ಹಿರಿಯರು ರಾತ್ರಿ ತಲೆ ಬಾಚಬೇಡಿ ಅಂತ ಹೇಳೋದು ಯಾಕೇನು ಗೊತ್ತಾ?

First Published | Aug 4, 2021, 3:29 PM IST

ಧರ್ಮ-ಪುರಾಣ, ಜ್ಯೋತಿಷ್ ಶಾಸ್ತ್ರ, ವಾಸ್ತು ಶಾಸ್ತ್ರ ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಜೀವನಶೈಲಿಯ ಅತ್ಯುತ್ತಮ ಮಾರ್ಗಗಳನ್ನು ತಿಳಿಸುತ್ತವೆ. ಇವುಗಳಲ್ಲಿ, ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಇವುಗಳಲ್ಲಿ ನಮ್ಮ ಮನೆ-ಮನಗಳ ಬಗ್ಗೆ ಹತ್ತು ಹಲವು ವಿಷಯಗಳನ್ನು ತಿಳಿಸಲಾಗುತ್ತದೆ. ಇದರಲ್ಲಿ, ಮಹಿಳೆಯರ  ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಸಹ ಹೇಳಲಾಗಿದೆ. ಅದರಲ್ಲಿ ಕೂದಲಿನ ಕುರಿತು ಇದೆ. 

ಮಹಿಳೆಯ ಶೃಂಗಾರದ ಬಗ್ಗೆ ಹೇಳುವಾಗ ಕೇಶ ಶೃಂಗಾರವೂ ಅದರಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ತಲೆ ಬಾಚಿಕೊಳ್ಳುವಾಗ ಮಾಡುವ ಕೆಲವು ಸಣ್ಣ-ಸಣ್ಣ ತಪ್ಪುಗಳು ಭಾರೀ ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ನಿಮಗೆ ತಿಳಿದಿದೆಯೇ?

ತಲೆ ಬಾಚುವಾಗ ಇಂತಹ ತಪ್ಪುಗಳನ್ನು ಎಂದಿಗೂ ಮಾಡಲೇಬಾರದು:
ಅತ್ಯಂತ ಮುಖ್ಯವಾದ ವಿಷಯವೆಂದರೆ ಮಹಿಳೆಯರು ಎಂದಿಗೂ ಕೂಡ ನಿಂತು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು. ಮಹಿಳೆಯರು ಅದರಲ್ಲೂ ವಿಶೇಷವಾಗಿ ವಿವಾಹಿತ ಮಹಿಳೆಯರು ಕುಳಿತುಕೊಂಡೇ ತಲೆ ಬಾಚಿಕೊಳ್ಳಬೇಕು. ಇಲ್ಲದಿದ್ದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.

Latest Videos


ಮನೆಯ ನಿತ್ಯದ ಕೆಲಸದಲ್ಲಿ ಸದಾ ಬ್ಯುಸಿ ಆಗಿರುವ ಮಹಿಳೆಯರು ಸಾಮಾನ್ಯವಾಗಿ ಜನರು ಸಂಜೆ ವೇಳೆಗೆ ತಲೆ ಬಾಚಿಕೊಳ್ಳುತ್ತಾರೆ. ಆದರೆ ಸೂರ್ಯಾಸ್ತದ ನಂತರ ಮಹಿಳೆಯರು ತಲೆ ಬಾಚುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.  

ಸಂಜೆಯ ಸಮಯದಲ್ಲಿ ಋಣಾತ್ಮಕತೆ ಹೆಚ್ಚುತ್ತದೆ. ಮಂತ್ರ-ತಂತ್ರಗಳಲ್ಲಿ ಈ ಸಮಯವನ್ನು ನಕಾರಾತ್ಮಕ ಶಕ್ತಿಗಳ ಜಾಗೃತಿಯ ಸಮಯ ಎಂದೂ ಕರೆಯುತ್ತಾರೆ. ಅದೇ ರೀತಿ, ರಾತ್ರಿ ಮಲಗುವಾಗ ಕೂದಲನ್ನು ತೆರೆದು ಮಲಗುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ವಿಭಿನ್ನ ಕೇಶವಿನ್ಯಾಸ ಮಾಡುವ ಅನ್ವೇಷಣೆಯಲ್ಲಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ವಿಭಿನ್ನ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಇದರ ಬಗ್ಗೆ ಜಾಗ್ರತೆ ವಹಿಸಬೇಕು. 

ಕೇಶ ವಿನ್ಯಾಸದಲ್ಲಿ ಬಳಸುವ ಅಲಂಕಾರಿಕ ವಸ್ತುಗಳು ಯಾವಾಗಲು ಸ್ಪಷ್ಟವಾಗಿ, ನೇರವಾಗಿ ತಲೆಯ ಮಧ್ಯದಲ್ಲಿರಬೇಕು ಎಂದು ನೆನಪಿನಲ್ಲಿಡಿ. ಇಲ್ಲದಿದ್ದರೆ ಅದು ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ.

ಇದರ ಹೊರತಾಗಿ, ಕೂದಲಿಗೆ ಅಲಂಕಾರಿಕ ವಸ್ತುಗಳನ್ನು ಹಾಕುವಾಗ ಯಾವಾಗಲೂ ಮುಖ ಉತ್ತರಾಭಿಮುಖವಾಗಿರಲಿ. ಇದರಿಂದ ಒಳ್ಳೆಯದಾಗುತ್ತದೆ. 

ಎಂದಿಗೂ ಎರಡೂ ಕೈಗಳಿಂದ ತಲೆಯನ್ನು ಮುಟ್ಟಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತದೆ. ಇದು ಮನೆಯಲ್ಲಿ ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

click me!