ಶಾಲಾ ಸಿಬ್ಬಂದಿ ಜೊತೆ ಡಿಕೆಶಿ ಪುತ್ರಿ ಐಶ್ವರ್ಯ ಆಯುಧ ಪೂಜೆ, ಸರಳತೆಗೆ ಭಾರಿ ಮೆಚ್ಚುಗೆ!

First Published | Oct 11, 2024, 5:24 PM IST

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ತಮ್ಮ ಶಾಲೆಯಲ್ಲಿ ಆಯುಧ ಪೂಜೆ ಆಚರಿಸಿದ್ದಾರೆ. ಶಾಲಾ ಸಿಬ್ಬಂದಿಗಳ ಜೊತೆ ಆಯುಧ ಪೂಜೆ ನೆರವೇರಿಸಿದ ಐಶ್ವರ್ಯಗೆ ಜನ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ಸರಳತೆ ಜೊತೆಗೆ ಕರ್ನಾಟಕ ಸಂಸ್ಕೃತಿ ಸಾರಿ ಹೇಳುತ್ತಿರುವ ಐಶ್ವರ್ಯಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗಿದೆ.

ರಾಜ್ಯದೆಲ್ಲಡೆ ಆಯುಧ ಪೂಜೆಯನ್ನುಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಮಹಾರಾಜ ಯುಧುವೀರ್ ಆಯುಧ ಪೂಜೆ ನೇರವೇರಿಸಿದ್ದಾರೆ. ಇತ್ತ ಮನೆ, ಕಚೇರಿ, ಕಟ್ಟಡಗಳಲ್ಲೂ ಆಯುಧ ಪೂಜೆ ಆಚರಿಸಲಾಗಿದೆ. ಇತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಅದ್ಧೂರಿಯಾಗಿ ಆಯುಧ ಪೂಜೆ ಆಚರಿಸಿದ್ದಾರೆ. 

ಐಶ್ವರ್ಯ ಡಿಕೆಎಸ್ ಹೆಗ್ಡೆ ತಾವು ಮುನ್ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಆಯುಧ ಪೂಜೆ ಆಚರಿಸಿದ್ದಾರೆ. ಶಾಲಾ ಸಿಬ್ಬಂದಿಗಳ ಜೊತೆ ಆಯುಧ ಪೂಜೆ ನೆರವೇರಿಸಿದ್ದಾರೆ. ಅಚ್ಚುಕಟ್ಟಾಗಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಪೂಜೆ ನೆರವೇರಿಸಿದ್ದಾರೆ. ಚಾಮುಂಡೇಶ್ವರಿ ತಾಯಿ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಜೊತೆಗೆ ನವರಾತ್ರಿ ಹಬ್ಬದ ಸಂಪೂರ್ಣ ಕಳೆಗಟ್ಟುವಂತೆ ಅಲಂಕಾರ, ಪೂಜೆಗಳು ನಡೆದಿದೆ.

Tap to resize

ವಿದ್ಯಾರ್ಥಿಗಳನ್ನು ಪಿಕ್ ಅಪ್ ಹಾಗೂ ಡ್ರಾಪ್ ಮಾಡುವ ಶಾಲಾ ಬಸ್ ಸೇರಿದಂತೆ ಆಯುಧಗಳ ಪೂಜೆಯನ್ನು ಐಶ್ವರ್ಯ ಡಿಕೆಎಸ್ ಹೆಗ್ಡೆ ನೆರವೇರಿಸಿದರು. ಶಾಲಾ ಸಿಬ್ಬಂದಿಗಳು ಐಶ್ವರ್ಯ ಡಿಕೆಎಸ್ ಹೆಗ್ಡೆಗೆ ಸಾಥ್ ನೀಡಿದರು. ಬಳಿಕ ಬಸ್ ಸಿಬ್ಬಂದಿಗಳು, ಶಾಲಾ ಸಿಬ್ಬಂದಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಆಯುಧ ಪೂಜೆ ಸಂಭ್ರಮಾಚರಣೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. 

ಎಲ್ಲಾ ಸಿಬ್ಬಂದಿಗಳ ಜೊತೆ ಅಷ್ಟೇ ಅತ್ಮೀಯವಾಗಿರುವ ಐಶ್ವರ್ಯ ಡಿಕೆಎಸ್ ಹೆಗ್ಡೆ ಸರಳತೆಯನ್ನು ಜನರು ಕೊಂಡಾಡಿದ್ದಾರೆ. ಅತೀ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಮುನ್ನನಡೆಸುವ ಜವಾಬ್ದಾರಿ, ಪ್ರತಿಷ್ಠಿತ ಕುಟುಂಬ ಹಿನ್ನಲೆಯಿದ್ದರೂ ಐಶ್ವರ್ಯ ಸರಳತೆ ಮೆರೆದಿದ್ದಾರೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲರ ಜೊತೆ ಸಾಮಾನ್ಯರಂತೆ ಇರುವ ಐಶ್ವರ್ಯ ಅವರಿಗೆ ತಾಯಿ ಚಾಮುಂಡೇಶ್ವರಿ ತಾಯಿ ಕೃಪೆ ಸದಾ ಇರಲಿದೆ ಎಂದು ಹಲವರು ಆಶಿಸಿದ್ದಾರೆ. ಇದೇ ವೇಳೆ ಐಶ್ವರ್ಯ ಡಿಕೆಎಸ್ ಹೆಗ್ಡೆ ಸೀರೆ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಐಶ್ವರ್ಯ ಸೀರೆಯನ್ನು ಮೆಚ್ಚಿಕೊಂಡಿದ್ದಾರೆ.

Latest Videos

click me!