ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಈಗಾಗಲೇ ದೀಪಾವಳಿ ಹಬ್ಬಕ್ಕಾಗಿ ಆಹಾರ ಸಾಮಗ್ರಿ, ಹೊಸ ಬಟ್ಟೆ, ಮಣ್ಣಿನ ಹಣತೆಗಳ ಖರೀದಿ ಭರಾಟೆ ಜೋರಾಗಿದೆ. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ದೀಪಾವಳಿಯಂದು ಪಟಾಕಿ ಮಾರಾಟದ್ದೇ ಸದ್ದು ಜಾಸ್ತಿಯಾಗ್ತಿದೆ. ದೀಪಾವಳಿಗೆ ಪಟಾಕಿ ಸಿಡಿಸಬೇಕೋ ಬೇಡವೋ, ಹಸಿರು ಪಟಾಕಿ, ಶಬ್ದ ಮಾಲೀನ್ಯ ಹೀಗೆ ಪಟಾಕಿಗಳ ವಿಚಾರವಾಗಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ದೀಪಾವಳಿಗೆ ಮಾತ್ರ ಏಕೆ ಪಟಾಕಿ ಸಿಡಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
25
ದೀಪಾವಳಿಗೆ ಮಾತ್ರವಲ್ಲ, ಈ ಹಬ್ಬಗಳಲ್ಲೂ ಪಟಾಕಿ ಸಿಡಿಸಲಾಗುತ್ತೆ
ನಿಜವೆಂದರೆ ಹಿಂದೂಗಳು ದೀಪಾವಳಿ ಹಬ್ಬದಂದು ಪಾತ್ರ ಪಟಾಕಿ ಸಿಡಿಸಿವುದಿಲ್ಲ. ದೇಶದಲ್ಲಿ ಹಲವು ಧರ್ಮ, ಆಚರಣೆಗಳಂತಹ ವಿಶೇಷ ಸಂದರ್ಭಗಳಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತದೆ ಪಟಾಕಿ ಸಿಡಿಸುವಂಥ ಹಬ್ಬಗಳು ಯಾವವು ಎಂಬುದನ್ನು ಇಲ್ಲಿ ತಿಳಿಯೋಣ.
35
ಗುರು ಪರ್ವ್, ಕಾಳಿ ದೇವಿ ಪೂಜೆಯಲ್ಲೂ ಪಟಾಕಿ ಸಿಡಿಸಲಾಗುತ್ತೆ
ಪಟಾಕಿಗಳನ್ನು ದೀಪಾವಳಿಗೆ ಮಾತ್ರವಲ್ಲದೆ ಸಿಖ್ ಸಮುದಾಯದಲ್ಲಿ ಗುರುನಾನಕ್ ಜಯಂತಿ ಮಹತ್ವದ ಹಬ್ಬವಾಗಿದೆ. ಈ ವೇಳೆ ಸಿಖ್ ಜನರು ಗುರುದ್ವಾರದ ಬಳಿ ದೀಪಗಳಿಂದ ಅಲಂಕರಿಸುತ್ತಾರೆ. ರಾತ್ರಿ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
ಇದು ಬಿಹಾರ, ಜಾರ್ಖಂಡ್, ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಛಠ್ ಪೂಜೆಯ ಸಮಯದಲ್ಲೂ ಪಟಾಕಿಗಳನ್ನು ಸಿಡಿಸಲಾಗುತ್ತದೆ.ಈ ಹಬ್ಬದ ದಿನ ಉದಯಿಸುವ ಸೂರ್ಯನಿಗೆ ಬೆಳಗ್ಗೆ ಪೂಜೆ ಸಲ್ಲಿಸುತ್ತಾರೆ ನಂತರ ಸೂರ್ಯಸ್ತದ ವೇಳೆ ಪೂಜೆ ಮಾಡುತ್ತಾರೆ. ಕುಟುಂಬದೊಂದಿಗೆ ಆಚರಿಸುವ ಈ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಕಾಳಿದೇವಿ ಪೂಜೆ ಮಹತ್ವದ್ದಾಗಿ ಕಾಳಿ ಪೂಜೆಯ ವೇಳೆಯೂ ಪಟಾಕಿಗಳನ್ನು ಸಿಡಿಸುತ್ತಾರೆ.
ಕ್ರಿಸ್ಮಸ್, ಹೊಸ ವರ್ಷ, ಲೋಹ್ರಿ , ಮಕರ ಸಂಕ್ರಾಂತಿಯಲ್ಲೂ ಪಟಾಕಿ
ಪಟಾಕಿಗಳನ್ನು ದೀಪಾವಳಿ ಹಬ್ಬಕ್ಕಷ್ಟೇ ಅಲ್ಲದೆ ಕ್ರಿಸ್ಮಸ್, ನಂತರ ಬರುವ ಹೊಸ ವರ್ಷದ ಸೆಲೆಬ್ರೆಷನ್ಗೂ ಪಟಾಕಿ ಬೇಕೇಬೇಕು. ಅಂದು ಮಧ್ಯರಾತ್ರಿಯಲ್ಲೇ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ.
ಬೆಂಗಳೂರು ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದು ಕಾಣಬಹುದು. ಇನ್ನು ಕ್ರಿಸ್ಮಸ್ ದಿನಕ್ಕೆ ಮುಂಚೆಯೇ ಡಿಸೆಂಬರ್ 24 ರ ರಾತ್ರಿಯಂದು ಚರ್ಚ್ಗಳು, ಮನೆಗಳೆ ದೀಪಾಲಂಕರ ಮಾಡಲಾಗುತ್ತದೆ. ಆದರೆ ಡಿಸೆಂಬರ್ 31 ರ ರಾತ್ರಿಯಂದು ಜನರು ಹೊಸ ವರ್ಷಕ್ಕಾಗಿ ಕಾಯುತ್ತಾ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ.
ಮಧ್ಯರಾತ್ರಿಯ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಜನರು ಪಟಾಕಿ ಸಿಡಿಸುತ್ತಾರೆ. ಅದೇ ರೀತಿ ಲೋಹ್ರಿಯ ವಿಶೇಷ ಆಚರಣೆಯಂದು ಪಂಜಾ, ಉತ್ತರ ಭಾರತದ ಅನೇಕ ಭಾಗಗಳಲ್ಲಿ ಜನರು ದೀಪಾಲಂಕಾರ ಮಾಡಿ ಆಚರಿಸುತ್ತಾರೆ. ಇನ್ನು ಜನವರಿಯಲ್ಲಿ ಚುಮುಚುಮು ಚಳಿಯಲ್ಲೇ ಬರುವ ಮಕರ ಸಂಕ್ರಾಂತಿಯಂದು ಹಿಂದೂಗಳು ಗಾಳಿಪಟ ಹಾರಿಸುವುದು ಜನಪ್ರಿಯ ಚಟುವಟಿಕೆಯಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಪಟಾಕಿ ಸಿಡಿಸಲಾಗುತ್ತೆ.
55
ಗಣೇಶ ಚತುರ್ಥಿಯಂದು ಪಟಾಕಿ ಅಬ್ಬರ
ಹಿಂದೂಗಳು ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲದೆ ಗಣೇಶ ಚತುರ್ಥಿಯಂದು ಕೂಡ ಪಟಾಕಿ ಸಿಡಿಸುತ್ತಾರೆ. ಅಲ್ಲದೆ ದಸರಾ ವೇಳೆಯೂ ಪಟಾಕಿ ಬೇಕೇಬೇಕು. ಮದುವೆ ಇರಲಿ, ಚುನಾವಣೆ ಗೆಲುವು ಇರಲಿ, ಸಾಮಾಜಿಕ ನಾಟಕಗಳಿರಲ್ಲಿ ಪ್ರತಿಯೊಂದು ಸಂದರ್ಭದಲ್ಲಿ ಜನರು ಸಂಭ್ರಮಿಸಲು ಪಟಾಕಿಗಳನ್ನು ಸಿಡಿಸುತ್ತಾರೆ. ಆದ್ರೂ ಪಟಾಕಿಗಳಿಂದ ಪರಿಸರಕ್ಕೂ ನಮ್ಮ ಆರೋಗ್ಯಕ್ಕೆ ಸಮಸ್ಯೆಯೇ ಹೆಚ್ಚು. ಪಟಾಕಿ ಸಿಡಿಸುವುದರಿಂದ ಮಕ್ಕಳು ಹೆದರುತ್ತಾರೆ, ಪ್ರಾಣಿಗಳು ಭಯಭೀತಗೊಳ್ಳುತ್ತವೆ, ಇನ್ನು ವೃದ್ಧರು, ಉಸಿರಾಟ ತೊಂದರೆ ಇರುವವರು ಹೆಚ್ಚು ತೊಂದರೆಗೊಳಗಾಗುತ್ತಾರೆ. ಹೀಗಾಗಿ ದೀಪಾವಳಿಯಷ್ಟೇ ಅಲ್ಲದೆ ಯಾವುದೇ ಹಬ್ಬಗಳಿಗೂ ಪಟಾಕಿ ಸಿಡಿಸುವ ಮುನ್ನ ಇತರ ಇತರರಿಗೆ ತೊಂದರೆಯಾಗದಂತೆ, ಜೊತೆಗೆ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಬಹಳ ಮುಖ್ಯ