ಚಂದ್ರಗ್ರಹಣ 2024; ನಕಾರಾತ್ಮಕತೆಯಿಂದ ರಕ್ಷಣೆ ನೀಡುವ 4 ವಸ್ತುಗಳಿವು..

First Published | Mar 3, 2024, 9:50 AM IST

ಭಾರತದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಬಗ್ಗೆ ಹಲವು ರೀತಿಯ ನಂಬಿಕೆಗಳಿವೆ. ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಕೆಲವು ಸರಳ ವಿಷಯಗಳು ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಅವು ಯಾವುವು?

ಗ್ರಹಣವು ಖಗೋಳ ವಿದ್ಯಮಾನವೇ ಆದರೂ ಅದಾದ ಸಂದರ್ಭದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪುತ್ತದೆ. ಚಂದ್ರ ಮತ್ತು ಸೌರ ಗ್ರಹಣಗಳು ಚಂದ್ರ, ಭೂಮಿ ಮತ್ತು ಸೂರ್ಯನ ಸ್ಥಾನಗಳಿಂದ ಉಂಟಾಗುತ್ತವೆ.

 ಧರ್ಮ ಮತ್ತು ಜ್ಯೋತಿಷ್ಯದಲ್ಲಿ, ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. 2024 ರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ.

Tap to resize

ಈ ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ 25ರಂದು ಸಂಭವಿಸಲಿದೆ. ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18ರಂದು ನಡೆಯಲಿದೆ. ಆದರೆ 2024 ರ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 8 ರಂದು ಮತ್ತು ಎರಡನೇ ಸೂರ್ಯಗ್ರಹಣವು ಅಕ್ಟೋಬರ್‌ನಲ್ಲಿ ನಡೆಯಲಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಭೂಮಿಯ ಮೇಲೆ ರಾಹುವಿನ ಕೋಪ ಹೆಚ್ಚಾಗುತ್ತದೆ.

ಗ್ರಹಣದ ಸಮಯದಲ್ಲಿ ಹಲವು ನಿಯಮಗಳನ್ನು ಪಾಲಿಸಲಾಗುತ್ತದೆ. ಅದರ ಅನಪೇಕ್ಷಿತ ಪರಿಣಾಮಗಳನ್ನು ತಪ್ಪಿಸಲು, ಕೆಲವು ವಸ್ತುಗಳನ್ನು ಬಳಸುವುದು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ.

ಗ್ರಹಣದಲ್ಲಿ ತುಳಸಿಯನ್ನು ಬಳಸಿ
ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ತುಳಸಿ ಎಲೆಗಳನ್ನು ಆಹಾರದಲ್ಲಿ ಸೇರಿಸಬೇಕು. ಇದರಿಂದ ಆಹಾರವು ಅಶುದ್ಧವಾಗುವುದಿಲ್ಲ ಮತ್ತು ಗ್ರಹಣದ ನಂತರ ತಿನ್ನಬಹುದು ಎಂದು ನಂಬಲಾಗಿದೆ. ತುಳಸಿ ಎಲೆಗಳನ್ನು ಆಹಾರಕ್ಕೆ ಸೇರಿಸುವುದರಿಂದ ಗ್ರಹಣದ ಋಣಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ..

ದೂರ್ವಾ ಹುಲ್ಲು
ಗ್ರಹಣದ ಸಮಯದಲ್ಲಿ ದೂರ್ವೆಯನ್ನು ಕೂಡ ಬಳಸಬಹುದು. ಹಿಂದೂ ಧರ್ಮದಲ್ಲಿ, ದೂರ್ವೆಯನ್ನು ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ದೂರ್ವಾ ಹುಲ್ಲು ಗ್ರಹಣದ ಅಶುಭ ಪರಿಣಾಮಗಳಿಂದ ರಕ್ಷಿಸುತ್ತದೆ. ಗ್ರಹಣದ ಮೊದಲು ಆಹಾರ ಮತ್ತು ನೀರಿನ ಪದಾರ್ಥಗಳಲ್ಲಿ ದೂರ್ವೆ ಇಡಲಾಗುತ್ತದೆ. ದೂರ್ವೆ ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ.

ಎಳ್ಳು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣದ ಸಮಯದಲ್ಲಿ ಅನೇಕ ಅಶುಭ ಮತ್ತು ದುಷ್ಟ ಶಕ್ತಿಗಳು ಜಾಗೃತಗೊಳ್ಳುತ್ತವೆ. ಇದರ ದುಷ್ಪರಿಣಾಮಗಳನ್ನು ತಪ್ಪಿಸಲು ಜನರು ಗ್ರಹಣದ ಸಮಯದಲ್ಲಿ ದಾನವನ್ನೂ ಮಾಡುತ್ತಾರೆ. ಎಳ್ಳು ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಗ್ರಹಣದ ಮೊದಲು ಎಳ್ಳನ್ನು ಖರೀದಿಸಿ ಇಟ್ಟುಕೊಳ್ಳಿ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ, ಪೂಜೆಯ ನಂತರ ಈ ಎಳ್ಳನ್ನು ನಿರ್ಗತಿಕರಿಗೆ ದಾನ ಮಾಡಿ. ಗ್ರಹಣದ ನಂತರ ಎಳ್ಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ರಾಹು ಮತ್ತು ಕೇತುಗಳು ಶಾಂತವಾಗಿರುತ್ತವೆ.

ಗ್ರಹಣದಲ್ಲಿ ಗಂಗಾಜಲ ಬಳಕೆ
ಸನಾತನ ಧರ್ಮದಲ್ಲಿ, ಗಂಗಾಜಲವನ್ನು ಅತ್ಯಂತ ಪವಿತ್ರ ಮತ್ತು ಪುಣ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಗಂಗಾಜಲದ ಬಳಕೆ ಅತ್ಯಂತ ಮಂಗಳಕರ. ಗ್ರಹಣದ ನಂತರ ಗಂಗಾಜಲದಿಂದ ಸ್ನಾನ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಮತ್ತು ನಕಾರಾತ್ಮಕ ಶಕ್ತಿಯೂ ದೂರವಾಗುತ್ತದೆ. ಗ್ರಹಣ ಮುಗಿದ ನಂತರ ಇಡೀ ಮನೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು.

Latest Videos

click me!