡುವುದರಿಂದ, ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಆದುದರಿಂದ ಸಾಧ್ಯವಾದಷ್ಟು ಹಗಲು ಹೊತ್ತಿನಲ್ಲಿ ಉಗುರು, ಕೂದಲು ತೆಗೆಯಿರಿ.
ಅರಿಶಿನ ಮತ್ತು ಉಪ್ಪಿನ ದಾನ
ದಾನ ಮಾಡುವುದು ಒಳ್ಳೆಯ ಕೆಲಸವೇ ಸರಿ, ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವಾಗ ಹೆಚ್ಚು ಗಮನ ಹರಿಸೋದು ಮುಖ್ಯವಾಗಿದೆ. ಸೂರ್ಯಾಸ್ತದ ನಂತರ, ಯಾರೂ ಅರಿಶಿನ (turmeric) , ಉಪ್ಪು ಅಥವಾ ಹುಳಿ ವಸ್ತುಗಳನ್ನು ದಾನ ಮಾಡಬಾರದು. ಇದರಿಂದ ಆರ್ಥಿಕ ಸಮಸ್ಯೆ ಅನುಭವಿಸಬೇಕಾಗಿ ಬರುತ್ತದೆ.
ತಾಯಿ ಲಕ್ಷ್ಮಿಗೆ ಬಿಳಿ ಬಣ್ಣ ಇಷ್ಟ
ತಾಯಿ ಲಕ್ಷ್ಮಿ ಬಿಳಿ ಬಣ್ಣವನ್ನು ಪ್ರೀತಿಸುತ್ತಾಳೆ. ಆದ್ದರಿಂದ, ಪೂಜೆಯ ಸಮಯದಲ್ಲಿ, ತಾಯಿಗೆ ಬಿಳಿ ಆಹಾರದ ನೈವೇಧ್ಯವನ್ನು ಸಹ ನೀಡಲಾಗುತ್ತದೆ. ಜೊತೆಗೆ ಬಿಳಿ ವಸ್ತ್ರವನ್ನು ಸಹ ನೀಡಲಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ಬಿಳಿ ಬಣ್ಣವನ್ನು ಇಡಲು ಪ್ರಯತ್ನಿಸಿ.
ಮೊಸರಿನ ಬಳಕೆ
ರಾತ್ರಿಯಲ್ಲಿ ಹಾಲನ್ನು ಹೊರತುಪಡಿಸಿ ಮೊಸರು (curd)ಅಥವಾ ಬರ್ಫಿ ಮುಂತಾದ ಯಾವುದೇ ಬಿಳಿ ವಸ್ತುವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ಇದು ಲಕ್ಷ್ಮಿ ದೇವಿಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ.
ರಾತ್ರಿಯಲ್ಲಿ ಪೊರಕೆ ಹಾಕಬೇಡಿ
ಪೊರಕೆಯನ್ನು ಮಾ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಸೂರ್ಯಾಸ್ತದ ನಂತರ ಮನೆಯಲ್ಲಿ ಪೊರಕೆಯನ್ನು ಹಾಕಬಾರದು. ಇದರಿಂದ ತಾಯಿಗೆ ಕೋಪ ಬಂದು ಮನೆ ಬಿಟ್ಟು ಹೊರ ಹೋಗುತ್ತಾಳೆ ಎಂದು ನಂಬಲಾಗಿದೆ.
ಕಸವನ್ನು ಹೊರಗೆ ಎಸೆಯಬೇಡಿ
ಇದಲ್ಲದೆ, ಮನೆಯ ಕಸವನ್ನು (dust) ರಾತ್ರಿಯಲ್ಲಿ ಹೊರತೆಗೆಯಬಾರದು, ಹಾಗೆ ಮಾಡುವ ಮೂಲಕ, ತಾಯಿ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. ಆದುದರಿಂದ ತಪ್ಪಿಯೂ ಸಹ ಈ ಕೆಲಸವನ್ನು ಮಾಡಬೇಡಿ. ಕಸ ಇದ್ದರೆ ಅದನ್ನು ಮನೆಯ ಒಳಗೆಯೇ ಒಂದು ಕಡೆ ಇಟ್ಟು , ಮರುದಿನ ಅದನ್ನು ಬಿಸಾಕಿ.