ಚಿಕ್ಕಮಗಳೂರು: ದತ್ತಪಾದುಕೆ ದರ್ಶನ ಪಡೆದ ಸಾವಿರಾರು ಭಕ್ತರು, ದತ್ತಜಯಂತಿಗೆ ಶಾಂತಿಯುತ ತೆರೆ!

First Published | Dec 14, 2024, 6:48 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.14):  ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ ಇಂದು(ಶನಿವಾರ) ಶಾಂತಿಯುತ ತೆರೆಬಿದ್ದಿದೆ. ಮಾಗಿಯ ಚಳಿಯಲ್ಲೂ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು. 

Devotees Attended the DattaJayanti in Chikkamagaluru grg

ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ ಹತ್ರತ್ರ 15 ಸಾವಿರ ದತ್ತಭಕ್ತರು ಪಾದುಕೆ ದರ್ಶನ ಪಡೆದ್ರು. ಆದ್ರೆ, ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕು. ಗೋರಿಗಳನ್ನ ಸ್ಥಳಾಂತರಿಸಬೇಕು ಎಂಬ ಆಕ್ರೋಶದ ಘೋಷಣೆ ಮಾತ್ರ ಹಾಗೇ ಇತ್ತು. ಈ ಮಧ್ಯೆ ಮೊದಲ ಬಾರಿಗೆ ಶ್ರೀರಾಮಸೇನೆ-ಭಜರಂಗದಳ-ವಿಶ್ವಹಿಂದೂ ಪರಿಷದ್ ನಾಯಕರು ಒಟ್ಟಿಗೆ ಸೇರಿ ಒಗ್ಗಟ್ಟಿನ ಮಂತ್ರ ಪಠಿಸಿದ್ದು ವಿಶೇಷವಾಗಿತ್ತು.

Devotees Attended the DattaJayanti in Chikkamagaluru grg

ಕಳೆದ 9 ದಿನಗಳಿಂದ ವೃತ್ತಾಚಾರಣೆಯೊಂದಿಗೆ ನಡೆದ ದತ್ತಜಯಂತಿ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಇಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಸಾವಿರಾರು ಮಾಲಾಧಾರಿಗಳು ಆಗಮಿಸಿದ್ರು. ಮಳೆ-ಮಂಜು ಅತಂಕವಿದ್ದರೂ ನಿರೀಕ್ಷೆಗೂ ಮೀರಿಯೇ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆದಿದ್ದಾರೆ. 

Tap to resize

ಸಾವಿರಾರು ದತ್ತಭಕ್ತರು ಸರತಿ ಸಾಲಿನಲ್ಲಿ ನಿಂತು ದತ್ತಭಜನೆಯೊಂದಿಗೆ ದತ್ತಾತ್ರೇಯ ಸ್ವಾಮಿಯ ದರ್ಶನ ಪಡೆದ್ರು. ಇನ್ನು ಸಿ.ಟಿ.ರವಿ ಹೊನ್ನಮ್ಮ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ್ರು. ಆದರೆ, ಬಂದಂತಹಾ ಸಾವಿರಾರು ದತ್ತಭಕ್ತರ ಒಕ್ಕೊರಲ ಕೂಗು ಒಂದೇ ಆಗಿತ್ತು.

ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ. ದತ್ತಪೀಠ ಹಿಂದೂಗಳಿಗೆ ಸೇರಬೇಕು. ನಾವು ದತ್ತಪೀಠಿವನ್ನ ಪಡೆದೇ ತೀರುತ್ತೇವೆ ಎಂದು ಘೋಷಣೆಯೊಂದಿಗೆ ಆಗ್ರಹಿಸಿದರು. ಆದ್ರೆ, ನಾಲ್ಕು ಸಾವಿರ ಪೊಲೀಸರು ಹೆಜ್ಜೆಗೊಬ್ಬರಂತೆ ನಿಂತಿದ್ರಿಂದ ಹಾಟ್ ಕಾರ್ಯಕ್ರಮ ಕೂಲಾಗಿ ಮುಗಿದಿದ್ದು, ಪೊಲೀಸರು ಹಾಗೂ ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಇನ್ನು ದತ್ತಜಯಂತಿ ಅಂಗವಾಗಿ ದತ್ತಗುಹೆ ಸಮೀಪವೇ ಹೋಮ-ಹವನ ನಡೆಸಲಾಯ್ತು. ಗುಹೆ ಸಮೀಪವೇ ಗಣಪತಿ ಹೋಮ, ದತ್ತ ಹೋಮವನ್ನ ನಡೆಸಿದ್ರು. ಪೂರ್ಣಾಹುತಿಯಲ್ಲಿ ವಿವಿಧ ಮಠದ ಸ್ವಾಮಿಗಳು, ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಿ.ಟಿ.ರವಿ ಹಾಗೂ ವಿಎಚ್‌ಪಿ, ಬಜರಂಗದಳದ ಪ್ರಮುಖರು ಪಾಲ್ಗೊಂಡಿದ್ದರು. 

ಈ ಬಾರಿ ವಿ.ಎಚ್.ಪಿ ಬಜರಂಗದಳದ ದತ್ತಜಯಂತಿಯಲ್ಲಿ ಶ್ರೀರಾಮಸೇನೆಯೂ ಭಾಗಿಯಾಗೋ ಮೂಲಕ ನಾವೆಲ್ಲಾ ಒಂದೇ ಅನ್ನೋ ಸಂದೇಶ ರವಾನಿಸಿದ್ರು. ಮುಂದಿನ ವರ್ಷದಿಂದ ಪ್ರತ್ಯೇಕ ಮಾಲಾಧಾರಣೆ ನಡೆಸಿ ಹೋರಾಟ ನಡೆಸೋ ಬದಲು ಒಂದಾಗಿಯೇ ನಡೆಸುತ್ತೇವೆ. ಈ ಬಗ್ಗೆ ಎಲ್ಲರ ಜೊತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದರು. 

ದತ್ತಪೀಠದ ಹೋರಾಟ ಒಂದೇ ಆದ್ರು ಇಬ್ಭಾಗವಾಗಿದ್ದ ಸಂಘಟನೆಗಳು ಇನ್ನು ಮುಂದೆ ಒಂದೇ ಎನ್ನೋ ಸಂದೇಶ ಮತ್ತೊಮ್ಮೆ ರವಾನಿಸಿದ್ರು.ಒಟ್ಟಾರೆ 4000ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಮೂರು ದಿನದ ಕಾರ್ಯಕ್ರಮಗಳು ಶಾಂತಿಯುತವಾಗಿ ತೆರೆಕಂಡಿದೆ. 

ಅಂತೂ-ಇಂತೂ ಬಿಗಿ ಪೋಲಿಸ್ ಭದ್ರೆತೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸುಮಾರು 15 ಸಾವಿರಕ್ಕೂ ಅಧಿಕ ದತ್ತಭಕ್ತರು ಪಾದುಕೆ ದರ್ಶನ ಪಡೆದು, ದತ್ತಪೀಠ ಹಿಂದೂಗಳ ಪೀಠ ಎಂದು ಆಗ್ರಹಿಸಿದ್ರು.

Latest Videos

click me!