ಅಯೋಧ್ಯಾ ಟ್ರಸ್ಟ್‌ನಿಂದ 'ಆರತಿ ಪಾಸ್' ಸೇವೆಯನ್ನು ಪುನರಾರಂಭಿಸಲಾಗಿದೆ, ‘ಸುಗಮ ದರ್ಶನ’ ಪಾಸ್ ಹೊಂದಿರುವವರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ. 'ಸುಗಮ ದರ್ಶನ'ಕ್ಕೆ ತಲಾ ಎರಡು ಗಂಟೆಗಳ ಕಾಲ ಆರು ಸ್ಲಾಟ್‌ಗಳನ್ನು ರಚಿಸಲಾಗಿದೆ.
ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮಾತನಾಡಿ, ಪಾಸ್ ಹೊಂದಿರುವವರ ದರ್ಶನವನ್ನು ಸುಗಮಗೊಳಿಸಲು ದೇವಾಲಯದ ಸಂಕೀರ್ಣದಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. “ಪ್ರಸ್ತುತ ನಾವು ಪ್ರತಿ ಬಾರಿ ಸ್ಲಾಟ್‌ಗೆ 300 ಪಾಸ್‌ಗಳನ್ನು ನೀಡುತ್ತಿದ್ದೇವೆ. ಅದೇ ರೀತಿ ದಿನದಲ್ಲಿ ಮೂರು ಆರತಿಗೆ ಪಾಸ್ ಬುಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.
ದೇವರ ಆರತಿ ದರ್ಶನವನ್ನು ದಿನಕ್ಕೆ ಮೂರು ಬಾರಿ ನೀಡಲಾಗುತ್ತಿದೆ (ಬೆಳಿಗ್ಗೆ 4 ಗಂಟೆಗೆ ಮಂಗಳ ಆರತಿ, 6.15 ಕ್ಕೆ ಶೃಂಗಾರ ಆರತಿ ಮತ್ತು ರಾತ್ರಿ 10 ಗಂಟೆಗೆ ಶಯನ ಆರತಿ)
ಪ್ರತಿ ಸ್ಲಾಟ್‌ಗೆ 100 ಪಾಸ್‌ಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಲಾಟ್ ಅನ್ನು ಭಕ್ತರು ಮುಂದಿನ 15 ದಿನಗಳವರೆಗೆ ಕಾಯ್ದಿರಿಸಿದ್ದಾರೆ.
ಸುಗಮ ದರ್ಶನವು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ (ಬೆಳಿಗ್ಗೆ 7-9, 9-11, 1-3, 3-5, ಸಂಜೆ 5-7 ಮತ್ತು 7-9 ರವರೆಗೆ) ಸಾಧ್ಯ. ವಯಸ್ಸಾದ ನಾಗರಿಕರು ಮತ್ತು ತಾಂತ್ರಿಕ ಪರಿಣತರಲ್ಲದ ವ್ಯಕ್ತಿಗಳು ದೇವಾಲಯದ ಸಂಕೀರ್ಣದ ಬಳಿ ಇರುವ ಟ್ರಸ್ಟ್ ಕಚೇರಿಯಲ್ಲಿ ಪಾಸ್‌ಗಳನ್ನು ಪಡೆಯಬಹುದು.
ಟ್ರಸ್ಟ್ ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಾಗಿ ಕೋಟಾವನ್ನು ರಚಿಸಿದೆ. ಪಾಸ್ ಸೇವೆಯನ್ನು ಪಡೆಯುವ ಭಕ್ತರು ಸ್ಲಾಟ್ ಅನ್ನು ಕಾಯ್ದಿರಿಸಲು ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ಒದಗಿಸಬೇಕಾಗುತ್ತದೆ ಮತ್ತು ಅವರ ಭೇಟಿಯ ಸಮಯದಲ್ಲಿ ಐಡಿಯನ್ನು ಕೊಂಡೊಯ್ಯಬೇಕಾಗುತ್ತದೆ.